‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ಪವಿತ್ರಾ ಗೌಡ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರು ಒತ್ತೀಚೆಗೆ ದರ್ಶನ್ ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಭೇಟಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈಗ ಅವರು ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.
ಪವಿತ್ರಾ ಗೌಡ ಹಾಗೂ ದರ್ಶನ್ (Darshan) ಮಧ್ಯೆ ಆಪ್ತತೆ ಇತ್ತು. ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಇಬ್ಬರೂ ದೂರ ಆದರು. ಈಗ ಇವರ ಮಧ್ಯೆ ಕಾಂಟ್ಯಾಕ್ಟ್ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಈ ಮಧ್ಯೆ ಪವಿತ್ರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಪೋಸ್ಟ್ಗಳನ್ನು ಅವರು ಹಂಚಿಕೊಳ್ಳುತ್ತಾ ಇದ್ದಾರೆ. ‘ಸಮಯ ಮತ್ತು ತಾಳ್ಮೆ ಮುಖ್ಯ. ಎಲ್ಲ ಪ್ರಶ್ನೆಗೆ ಮೌನವೇ ಒಳ್ಳೆಯ ಉತ್ತರ. ಎಲ್ಲ ಪರಿಸ್ಥಿತಿಗೆ ನಗುವೆ ಒಳ್ಳೆಯ ಪ್ರತಿಕ್ರಿಯೆ’ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಬಳಿಕ ಇದೆರಡೂ ತತ್ವವನ್ನು ಅವರು ಅಳವಡಿಸಿಕೊಂಡಿದ್ದಾರೆ. ಅವರಿಗೆ ಎಂಥದ್ದೇ ಪ್ರಶ್ನೆ ಬಂದರೂ ಅವರು ಮೌನವಾಗಿಯೇ ಇರುತ್ತಾರೆ. ಎಂಥದ್ದೇ ಪರಿಸ್ಥಿತಿ ಇದ್ದರೂ ಅವರು ನಗುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 23, 2025 12:43 PM