Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್

Signature Bank Failure: 2008ರ ವಾಷಿಂಗ್ಟನ್ ಮ್ಯುಚುವಲ್ ಬ್ಯಾಂಕ್ ದಿವಾಳಿಯಾದ ಬಳಿಕ ಈ ವರ್ಷ ಕೆಲವೇ ದಿನಗಳ ಅಂತರದಲ್ಲಿ ಮೂರು ಬ್ಯಾಂಕುಗಳು ಬಾಗಿಲು ಮುಚ್ಚಿವೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಳಿಕ ನ್ಯೂಯಾರ್ಕ್​ನ ಸಿಗ್ನೇಚರ್ ಬ್ಯಾಂಕ್ ಪತನಗೊಂಡಿದೆ.

Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್
ಸಿಗ್ನೇಚರ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2023 | 11:05 AM

ವಾಷಿಂಗ್ಟನ್: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಸುದ್ದಿ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಈಗ ಅಮೆರಿಕದಲ್ಲಿ ಮತ್ತೊಂದು ಬ್ಯಾಂಕ್ ದಿವಾಳಿಯಾಗಿದೆ. ನ್ಯೂಯಾರ್ಕ್ ರಾಜ್ಯ ಸರ್ಕಾರಿ ಸ್ವಾಮ್ಯದ ಸಿಗ್ನೇಚರ್ ಬ್ಯಾಂಕ್ (Signature Bank) ಬಾಗಿಲು ಮುಚ್ಚಿದೆ. ಇದು ಅಮೆರಿಕದಲ್ಲಿ ಕುಸಿದುಬಿದ್ದಿರುವ ಮೂರನೇ ಬ್ಯಾಂಕ್ ಆಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಳ್ಳುವ ಸ್ವಲ್ಪ ಮೊದಲು ಸಿಲ್ವರ್​ಗೇಟ್ ಕ್ಯಾಪಿಟಲ್ ಕಾರ್ಪ್ (Silvergate Capital Corp) ಎಂಬ ಬ್ಯಾಂಕೊಂದು ತಾನು ಬಾಗಿಲು ಮುಚ್ಚುತ್ತಿರುವುದಾಗಿ ಹೇಳಿತ್ತು. ಸದ್ಯ ವಿಶ್ವ ದೊಡ್ಡಣ್ಣನ ಅಂಗಳದಲ್ಲಿ ಬ್ಯಾಂಕುಗಳು ಅಂಟು ಜಾಡ್ಯದಂತೆ ಒಂದೊಂದಾಗಿ ಪತನಗೊಳ್ಳುತ್ತಿರುವ ಟ್ರೆಂಡ್ ಕಾಣುತ್ತಿದೆ. ಇವತ್ತು ಎಸ್​ವಿಬಿ, ಸಿಗ್ನೇಚರ್ ಬಾಗಿಲು ಹಾಕಿವೆ, ಮುಂದೆ ಇನ್ನೂ ಹಲವು ಬ್ಯಾಂಕುಗಳು ಕುಸಿಯುವ ಸಾಧ್ಯತೆ ಇಲ್ಲದಿಲ್ಲ.

ನ್ಯೂಯಾರ್ಕ್​ನ ರಾಜ್ಯ ಹಣಕಾಸು ನಿಯಂತ್ರಕರು (New York State Financial Regulators) ಮಾರ್ಚ್ 12, ಭಾನುವಾರ ಸಿಗ್ನೇಚರ್ ಬ್ಯಾಂಕ್ ಬಾಗಿಲು ಬಂದ್ ಮಾಡಿವೆ. ಸಿಲಿಕಾನ್ ವ್ಯಾಲಿ ಬ್ಯಾಂಕ್​ನ ಗ್ರಾಹಕರಿಗೆ ನಿರ್ದಿಷ್ಟ ವಿಧಾನದಲ್ಲಿ ಅವರ ಹಣ ವಾಪಸ್ ಮಾಡಲಾಗುತ್ತಿರುವ ರೀತಿಯಲ್ಲೇ ಸಿಗ್ನೇಚರ್ ಬ್ಯಾಂಕ್​ನ ಠೇವಣಿದಾರರಿಗೆ ಅವಕಾಶ ಮಾಡಿಕೊಡಲಾಗಿದೆ.

ಬ್ಯಾಂಕ್​ನ ಯಾವುದೇ ಠೇವಣಿದಾರರ ಹಣ ತಪ್ಪದೇ ಮರಳುತ್ತದೆ. ಬ್ಯಾಂಕಿಗೆ ಆಗಿರುವ ನಷ್ಟದ ಭಾರವನ್ನು ಠೇವಣಿದಾರರ ಹೆಗಲಿಗೆ ಹಾಕುವುದಿಲ್ಲ ಎಂದು ನ್ಯೂಯಾರ್ಕ್​ನ ಹಣಕಾಸು ಇಲಾಖೆ, ಫೆಡರಲ್ ರಿಸರ್ವ್ ಬ್ಯಾಂಕ್, ಫೆಡರಲ್ ಇನ್ಷೂರೆನ್ಸ್ ಡೆಪಾಸಿಟ್ ಕಾರ್ಪ್ (ಎಫ್​ಐಡಿಸಿ) ಇವು ಜಂಟಿ ಹೇಳಿಕೆ ನೀಡಿವೆ. ಇಲ್ಲಿ ಸಿಗ್ನೇಚರ್ ಬ್ಯಾಂಕ್​ನ ಠೇವಣಿದಾರರ ಹಣ ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳಲು ಎಫ್​ಐಡಿಸಿ ಸಂಸ್ಥೆಯನ್ನು ರಿಸೀವರ್ ಆಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿSVB Bankrupt: ಎರಡೇ ದಿನದಲ್ಲಿ ಅಮೆರಿಕದ ಎಸ್​ವಿಬಿ ದಿವಾಳಿ; ಭಾರತೀಯ ಸ್ಟಾರ್ಟಪ್ಸ್​ಗೆ ಭೀತಿ; ಸಂಬಂಧವೇ ಇಲ್ಲದ ಸಹಕಾರಿ ಬ್ಯಾಂಕ್​ಗೂ ಫಜೀತಿ

ಸಿಗ್ನೇಚರ್ ಬ್ಯಾಂಕ್ ಡಿಸೆಂಬರ್ 31ರ ಅಂದಾಜಿನಲ್ಲಿ ಒಟ್ಟು 110.36 ಬಿಲಿಯನ್ ಡಾಲರ್ (ಸುಮಾರು 9 ಲಕ್ಷ ಕೋಟಿ ರುಪಾಯಿ) ಮೌಲ್ಯದ ಆಸ್ತಿ ಹೊಂದಿತ್ತು. ಅದರಲ್ಲಿ 88.59 ಬಿಲಿಯನ್ ಡಾಲರ್ (7.3 ಲಕ್ಷ ಕೋಟಿ ರುಪಾಯಿ) ಮೊತ್ತದಷ್ಟು ಹಣ ಠೇವಣಿಗಳ ರೂಪದಲ್ಲೇ ಇತ್ತು. ಇಷ್ಟು ಆರೋಗ್ಯಕರ ಸ್ಥಿತಿಯಲ್ಲಿದ್ದ ಸಿಗ್ನೇಚರ್ ಬ್ಯಾಂಕ್ ಈಗ ಮುಚ್ಚುವ ಪರಿಸ್ಥಿತಿ ಬಂದಿದ್ದು ಸೋಜಿಗ. ಆದರೆ, ಇಷ್ಟು ದೊಡ್ಡ ಮೊತ್ತದ ಠೇವಣಿ ಹಣವನ್ನು ಗ್ರಾಹಕರಿಗೆ ಮರಳಿಸುವ ದೊಡ್ಡ ಜವಾಬ್ದಾರಿ ಇದೆ. ಅದಕ್ಕಾಗಿ ಎಫ್​ಡಿಐಸಿ ಸಂಸ್ಥೆಯು ಬ್ರಿಡ್ಜ್ ಬ್ಯಾಂಕ್ ಹುಟ್ಟುಹಾಕಿದೆ. ಸಿಗ್ನೇಚರ್ ಬ್ಯಾಂಕ್​ನ ಎಲ್ಲಾ ಗ್ರಾಹಕರು ಬ್ರಿಡ್ಜ್ ಬ್ಯಾಂಕ್​ಗೆ ವರ್ಗಾವಣೆ ಆಗಲಿದ್ದಾರೆ. ಫಿಫ್ತ್ ಥರ್ಡ್ ಬ್ಯಾನ್​ಕಾರ್ಪ್ ಬ್ಯಾಂಕ್​ನ ಮಾಜಿ ಮುಖ್ಯಸ್ಥ ಗ್ರೆಗ್ ಕಾರ್​ಮಿಖೇಲ್ ಅವರನ್ನು ಬ್ರಿಡ್ಜ್ ಬ್ಯಾಂಕ್​ನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಕ್ರಿಪ್ಟೋ ಠೇವಣಿಯ ನಂಟು

ಸಿಗ್ನೇಚರ್ ಬ್ಯಾಂಕ್​ನ ಹೆಸರು ಕಳೆದ ವರ್ಷವೂ ಸದ್ದು ಮಾಡಿತ್ತು. ಕ್ರಿಪ್ಟೋ ಎಕ್ಸ್​ಚೇಂಜ್ ಕಂಪನಿ ಎಫ್​ಟಿಎಕ್ಸ್ ಹಗರಣ ಬೆಳಕಿಗೆ ಬಂದಾಗ ಸಿಗ್ನೇಚರ್ ಬ್ಯಾಂಕ್ ಹೆಸರೂ ಥಳುಕು ಹಾಕಿಕೊಂಡಿತ್ತು. ಎಫ್​ಟಿಎಕ್ಸ್​ನ ಹಣ ಸಿಗ್ನೇಚರ್ ಬ್ಯಾಂಕ್​ನಲ್ಲಿದೆ ಎಂಬ ಸುದ್ದಿ ಆ ಬ್ಯಾಂಕ್​ನ ಗ್ರಾಹಕರನ್ನು ಬೆಚ್ಚಿಬೀಳಿಸಿತ್ತು. ಆದರೆ, ಎಫ್​ಟಿಎಕ್ಸ್​ನ ಠೇವಣಿಗಳು ಶೇ. 1ರಷ್ಟೂ ಇಲ್ಲ ಎಂದು ಬ್ಯಾಂಕ್ ಹೇಳಿದರೂ ಒಟ್ಟಾರೆ ಕ್ರಿಪ್ಟೋ ಸಂಬಂಧಿತ ಆಸ್ತಿಗಳ ಠೇವಣಿಗಳು ಶೇ. 20ಕ್ಕಿಂತಲೂ ಹೆಚ್ಚು ಇರುವುದು ನಿಜವೇ ಆಗಿತ್ತು. ಈ ಕ್ರಿಪ್ಟೋ ಕಂಪನಿಗಳ ಠೇವಣಿಗಳ ಪ್ರಮಾಣವನ್ನು ತಗ್ಗಿಸುವುದಾಗಿ ಬ್ಯಾಂಕ್ ಹೇಳಿತ್ತು.

ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಾಗಿಲು ಮುಚ್ಚಿದ ಪ್ರಕರಣವೂ ಸೋಜಿಗವೇ ಎನಿಸಿದೆ. ಕ್ಯಾಲಿಫೋರ್ನಿಯಾ ಮೂಲದ ಈ ಬ್ಯಾಂಕ್ ಕೇವಲ ಎರಡೇ ದಿನದಲ್ಲಿ ಬಾಗಿಲು ಬಂದ್ ಹಾಕಿದ್ದು ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಹಿಂದಿನ ತ್ರೈಮಾಸಿಕದ ವರದಿಯಲ್ಲಿ ಬ್ಯಾಂಕ್ ನಷ್ಟ ಎಂದು ತೋರಿಸಿದ್ದರೂ ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ ಎಂಬುದನ್ನು ತನ್ನಲ್ಲಿರುವ ಠೇವಣಿ ಇತ್ಯಾದಿ ವಿವರಗಳನ್ನು ನೀಡಿ ಭರವಸೆ ನೀಡಿತ್ತು.

ಇದನ್ನೂ ಓದಿPhonePe: ಫೋನ್​ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್​ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್

ಆದರೆ, ಯಾವುದೋ ಸಂಸ್ಥೆಯೊಂದು ತಾನು ಎಸ್​ವಿಬಿಯಿಂದ ಠೇವಣಿ ಹಿಂಪಡೆಯುತ್ತಿರುವುದಾಗಿ ಹೇಳಿಕೆ ನೀಡಿದ್ದೇ ಬಂತು, ಬ್ಯಾಂಕ್​ನ ಗ್ರಾಹಕರು ತಮ್ಮ ಹಣವನ್ನು ಹಿಂಪಡೆಯಲು ಮುಗಿಬಿದ್ದರು. ಎಲ್ಲಾ ಗ್ರಾಹಕರು ದಿಢೀರನೇ ಠೇವಣಿ ಬೇಕೆಂದು ನುಗ್ಗಿದರೆ ಯಾವುದೇ ಬ್ಯಾಂಕಾದರೂ ಕೊಡಲು ಸಾಧ್ಯವಾಗುವುದಿಲ್ಲ. ಅದು ಬ್ಯಾಂಕ್ ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತದೆ.

2008ರ ಹಣಕಾಸು ಬಿಕ್ಕಟ್ಟಿನ ವೇಳೆ ವಾಷಿಂಗ್ಟನ್ ಮ್ಯೂಚುವಲ್ ಎಂಬ ಬ್ಯಾಂಕ್ ಬಾಗಿಲು ಮುಚಿತ್ತು. ಇದು ಅಮೆರಿಕದ ಬ್ಯಾಂಕ್ ಇತಿಹಾಸದಲ್ಲೇ ಅತಿ ದೊಡ್ಡ ಬ್ಯಾಂಕ್ ವೈಫಲ್ಯ ಎಂದು ಪರಿಗಣಿಸಲಾಗಿದೆ. ಅದಾದ ಬಳಿಕ ಸಿಲಿಕಾನ್ ವ್ಯಾಲಿ ಬ್ಯಾಂಕ್ ವಿಫಲಗೊಂಡಿರುವ ಎರಡನೇ ಅತಿದೊಡ್ಡ ಬ್ಯಾಂಕ್. ಈ ಎಸ್​ವಿಬಿ ಬೆಂಗಳೂರಿನಲ್ಲೂ ಕಚೇರಿಯನ್ನು ಹೊಂದಿದ್ದು ಹಲವು ಭಾರತೀಯ ಸ್ಟಾರ್ಟಪ್​ಗಳಿಗೆ ಹಣಕಾಸು ಆಸರೆಯೂ ಆಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ