AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex Crash: ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತ; ಎರಡು ದಿನದಿಂದ ಭಾರತದ ಷೇರುಪೇಟೆ ಅಲುಗಾಡಲು ಏನು ಕಾರಣ? ಕುಸಿತ ಕಂಡ ಪ್ರಮುಖ ಷೇರುಗಳ್ಯಾವುವು?

Reasons For Crash In Indian Stock Market: ಭಾರತದಲ್ಲಿ ಎರಡು ದಿನದಿಂದ ಷೇರುಪೇಟೆ ಹಿನ್ನಡೆ ಕಾಣಲು ಜಾಗತಿಕ ಮಾರುಕಟ್ಟೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಡಾಲರ್​ನ ಬಲ ಕಡಿಮೆ ಆಗುತ್ತಿದ್ದರೂ ಹೂಡಿಕೆದಾರರು ಡಾಲರ್ ಬಿಟ್ಟು ಈಕ್ವಿಟಿ ಮಾರುಕಟ್ಟೆಗೆ ಬರಲು ಇನ್ನೂ ಸಿದ್ಧರಾಗಿಲ್ಲ.

Sensex Crash: ಸೆನ್ಸೆಕ್ಸ್, ನಿಫ್ಟಿ ಮಹಾ ಕುಸಿತ; ಎರಡು ದಿನದಿಂದ ಭಾರತದ ಷೇರುಪೇಟೆ ಅಲುಗಾಡಲು ಏನು ಕಾರಣ? ಕುಸಿತ ಕಂಡ ಪ್ರಮುಖ ಷೇರುಗಳ್ಯಾವುವು?
ಸ್ಟಾಕ್ ಮಾರ್ಕೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2023 | 4:26 PM

Share

ನವದೆಹಲಿ: ಕಳೆದ ಎರಡು ದಿನದಿಂದ ಭಾರತದ ಷೇರುಪೇಟೆಗಳು (Indian Stock Markets) ಮಹಾಕುಸಿತಕ್ಕೊಳಗಾಗಿವೆ. ಲಕ್ಷಾಂತರ ಕೋಟಿ ರೂನಷ್ಟು ಹೂಡಿಕೆಗಳು ನಷ್ಟಗೊಂಡಿವೆ. ಇಂದು ಸೆನ್ಸೆಕ್ಸ್ 680 ಅಂಕಗಳನ್ನು ಕಳೆದುಕೊಂಡಿದೆ. ಎರಡು ದಿನದಿಂದ ಸೆನ್ಸೆಕ್ಸ್ ಕಳೆದುಕೊಂಡ ಅಂಕಗಳು ಒಂದೂವರೆ ಸಾವಿರಕ್ಕೂ ಹೆಚ್ಚು. ನಿಫ್ಟಿ 17,400 ಅಂಕಗಳ ಮಟ್ಟಕ್ಕಿಂತ ಕಡಿಮೆಗೆ ಇಳಿದುಹೋಗಿದೆ. ಏರುಗತಿಗೆ ಹೋಗಿದ್ದ ಅದಾನಿ ಗ್ರೂಪ್ ಕಂಪನಿಯ ಕೆಲ ಷೇರುಗಳು ಕುಸಿತಗೊಂಡಿವೆ. ಅದಕ್ಕಿಂತ ಹೆಚ್ಚಾಗಿ ವಿವಿಧ ಬ್ಯಾಂಕುಗಳ ಷೇರುಗಳು ಭಾರೀ ಹಿನ್ನಡೆಯಲ್ಲಿವೆ.

ಭಾರತ ಉದಯೋನ್ಮುಖ ಆರ್ಥಿಕತೆ (Emerging Markets) ಇರುವ ಪ್ರಮುಖ ದೇಶಗಳಲ್ಲಿ ಒಂದು. ಆದರೆ ಈ ಕೆಟಗರಿಯ ಇತರ ಕೆಲ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಷೇರುಪೇಟೆಯಲ್ಲಿ ಅಲುಗಾಟ ಹೆಚ್ಚಾಗಿದೆ. ಈ ವರ್ಷದ ದತ್ತಾಂಶ ತೆಗೆದು ನೋಡಿದರೆ ಬೇರೆ ಉದಯೋನ್ಮುಖ ಆರ್ಥಿಕತೆಯ ದೇಶಗಳ ಷೇರುಪೇಟೆಗಿಂತ ಭಾರತದ ಈಕ್ವಿಟಿ ಮಾರುಕಟ್ಟೆ ಹೆಚ್ಚು ಹಿನ್ನಡೆ ಕಂಡಿದೆ.

ಅಮೆರಿಕದ ಎಫೆಕ್ಟ್?

ಭಾರತದಲ್ಲಿ ಈ ವರ್ಷ ಷೇರುಪೇಟೆ ಹಿನ್ನಡೆ ಕಾಣಲು ಅದಾನಿಹಿಂಡನ್ಬರ್ಗ್ ಪ್ರಕರಣ ಒಂದು ಕಾರಣ ಇರಬಹುದು. ಆದರೆ, ಎರಡು ದಿನದಿಂದ ಷೇರುಪೇಟೆ ಹಿನ್ನಡೆ ಕಾಣಲು ಜಾಗತಿಕ ಮಾರುಕಟ್ಟೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಡಾಲರ್​ನ ಬಲ ಕಡಿಮೆ ಆಗುತ್ತಿದ್ದರೂ ಹೂಡಿಕೆದಾರರು ಡಾಲರ್ ಬಿಟ್ಟು ಈಕ್ವಿಟಿ ಮಾರುಕಟ್ಟೆಗೆ ಬರಲು ಇನ್ನೂ ಸಿದ್ಧರಾಗಿಲ್ಲ. ವರದಿಗಳ ಪ್ರಕಾರ, ಅಮೆರಿಕದಲ್ಲಿ ನಿರುದ್ಯೋಗಿಗಳ ದತ್ತಾಂಶದ ವರದಿ ಸದ್ಯದಲ್ಲೇ ಬರಲಿದೆ. ಕೃಷಿಯೇತರ ಪೇರೋಲ್ ದತ್ತಾಂಶವೂ ಬರಲಿದೆ. ಇವುಗಳು ಬರುವವರೆಗೂ ಹೂಡಿಕೆದಾರರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿ, ಷೇರುಪೇಟೆಗೆ ಹೂಡಿಕೆದಾರರು ಬರುವುದು ಕಡಿಮೆ ಆಗಿದೆ.

ಇದನ್ನೂ ಓದಿCampa Cola: ಎಪ್ಪತ್ತದ ದಶಕದಲ್ಲಿ ಜನಪ್ರಿಯವಾಗಿದ್ದ ಕ್ಯಾಂಪಾ ಕೋಲ, ಆರೆಂಜ್, ಲೆಮನ್ ಪಾನೀಯಗಳು ಮತ್ತೆ ಮಾರುಕಟ್ಟೆಗೆ

ಇನ್ನು, ಭಾರತದಲ್ಲಿ ಎರಡು ದಿನದಿಂದ ಷೇರು ಮಾರಾಟ ಭರಾಟೆಗೆ ಕಾರಣವಾಗಿರುವುದು ಅಮೆರಿಕದ ಷೇರುಪೇಟೆಯಲ್ಲಿ ಅಲ್ಲಿನ ಬ್ಯಾಂಕಿಂಗ್ ಕಂಪನಿಗಳು ದುರ್ಬಲಗೊಂಡಿದ್ದರ ಪರಿಣಾಮ ಎನ್ನಲಾಗಿದೆ.

ಮಾರ್ಚ್ 10ರ ಷೇರುಪೇಟೆ ಏರಿಳಿತ

ಗಳಿಕೆ ಕಂಡ ಷೇರುಗಳು

ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಎನ್​ಟಿಪಿಸಿ, ಸನ್ ಫಾರ್ಮಾ, ಪವರ್ ಗ್ರಿಡ್ ಕಾರ್ಪ್, ಟೈಟಾನ್ ಕಂಪನಿ, ಐಟಿಸಿ, ಟೆಕ್ ಮಹೀಂದ್ರ, ಹೆಚ್​ಯುಎಲ್, ಬ್ರಿಟಾನಿಯಾ, ಬಿಪಿಸಿಎಲ್, ಡಾಕ್ಟರ್ ರೆಡ್ಡಿಸ್ ಲ್ಯಾಬ್ಸ್, ಅದಾನಿ ಪೋರ್ಟ್ಸ್, ಭಾರ್ತಿ ಏರ್ಟೆಲ್

ಹಿನ್ನಡೆ ಕಂಡ ಷೇರುಗಳು

ಅದಾನಿ ಎಂಟರ್​ಪ್ರೈಸಸ್, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ, ಎಚ್​ಡಿಎಫ್​ಸಿ, ಇಂಡಸ್​ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್​ಸರ್ವ್, ಎಂ ಅಂಡ್ ಎಂ, ಲಾರ್ಸನ್, ರಿಲಾಯನ್ಸ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೋ, ನೆಸ್ಲೆ, ಟಿಸಿಎಸ್, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಏಚರ್ ಮೋಟಾರ್ಸ್, ಡಿವಿಸ್ ಲ್ಯಾಬ್ಸ್, ಹಿಂಡಾಲ್ಕೊ, ಗ್ರಾಸಿಮ್, ಒಎನ್​ಜಿಸಿ, ಎಚ್​ಡಿಎಫ್​ಸಿ ಲೈಫ್, ಕೋಲ್ ಇಂಡಿಯಾ, ಸಿಪ್ಲಾ, ಟಾಟಾ ಸ್ಟೀಲ್.

ಇಂದು ಅತಿ ಹೆಚ್ಚು ಕಳೆದುಕೊಂಡಿದ್ದು ಭಾರತೀಯ ಬ್ಯಾಂಕುಗಳ ಷೇರುಗಳೇ. ಅಮೆರಿಕದ ಷೇರುಪೇಟೆಯಲ್ಲಿ ಅಲ್ಲಿಯ ಬ್ಯಾಂಕುಗಳು ಹಿನ್ನಡೆ ಕಾಣುತ್ತಿರುವುದರ ಪರಿಣಾಮ ಭಾರತದಲ್ಲೂ ಆಗುತ್ತಿದೆ. ಅದು ಬಿಟ್ಟರೆ ಅದಾನಿ ಎಂಟರ್​ಪ್ರೈಸಸ್ ಸಂಸ್ಥೆ ಶೇ. 2ಕ್ಕಿಂತಲೂ ಹೆಚ್ಚು ನಷ್ಟವನ್ನು ಇಂದಿನ ವಹಿವಾಟಿನಲ್ಲೇ ಮಾಡಿಕೊಂಡಿದೆ.

ಇನ್ನಷ್ಟು ಸ್ಟಾಕ್ ಮಾರ್ಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Fri, 10 March 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ