Aadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ

Exemption In Linking Aadhaar and PAN: ಕೆಲ ರಾಜ್ಯಗಳ ನಿವಾಸಿಗಳು ಸೇರಿದಂತೆ ಹಲವರಿಗೆ ಆಧಾರ್ ನಂಬರ್ ಮತ್ತು ಪಾನ್ ನಂಬರ್ ಲಿಂಕ್ ಮಾಡುವುದರಿಂದ ವಿನಾಯಿತಿ ಇದೆ. ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ನೋಟಿಫಿಕೇಶನ್​ನ ವಿವರ ನೋಡಿ...

Aadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ
ಆಧಾರ್ ಪಾನ್ ಲಿಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2023 | 6:33 PM

ಆಧಾರ್ ಜೊತೆ ಪಾನ್ ನಂಬರ್ ಜೋಡಿಸಬೇಕೆಂದು (Aadhaar PAN Linking) ಪ್ರತಿಯೊಬ್ಬರಿಗೂ ಸರ್ಕಾರ ಮನವಿ ಮಾಡುತ್ತಲೇ ಇದೆ. ಹಲವು ಬಾರಿ ಡೆಡ್​ಲೈನ್ ವಿಸ್ತರಿಸುತ್ತಾ ಬಂದಿದೆ. ಇದೀಗ ಮಾರ್ಚ್ 31ಕ್ಕೆ ಅಂತಿಮ ಗಡುವು ನೀಡಲಾಗಿದೆ. ಇದೇ ವೇಳೆ ಕೆಲವರಿಗೆ ಮಾತ್ರ ಆಧಾರ್ ಮತ್ತು ಪಾನ್ ಜೋಡಣೆಯಿಂದ ವಿನಾಯಿತಿ (Exemption To Link Aadhaar with PAN) ನೀಡಲಾಗಿದೆ. ಇವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆಧಾರ್ ಪಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

1961ರ ಆದಾಯ ತೆರಿಗೆ ಕಾಯ್ದೆ (IT Act) ಪ್ರಕಾರ, ವಿನಾಯಿತಿ ವಿಭಾಗಕ್ಕೆ ಬಾರದ ಎಲ್ಲಾ ಪಾನ್ ಕಾರ್ಡ್​ದಾರರು ತಮ್ಮ ಪಾನ್ ಮತ್ತು ಆಧಾರ್ ಅನ್ನು 2023 ಮಾರ್ಚ್ 31ರ ಒಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಆಗದ ಪಾನ್ ನಂಬರ್​ಗಳು ಏಪ್ರಿಲ್ 1ರಿಂದ ನಿಷ್ಕ್ರಿಯಗೊಳ್ಳುತ್ತವೆ ಎಂದು ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಟ್ವೀಟ್ ಮಾಡಿತ್ತು.

ಹಾಗಾದರೆ, ವಿನಾಯಿತಿ ವಿಭಾಗ ಅಥವಾ ಎಕ್ಸೆಂಪ್ಟ್ ಕೆಟಗರಿಯಲ್ಲಿರುವವರು ಯಾರು? 2017ರ ಮೇ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಹೊರಡಿಸಿದ ಅಧಿಸೂಚನೆಯಲ್ಲಿ ಮಾಹಿತಿ ಇದೆ.

ಇದನ್ನೂ ಓದಿNBFC: ಶ್ರೀರಾಮ್ ಕ್ಯಾಪಿಟಲ್ ಸೇರಿದಂತೆ 17 ಎನ್​ಬಿಎಫ್​ಸಿಗಳ ಲೈಸೆನ್ಸ್ ರದ್ದು; ಇಲ್ಲಿದೆ ಪಟ್ಟಿ

ಪಾನ್ಆಧಾರ್ ಜೋಡಣೆಯಿಂದ ವಿನಾಯಿತಿ ಇರುವವರು:

  • ಅಸ್ಸಾಂ, ಮೇಘಾಲಯ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ವಾಸಿಸುತ್ತಿರುವವರು
  • 1961ರ ಆದಾಯ ತೆರಿಗೆ ಕಾಯ್ದೆ ಪ್ರಕಾರ ಅನಿವಾಸಿಗಳು
  • ಹಿಂದಿನ ವರ್ಷದಲ್ಲಿ 80 ಅಥವಾ ಅದಕ್ಕಿಂತ ಮೇಲ್ಪಟ್ಟ ವರ್ಷಗಳ ವಯೋವೃದ್ಧರು
  • ಭಾರತೀಯ ನಾಗರಿಕರಲ್ಲದವರು

ಕುತೂಹಲವೆಂದರೆ ಈ ಮೇಲಿನ ಪಟ್ಟಿಯಲ್ಲಿರುವ ವ್ಯಕ್ತಿಗಳು ಸ್ವಯಂ ಇಚ್ಛೆಯಿಂದ ತಮ್ಮ ಪಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ಲಿಂಕ್ ಮಾಡಬೇಕೆಂದರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನು, ಆಧಾರ್ ಕಾರ್ಡ್ ಮತ್ತು ಪಾನ್ ನಂಬರ್ ಜೋಡಣೆಯಿಂದ ಕೊಡಲಾಗಿರುವ ವಿನಾಯಿತಿ ಸೌಲಭ್ಯವು ಖಾಯಂ ಅಲ್ಲ. ಸರ್ಕಾರ ಈ ಪಟ್ಟಿಯನ್ನು ಪರಿಷ್ಕರಿಸಬಹುದು, ಅಥವಾ ಪುನರಾವಲೋಕಿಸಬಹುದು.

ಇದನ್ನೂ ಓದಿELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ?

ಈಗ ಆಧಾರ್ ನಂಬರ್ ಮತ್ತು ಪಾನ್ ನಂಬರ್ ಲಿಂಕ್ ಮಾಡುವ ಕೆಲಸ ಬಹಳ ಸುಲಭವಾಗಿದೆ. ಆನ್​ಲೈನ್ ಮೂಲಕವಾದರೂ ಮಾಡಬಹುದು, ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಆಫ್​ಲೈನ್ ಮೂಲಕವಾದರೂ ಮಾಡಬಹುದು. ಅಥವಾ ಎಸ್ಸೆಮ್ಮೆಸ್ ಮೂಲಕ ಇನ್ನೂ ಆರಾಮವಾಗಿ ಈ ಜೋಡಣೆ ಮಾಡಬಹುದು.

ಆನ್​ಲೈನ್ ಮೂಲಕ: ಇನ್ಕಂ ಟ್ಯಾಕ್ಸ್ ಇ ಫೈಲಿಂಗ್ ವೆಬ್​ಸೈಟ್​ಗೆ ಹೋಗಿ ಪಾನ್ ಮತ್ತು ಆಧಾರ್ ನಂಬರ್ ಅನ್ನು ಜೋಡಿಸಲು ಅವಕಾಶ ಇದೆ. ಅಥವಾ ಇನ್ಕಂ ಟ್ಯಾಕ್ಸ್ ಪೋರ್ಟಲ್​ಗೆ ಹೋಗಿಯೂ ಮಾಡಬಹುದು. ಪೋರ್ಟಲ್ ಮುಖ್ಯಪುಟದ ಎಡಬದಿಯಲ್ಲಿರುವ ಕಾಲಂನಲ್ಲಿ ಲಿಂಕ್ ಆಧಾರ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿದರೆ ಪಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ಭರ್ತಿ ಮಾಡಿ ಲಿಂಕ್ ಮಾಡಬಹುದು.

ಎಸ್ಸೆಮ್ಮೆಸ್: ಮೊಬೈಲ್​ನಲ್ಲಿ ಎಸ್ಸೆಮ್ಮೆಸ್ ಕಳುಹಿಸುವ ಮೂಲಕವೂ ಪಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು. ಮೆಸೇಜ್​ನಲ್ಲಿ UIDPAN ಹಾಗು 12 ಅಂಕಿಗಳ ಆಧಾರ್ ನಂಬರ್ ಮತ್ತು 10 ಅಂಕಿಯ ಪಾನ್ ನಂಬರ್ ಅನ್ನು ಟೈಪಿಸಿ 567678 ಅಥವಾ 56161 ಸಂಖ್ಯೆಗೆ ಮೆಸೇಜ್ ಕಳುಹಿಸಬೇಕು. ಸಂದೇಶದ ಸ್ಯಾಂಪಲ್: UIDPAN <space> <12 digit Aadhaar number> <10 digit PAN>

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಆಫ್​ಲೈನ್ ಮೂಲಕ: ಯಾವುದೇ ಪಾನ್ ಸರ್ವಿಸ್ ಸೆಂಟರ್ ಅಥವಾ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿಯೂ ನಾವು ಪಾನ್ ಮತ್ತು ಆಧಾರ್ ನಂಬರ್​ಗಳನ್ನು ಲಿಂಕ್ ಮಾಡಬಹುದು.

ಗಡುವಿನೊಳಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

ಆಧಾರ್ ಮತ್ತು ಪಾನ್ ನಂಬರ್ ಜೋಡಣೆಗೆ ಮಾರ್ಚ್ 31ಕ್ಕೆ ಅಂತಿಮ ವಾಯಿದೆ ಕೊಡಲಾಗಿದೆ. ಅಷ್ಟರೊಳಗೆ ಮಾಡದಿದ್ದರೆ ಪಾನ್ ನಂಬರ್ ನಿಷ್ಕ್ರಿಯಗೊಳ್ಳುತ್ತದೆ. ಆ ದಿನಾಂಕದ ಬಳಿಕ ನೀವು ಲಿಂಕ್ ಮಾಡಬಹುದಾದರೂ ಅದಕ್ಕೆ ದೊಡ್ಡ ಮೊತ್ತದ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ನಿಷ್ಕ್ರಿಯಗೊಂಡಿರುವ ಪಾನ್ ನಂಬರ್ ಅನ್ನು ನೀವು ಯಾವುದಾದರೂ ವಹಿವಾಟಿನಲ್ಲಿ ಬಳಕೆ ಮಾಡಿದರೆ 10 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಕೆಲ ಸಂದರ್ಭಗಳಲ್ಲಿ ಜೈಲು ಶಿಕ್ಷೆಯೂ ಆಗಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Fri, 10 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ