Infosys President Resigned: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ
Mohit Joshi: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರು ಇಂದು ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯು ಬಿಎಸ್ಇಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಇವರ ರಾಜೀನಾಮೆ ಬಗ್ಗೆ ತಿಳಿಸಿದೆ.
ಇನ್ಫೋಸಿಸ್ (Infosys) ಅಧ್ಯಕ್ಷ ಮೋಹಿತ್ ಜೋಶಿ (Mohit Joshi) ಅವರು ಐಟಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇಂದು ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯು ಬಿಎಸ್ಇಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಇವರ ರಾಜೀನಾಮೆ ಬಗ್ಗೆ ತಿಳಿಸಿದೆ. ಡಿಜಿಟಲ್ ಸೇವೆಗಳಲ್ಲಿ ಮತ್ತು ಕನ್ಸಲ್ಟಿಂಗ್ನಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ನ ಅಧ್ಯಕ್ಷ ಮೋಹಿತ್ ಜೋಶಿ ಅವರ ಇಂದು ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂದು ತಿಳಿಸಿದೆ. ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಅವರು ಕಂಪನಿಯೊಂದಿಗೆ ಜೂನ್ 09, 2023ವರೆಗೆ ಇರುತ್ತಾರೆ ಎಂದು ಹೇಳಿದೆ.
ನಿರ್ದೇಶಕ ಮಂಡಳಿಯು ಮೋಹಿತ್ ಜೋಶಿ ಅವರು ಸಲ್ಲಿಸಿದ ಸೇವೆಗಳಿಗೆ ಮತ್ತು ಕಂಪನಿಗೆ ಅವರ ನೀಡಿದ ಕೊಡುಗೆಗಳಿಗಾಗಿ ಧನ್ಯವಾದವನ್ನು ಮತ್ತು ಅವರ ಅಪಾರ ಸೇವೆ ನಮಗೆ ಸ್ಪೂರ್ತಿ ಎಂದು ಇನ್ಫೋಸಿಸ್ ಹೇಳಿದೆ. ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಇದೀಗ ಟಿಕ್ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಟಿಕ್ ಮಹೀಂದ್ರಾದ ವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸಿಪಿ ಗುರ್ನಾನಿ ಅವರು ಡಿಸೆಂಬರ್ 19 ನಿವೃತ್ತರಾಗಲಿದ್ದಾರೆ. ಅವರು ಸ್ಥಾನಕ್ಕೆ ಮೋಹಿತ್ ಜೋಶಿ ಅವರು ನೇಮಕಗೊಳ್ಳಲಿದ್ದಾರೆ.
Published On - 11:24 am, Sat, 11 March 23