ಹೊಸದಾಗಿ ಪತ್ತೆಯಾದ ಜೇಡವೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್
ಇತ್ತೀಚೆಗೆ ಹೊಸದಾಗಿ ಪತ್ತೆಯಾದ ಜೇಡವೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಮಾತ್ರ ಕಂಡುಬರುವ ಅಪರೂಪದ ಮತ್ತು ದೈತ್ಯ ಜಾತಿಯ ಟ್ರಾಪ್‌ಡೋರ್ ಜೇಡ ಇದಾಗಿದೆ.
ಇತ್ತೀಚೆಗೆ ಹೊಸದಾಗಿ ಪತ್ತೆಯಾದ ಜೇಡವೊಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂನ ಪ್ರಾಥಮಿಕ ಪುರತತ್ವ ಶಾಸ್ತ್ರಜ್ಞ(Arachnologist) ಮೈಕೆಲ್ ರಿಕ್ಸ್ ಈ ಜಾತಿಗೆ ಯೂಪ್ಲೋಸ್ ಡಿಗ್ನಿಟಾಸ್ ಎಂದು ಹೆಸರಿಸಲಾಗಿದೆ ಮತ್ತು ಹೆಣ್ಣು ಟ್ರಾಪ್‌ಡೋರ್ ಸ್ಪೈಡರ್ ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಎಂದು ಎಬಿಸಿಗೆ ತಿಳಿಸಿದ್ದಾರೆ. ಕೆಲವು ಜಾತಿಯ ಜೇಡಗಳು ಕಚ್ಚಿದರೆ ಸಣ್ಣ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಮಾರಕವಾಗಬಹುದು. ಅವುಗಳಲ್ಲಿ ಹೆಚ್ಚಿನವು ಇತ್ತೀಚಿನ ದಿನಗಳಲ್ಲಿ ಕಂಡುಬರದ ಕಾರಣ ಈ ಜಾತಿಗಳು ಅಳಿವಿನಂಚಿನಲ್ಲಿರುವ ಸಾಧ್ಯತೆ ಹೆಚ್ಚಿದೆ ಎಂದು ರಿಕ್ಸ್ ಹೇಳಿದ್ದಾರೆ. ಎಂಟು ಕಾಲಿನ ಜೇಡಗಳು ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ಪ್ರದೇಶದ ಕಾಡಿನಲ್ಲಿ ಕಾಣಬಹುದು ಎಂದು ಎಬಿಸಿ ನ್ಯೂಸ್ ವರದಿ ಹೇಳಿದೆ.
ಮಾರ್ಚ್ 18ರಂದು ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂನ ಫೇಸ್ ಬುಕ್ ಖಾತೆಯಲ್ಲಿ ಯೂಪ್ಲೋಸ್ ಡಿಗ್ನಿಟಾಸ್ ಜಾತಿಗೆ ಸೇರಿದ ಈ ವಿಶೇಷ ಜೇಡದ ಫೋಟೋಗಳನ್ನು ಹಂಚಿಕೊಳ್ಳಗಾಗಿದೆ. ಇದರ ಕುರಿತು ಮಾಹಿತಿಯನ್ನು ಬರೆದಿದ್ದಾರೆ. ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಮಾತ್ರ ಕಂಡುಬರುವ ಅಪರೂಪದ ಮತ್ತು ದೈತ್ಯ ಜಾತಿಯ ಟ್ರಾಪ್‌ಡೋರ್ ಜೇಡ ಇದಾಗಿದೆ. ಕಪ್ಪು ಮಣ್ಣಿನಲ್ಲಿ ವಾಸಿಸುವ ಈ ಜೇಡಗಳು ಇತ್ತೀಚಿನ ದಿನಗಳಲ್ಲಿ ಸರಿಯಾದ ಆವಾಸಸ್ಥಾನಗಳು ಇಲ್ಲದಿರುವ ಕಾರಣ ಇದು ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: ಅಯ್ಯೋ ಈ ಬಬಲ್ ಎಲ್ಲಿಗೆ ಹೋಯಿತು? ಬೆಕ್ಕಿನ ಆಟ ನೋಡಿ ನಗುವುದು ಖಂಡಿತ
ಜೇಡಗಳಲ್ಲಿ ಸಾಕಷ್ಟು ವಿಷಕಾರಿಯಾಗಿರುವುದರಿಂದ, ಹೆಚ್ಚಿನವರಿಗೆ ಇದರ ಬಗ್ಗೆ ಹೆದರಿಕೆ ಇರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ, ಆಸ್ಟ್ರೇಲಿಯಾದ ಬ್ರಿಟಿಷ್ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ಪತ್ತೆಯಾಗಿದ್ದ, ಬೃಹತ್ ಜೇಡವೊಂದನ್ನು ಹೊರಹಾಕಲು ಸಹಾಯಮಾಡಿ. ನನ್ನ ಮನೆಯಿಂದ ಜೇಡವನ್ನು ಹೊರಗೆ ದೂರ ಓಡಿಸಲು ಸಹಾಯ ಮಾಡಿದವರಿಗೆ 50 ಸಾವಿರ ನಗದು ಬಹುಮಾನವಾಗಿ ನೀಡುತ್ತೇನೆ ಎಂದು ಪೋಸ್ಟ್ ಹಾಕಿದ್ದರು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:02 pm, Tue, 21 March 23