Aadhaar Limitation: ಆಧಾರ್ ಕಾರ್ಡ್​ನಲ್ಲಿರುವ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಎಷ್ಟು ಬಾರಿ ಬದಲಿಸಬಹುದು?

Aadhaar Updation Limitation: ಆಧಾರ್ ಕಾರ್ಡ್ ಬಹಳ ಅಗತ್ಯವಾಗಿರುವ ದಾಖಲೆ. ಇದರಲ್ಲಿರುವ ಮಾಹಿತಿ ಸರಿ ಇರುವುದು ಬಹಳ ಅಗತ್ಯ. ಆಗಾಗ ನಿಮ್ಮ ಆಧಾರ್ ವಿವರಗಳನ್ನು ಬದಲಾಯಿಸಲು ಹೋಗದಿರಿ. ಆಧಾರ್ ಅಪ್​ಡೇಶನ್​ಗೂ ಬಹಳ ಮಿತಿ ಇದೆ. ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ ಬದಲಾವಣೆ ಮಾಡಬಹುದು ಅಷ್ಟೇ.

Aadhaar Limitation: ಆಧಾರ್ ಕಾರ್ಡ್​ನಲ್ಲಿರುವ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಎಷ್ಟು ಬಾರಿ ಬದಲಿಸಬಹುದು?
ಆಧಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 12, 2023 | 11:27 AM

ಆಧಾರ್ ಭಾರತದ ನಾಗರಿಕರಿಗೆ ನೀಡಲಾಗುವ ಬಹಳ ವಿಶೇಷ ಗುರುತಿನ ಚೀಟಿ. 12 ಅಂಕಿಗಳಿರುವ ಈ ಗುರುತಿನ ಸಂಖ್ಯೆ (Aadhaar Number) ಬಹಳ ಮುಖ್ಯವಾದುದು. ಹಲವು ಸೌಲಭ್ಯ, ಸವಲತ್ತು, ಸರ್ಕಾರಿ ಸೇವೆ ಇತ್ಯಾದಿ ಕಾರ್ಯಗಳಿಗೆ ಆಧಾರ್ ಅಗತ್ಯವಾಗಿದೆ. ಹೀಗಾಗಿ, ನಿಮ್ಮ ಆಧಾರ್​ನಲ್ಲಿ ನಿಖರ ಮಾಹಿತಿ ಇರುವುದು ಅತ್ಯಗತ್ಯ. ಹೆಸರು, ಜನ್ಮ ದಿನಾಂಕ, ವಿಳಾಸ ಮಾಹಿತಿ ತಪ್ಪಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ನೀವು ಆಧಾರ್​ನಲ್ಲಿರುವ ಮಾಹಿತಿಯನ್ನು ಹೆಚ್ಚು ಬಾರಿ ಬದಲಾಯಿಸಲೂ ಸಾಧ್ಯವಿಲ್ಲ. ಹೀಗಾಗಿ, ಆಧಾರ್ ಅಪ್​ಡೇಟ್ ಮಾಡುವ ಮುನ್ನ ಎಚ್ಚರ ವಹಿಸಿ. ಆಧಾರ್ ಕಾರ್ಡ್​ನಲ್ಲಿರುವ ವ್ಯಕ್ತಿಯ ಹೆಸರು, ದಿನಾಂಕ, ಲಿಂಗ ಸ್ಥಾನಮಾನ, ವಿಳಾಸ ಇವುಗಳನ್ನು ಎಷ್ಟು ಬಾರಿ ಅಪ್​ಡೇಟ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಎಷ್ಟು ಬಾರಿ ಅಪ್​ಡೇಟ್ ಮಾಡಬಹುದು?

  • ಆಧಾರ್ ಕಾರ್ಡ್​ನಲ್ಲಿರುವ ವ್ಯಕ್ತಿಯ ಹೆಸರನ್ನು ಎರಡು ಬಾರಿ ಮಾತ್ರ ಅಪ್​ಡೇಟ್ ಮಾಡಬಹುದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಅಂದರೆ ಆಧಾರ್ ಮಾಡಿಸುವಾಗ ನಮೂದಾಗಿದ್ದ ಮಾಹಿತಿಯನ್ನು ಒಮ್ಮೆ ಮಾತ್ರ ಬದಲಿಸಬಹುದು.
  • ಆಧಾರ್​ನಲ್ಲಿರುವ ವ್ಯಕ್ತಿಯ ಜನ್ಮದಿನಾಂಕದ ವಿವರವನ್ನೂ ಎರಡು ಬಾರಿ ಮಾತ್ರ ಅಪ್​ಡೇಟ್ ಮಾಡಬಹುದು. ಅದೂ ವಿಶೇಷ ಸಂದರ್ಭದಲ್ಲಿ ಮಾತ್ರ.
  • ಆಧಾರ್​ನಲ್ಲಿ ವ್ಯಕ್ತಿಯ ಲಿಂಗ ವಿವರವನ್ನು ಒಮ್ಮೆ ಮಾತ್ರ ಅವಕಾಶ ಇದೆ. ಎರಡನೇ ಬಾರಿ ಬದಲಾಯಿಸಬೇಕೆಂದರೆ ಯುಐಡಿಎಐನ ಪ್ರಾದೇಶಕ ಕಚೇರಿಯ ಅನುಮತಿ ಪಡೆಯಬೇಕಾಗುತ್ತದೆ.
  • ಆಧಾರ್​ನಲ್ಲಿರುವ ವ್ಯಕ್ತಿಯ ಹೆಸರನ್ನು ಒಮ್ಮೆ ಮಾತ್ರ ಬದಲಾಯಿಸಲು ಸಾಧ್ಯ.

ಸಾಮಾನ್ಯವಾಗಿ ನೀವು ನೊಂದಾಯಿಸುವಾಗ ನೀಡಿದ್ದ ಜನ್ಮದಿನಾಂಕವನ್ನು ಬದಲಾಯಿಸಲು ಆಗುವುದಿಲ್ಲ. ಒಂದು ವೇಳೆ ನೊಂದಣಿ ವೇಳೆ ತಪ್ಪಾದ ಮಾಹಿತಿ ಇದ್ದರೆ, ಅಂದರೆ ಡೇಟಾ ಎಂಟ್ರಿ ವೇಳೆ ದೋಷವಾಗಿ ಹೆಸರು ತಪ್ಪಾಗಿ ಹೋಗಿದ್ದರೆ ಮಾತ್ರ ಜನ್ಮದಿನಾಂಕದ ವಿವರ ಬದಲಾಯಿಸಲು ಅವಕಾಶ ಇರುತ್ತದೆ. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ನೀಡಬೇಕು.

ಇದನ್ನೂ ಓದಿAadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ

ಇನ್ನು ನಿಮ್ಮ ಖಾಯಂ ವಿಳಾಸವನ್ನೇ ಆಧಾರ್​ನಲ್ಲಿರುವ ವಿಳಾಸವಾಗಿ ಇಟ್ಟುಕೊಳ್ಳುವುದು ಉತ್ತಮ. ಬಾಡಿಗೆ ಮನೆ ಬದಲಾಯಿಸಿದಾಗೆಲ್ಲಾ ಆಧಾರ್​ನಲ್ಲಿ ವಿಳಾಸ ಅಪ್​ಡೇಟ್ ಮಾಡಲು ಆಗುವುದಿಲ್ಲ.

ನಿಮಗೆ ಆಧಾರ್​ನಲ್ಲಿರುವ ಮಾಹಿತಿಯನ್ನು ಅಪ್​ಡೇಟ್ ಮಾಡುವ ಮಿತಿ ದಾಟಿ ಹೋಗಿದ್ದ ಸಂದರ್ಭದಲ್ಲಿ ನಿಮಗೆ ಏನಾದರೂ ಆಧಾರ್​ನಲ್ಲಿ ವಿವರ ಬದಲಾವಣೆ ಬೇಕೆನಿಸಿದಲ್ಲಿ ಬದಲಾಯಿಸುವುದು ಅಗತ್ಯ ಎನಿಸಿದಲ್ಲಿ ಯುಐಡಿಎಐನ ಪ್ರಾದೇಶಿಕ ಕಚೇರಿಗೆ ಹೋಗಿ ಮನವಿ ಮಾಡಿಕೊಳ್ಳಬಹುದು.

ಆದರೆ ಕಚೇರಿಗೆ ಹೋಗುವ ಮುನ್ನ help @uidai.gov.in ಈ ವಿಳಾಸಕ್ಕೆ ಇಮೇಲ್ ಕಳುಹಿಸಿ ಮನವಿ ಮಾಡಬೇಕು. ಯುಆರ್​ಎನ್ ಸ್ಲಿಪ್, ಆಧಾರ್ ವಿವರ ಮತ್ತು ಸೂಕ್ತ ದಾಖಲೆಯನ್ನೂ ಇಮೇಲ್ ವೇಳೆ ಲಗತ್ತಿಸಬೇಕು. ಇದಾದಾಗ ಬಳಿಕ ಪ್ರಾದೇಶಿಕ ಕಚೇರಿಯು ನಿಮ್ಮ ಮನವಿಯನ್ನು ಪರಿಶೀಲಿಸಿ ತನಿಖೆಯನ್ನೂ ಕೈಗೊಳ್ಳುತ್ತದೆ. ನಿಮ್ಮ ಮನವಿ ಸರಿ ಎನಿಸಿದಲ್ಲಿ ಪ್ರಾದೇಶಿಕ ಕಚೇರಿಗೆ ಬರುವಂತೆ ಸೂಚಿಸುತ್ತದೆ.

ಆಧಾರ್ ವಿವರಗಳ ತಿದ್ದುಪಡಿಗೆ ಬೇಕಾದ ದಾಖಲೆಗಳು

  • ಪಾಸ್​ಪೋರ್ಟ್
  • ಬ್ಯಾಂಕ್ ಸ್ಟೇಟ್ಮೆಂಟ್
  • ಅಂಚೆ ಕಚೇರಿಯ ಪಾಸ್​ಬುಕ್
  • ರೇಷನ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಸರ್ಕಾರದ ಫೋಟೋ ಐಡಿ
  • ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಸರ್ವಿಸ್ ಫೋಟೋ ಐಡಿ
  • 3 ತಿಂಗಳ ಎಲೆಕ್ಟ್ರಿಸಿಟಿ ಬಿಲ್ ಮತ್ತು ನೀರಿನ ಬಿಲ್
  • ಮೂರು ತಿಂಗಳ ಟೆಲಿಫೋನ್ ಲ್ಯಾಂಡ್​ಲೈನ್ ಬಿಲ್
  • ಒಂದು ವರ್ಷದ ಈಚಿನ ಪ್ರಾಪರ್ಟಿ ಟ್ಯಾಕ್ಸ್ ರಸೀತಿ

ಇದನ್ನೂ ಓದಿELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ಈ ಮೇಲಿನ ದಾಖಲೆಗಳಲ್ಲಿ ಒಂದನ್ನು ಪುರಾವೆಯಾಗಿ ಒದಗಿಸಬೇಕಾಗುತ್ತದೆ. ಆನ್​ಲೈನ್​ನಲ್ಲಿ ಆಧಾರ್ ಸೇವೆಗಳನ್ನು ಪಡೆಯಲು ಮತ್ತು ತಿದ್ದುಪಡಿ ಮಾಡಲು ಅವಕಾಶ ಇದೆಯಾದರೂ ಮೊಬೈಲ್ ನಂಬರ್ ಅಪ್​ಡೇಟ್ ಮಾಡಲು ಆಧಾರ್ ಸರ್ವಿಸ್ ಸೆಂಟರ್​ಗೆ ಹೋಗಲೇಬೇಕು. ಆಧಾರ್ ಕೇಂದ್ರದಲ್ಲಿ ಕೆಲವಿಷ್ಟು ಸೇವೆಗಳಿಗೆ ನಿರ್ದಿಷ್ಟ ಶುಲ್ಕಗಳಿವೆ. ಅದರ ವಿವರ ಇಲ್ಲಿದೆ.

ಆಧಾರ್ ಮಾಹಿತಿ ಅಪ್​ಡೇಟ್ ಮಾಡಲು ಇರುವ ಶುಲ್ಕ

ಆರಂಭಿಕ ಬಯೋಮೆಟ್ರಿಕ್: ಉಚಿತ

ಹೆಸರು, ವಿಳಾಸ ಬದಲಾವಣೆ: 50 ರೂ

ಬಯೋಮೆಟ್ರಿಕ್ ಅಪ್​ಡೇಟ್: 100 ರೂ

ಬಯೋಮೆಟ್ರಿಕ್ ಜೊತೆ ಹೆಸರು, ವಿಳಾಸ ಇತ್ಯಾದಿ ಬದಲಾವಣೆ: 100 ರೂ

ಆಧಾರ್ ಡೌನ್​ಲೋಡ್ ಮಾಡಿ ಕಲರ್ ಪ್ರಿಂಟೌಟ್ ಪಡೆಯಲು: 30 ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 12 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ