ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್​​​ ಆಫರ್​​​ ಪೋಸ್ಟ್​​​

ಕರಡಿ ಹಗ್ಗರ್‌ಗಳು ಬೇಕಾಗಿದ್ದಾರೆ ಎಂದು ಫೇಸ್​​ ಬುಕ್​ ಪೇಜ್​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​​​​ ಈಗ ಭಾರೀ ವೈರಲ್​ ಆಗಿದೆ. ಮಾರ್ಚ್​ 13ರಂದು ನ್ಯೂ ಮೆಕ್ಸಿಕೋ ಡಿಪಾರ್ಟ್ಮೆಂಟ್ ಆಫ್ ಗೇಮ್ ಅಂಡ್ ಫಿಶ್ ಎಂಬ ಫೇಸ್​​ ಬುಕ್​​ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್​​​​ ಇಲ್ಲಿದೆ ನೋಡಿ.

ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್​​​ ಆಫರ್​​​ ಪೋಸ್ಟ್​​​
Professional Bear HuggersImage Credit source: Facebook
Follow us
|

Updated on:Mar 21, 2023 | 4:20 PM

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ.. ಅನ್ನೋ ಹಾಡು ಸಕ್ಕತ್ತ್​​​​ ಫೇಮಸ್​​​​​​​​​. ಅದರಂತೆಯೇ ಕರಡಿಯೂ ಅಪಾಯಕಾರಿ ಪ್ರಾಣಿಯಾಗಿದ್ದು, ಯಾವಾಗ ಬೇಕಾದರೂ ಮನುಷ್ಯನ ಮೇಲೆ ಅಟ್ಯಾಕ್​​ ಮಾಡಬಹುದು. ಆದ್ದರಿಂದ ಕರಡಿಯಿಂದ ಸ್ವಲ್ಪ ಅಂತರ ಕಾಪಾಡಬೇಕು ಎಂಬ ಮಾತಿಗೆ. ಆದರೆ ಅಮೆರಿಕಾದ ವನ್ಯಜೀವಿ ಏಜೆನ್ಸಿಯೊಂದು ಕರಡಿ ತಬ್ಬಿ ಮುದ್ದಾಡುವರು ಕೆಲಸ ಜನ ಬೇಕಾಗಿದ್ದಾರೆ ಎಂದು ಪೋಸ್ಟ್​​ ಮಾಡಿದೆ. ಕರಡಿ ತಬ್ಬಿಕೊಳ್ಳುವವರನ್ನು (Professional Bear Huggers) ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ಕರಡಿ ಹಗ್ಗರ್‌ಗಳು ಬೇಕಾಗಿದ್ದಾರೆ ಎಂದು ಫೇಸ್​​ ಬುಕ್​ ಪೇಜ್​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​​​​ ಈಗ ಭಾರೀ ವೈರಲ್​ ಆಗಿದೆ. ಮಾರ್ಚ್​ 13ರಂದು ನ್ಯೂ ಮೆಕ್ಸಿಕೋ ಡಿಪಾರ್ಟ್ಮೆಂಟ್ ಆಫ್ ಗೇಮ್ ಅಂಡ್ ಫಿಶ್ ಎಂಬ ಫೇಸ್​​ ಬುಕ್​​ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್​​​​ ಇಲ್ಲಿದೆ ನೋಡಿ.

ಇಲ್ಲಿ ಹಂಚಿಕೊಳ್ಳಲಾದ ಪೋಸ್ಟ್​​ ಪ್ರಕಾರ ಅಳಿವಿನಂಚಿರುವ ಈ ಕಪ್ಪು ಕರಡಿಗಳನ್ನು ಸಂರಕ್ಷಿಸುವುದು ಇವರ ಪ್ರಮುಖ ಧ್ಯೇಯವಾಗಿದೆ. ಹಿಮದಿಂದ ಆವೃತವಾಗಿದ್ದ ಗುಹೆಗಳಿಂದ ಈ ಕರಡಿಗಳನ್ನು ಮುದ್ದಾಡುತ್ತಿರುವ ಫೋಟೋವನ್ನು ಪೋಸ್ಟ್​​​ನಲ್ಲಿ ಕಾಣಬಹುದು. ಜೊತೆಗೆ ನೇಮಕಾತಿ ಪೋಸ್ಟ್ ಪ್ರಕಾರ, ಬೇರ್​​ ಹಗ್ಗರ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ ಎಂದು ನಮೂದಿಸಲಾಗಿದೆ. ಜೊತೆಗೆ ಈ ಕೆಲಸಕ್ಕೆ ಏನೆಲ್ಲಾ ಅರ್ಹತೆಗಳಿರಬೇಕು ಎಂದು ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಶ್ವಾನದಿಂದ ಕಲಿಯಬೇಕು ಸಂಸ್ಕಾರ, ಮಕ್ಕಳ ಜೊತೆಗೆ ನಾಯಿ ಮಾಡಿದ್ದೇನು ನೋಡಿ

ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಉದ್ಯೋಗಕ್ಕಾಗಿ ಅರ್ಜಿದಾರರು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ(Natural Resource Conservation), ಜೈವಿಕ ವಿಜ್ಞಾನ(Biological Science) ಅಥವಾ ಅಂತದ್ದೇ ಅಧ್ಯಯನದ ಕ್ಷೇತ್ರದಲ್ಲಿ ಅನುಭವ ಅಥವಾ ಶಿಕ್ಷಣವನ್ನು ಹೊಂದಿರಬೇಕು. ಜೊತೆಗೆ ಪ್ರಯಾಸಕರ ಪರಿಸ್ಥಿತಿಗಳಲ್ಲಿ ನಡೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ಇದಲ್ಲದೇ ಈ ಕೆಲಸವು ಅಮೇರಿಕನ್ ಕಪ್ಪು ಕರಡಿಗಳು ಹಾಗೂ ಮಾನವನ ನಡುವಿನ ಸಂಘರ್ಷವನ್ನು ನಿರ್ವಹಿಸುವುದು ಮತ್ತು ಸಹಜವಾಗಿ, ಮರಿಗಳನ್ನು ಮುದ್ದಾಡುವ ಕೆಲಸವಾಗಿರುತ್ತದೆ ಎಂದು ಪೋಸ್ಟ್​​​ನಲ್ಲಿ ವಿವರವಾಗಿ ಹಂಚಿಕೊಳ್ಳಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:19 pm, Tue, 21 March 23