Viral Video: ಅಯ್ಯೋ ಈ ಬಬಲ್​ ಎಲ್ಲಿಗೆ ಹೋಯಿತು? ಬೆಕ್ಕಿನ ಆಟ ನೋಡಿ ನಗುವುದು ಖಂಡಿತ

ಬೆಕ್ಕೊಂದು ಗೊಂದಲಕ್ಕೆ ಒಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕು ಬಬುಲ್ಸ್ ಒಡೆದು ಮಾಯವಾಗುತ್ತಿದಂತೆ ಬೆಕ್ಕಿಗೆ ಗೊಂದಲ ಶುರುವಾಗಿದೆ. ಈ ವೀಡಿಯೊ ಅನೇಕರಿಗೆ ಮನರಂಜನೆಯನ್ನು ನೀಡಿದೆ.

Viral Video: ಅಯ್ಯೋ ಈ ಬಬಲ್​ ಎಲ್ಲಿಗೆ ಹೋಯಿತು? ಬೆಕ್ಕಿನ ಆಟ ನೋಡಿ ನಗುವುದು ಖಂಡಿತ
ವೈರಲ್ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 20, 2023 | 12:19 PM

ಮನೆಯಲ್ಲಿ ಸಾಕು ಪ್ರಾಣಿಗಳು ಮಾಡುವ ಚೇಷ್ಟೆ ಒಂದೆರಡಲ್ಲ, ಅದು ನಮಗೆ ಒಂದು ಬಾರಿ ನಗು ತರಿಸುತ್ತದೆ. ಮಕ್ಕಳಂತೆ ಅವುಗಳು ಮುಗ್ದ ಜೀವಿಗಳು. ಮನೆಯಲ್ಲಿ ಮಕ್ಕಳಿಗೂ ಅವುಗಳ ಈ ಆಟವೇ ಇಷ್ಟ. ಇದೆ ರೀತಿಯ ವೀಡಿಯೊವೊಂದು ವೈರಲ್ ಆಗಿದೆ. ಬೆಕ್ಕೊಂದು ಗೊಂದಲಕ್ಕೆ ಒಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕು ಬಬಲ್ ಒಡೆದು ಮಾಯವಾಗುತ್ತಿದಂತೆ ಬೆಕ್ಕಿಗೆ ಗೊಂದಲ ಶುರುವಾಗಿದೆ. ಈ ವೀಡಿಯೊ ಅನೇಕರಿಗೆ ಮನರಂಜನೆಯನ್ನು ನೀಡಿದೆ. ತೇಲುವ ಗುಳ್ಳೆಗಳು ಸಿಡಿಯುತ್ತಲೇ ಇರುವಾಗ ಬೆಕ್ಕು ಒಂದು ಬಾರಿ ಬಬಲ್ ಎಲ್ಲಿಗೆ ಹೋಯಿತು ಎಂದು ಹುಡುಕಾಡಿದೆ. ಈ ವೈರಲ್ ವೀಡಿಯೊ ಅನೇಕರನ್ನು ನಗೆಯಲ್ಲಿ ತೇಲಿಸಿದ, ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಆ ವೀಡಿಯೊ ಇಲ್ಲಿದೆ ನೋಡಿ.

ಈ ವಿಡಿಯೊದಲ್ಲಿ ಗುಳ್ಳೆಗಳ ಚಲನೆಯನ್ನು ನೋಡಿ ಬೆಕ್ಕುಗಳಿಗೆ ಗೊಂದಲ ಉಂಟಾಗಿದೆ. ಈ ವೀಡಿಯೊದ ಜೊತೆಗೆ ಒಂದು ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಎರಡು ಬೆಕ್ಕುಗಳು ಗುಳ್ಳೆಯನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ. ಈ ಎರಡು ಬೆಕ್ಕುಗಳಲ್ಲಿ ಒಂದು ಬೆಕ್ಕು ಈ ಗುಳ್ಳೆಯನ್ನು ಗಮನಿಸುವುದಿಲ್ಲ. ಆದರೆ ಇನ್ನೊಂದು ಬೆಕ್ಕು ವಸ್ತುವಿನಂತೆ ತೇಲುವ ಹೊಳೆಯುವ ಗುಳ್ಳೆಯನ್ನು ನೋಡುತ್ತದೆ. ಗುಳ್ಳೆ ಹರುವುದನ್ನು ಕಂಡು ತಕ್ಷಣವೇ ಕುತೂಹಲದಿಂದ ಅದರ ಜತೆಗೆ ಆಟವಾಡಲು ಮುಂದಾಗುತ್ತದೆ. ಗುಳ್ಳೆ ನೆಲಕ್ಕೆ ಬಿದ್ದ ತಕ್ಷಣ ಸಿಡಿಯುತ್ತಿದ್ದಂತೆ, ಬೆಕ್ಕು ಮುಖದಲ್ಲಿ ಗೊಂದಲದ ನೋಟ ಮೂಡುತ್ತದೆ ಮತ್ತು ಬೆಕ್ಕು ಅದನ್ನು ಹುಡುಕುತ್ತಲೇ ಇರುತ್ತದೆ. ಗುಳ್ಳೆಯು ತನ್ನ ದಾರಿಯಲ್ಲಿ ಬಂದಾಗಲೆಲ್ಲಾ ಅದು ಸಿಡಿಯುತ್ತದೆ.

Confused by the bubbles! by u/1TimeT00Many in AnimalsBeingDerps

ಈ ವೀಡಿಯೊವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡಾಗಿನಿಂದ, ವೀಡಿಯೊ 2,300 ಕ್ಕೂ ಹೆಚ್ಚು ಲೈಕ್ ಪಡೆಯುತ್ತಿದೆ. ಈ ವಿಡಿಯೊವನ್ನು ರೀ ಶೇರ್ ಮಾಡಿದ್ದಾರೆ. ಈ ವಿಡಿಯೊ ಬಗ್ಗೆ ಅನೇಕ ರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ಒಬ್ಬ ಬಳಕೆದಾರ ಈ ವಿಡಿಯೊವನ್ನು ನೋಡಿ ಎಲ್ಲಿ ಹೋಯಿತು? ಇದು ಯಾವ ವಾಮಾಚಾರ?! ಬೆಕ್ಕಿನ ಆಲೋಚನೆಗಳನ್ನು ಕಲ್ಪಿಸಿಕೊಂಡು ಕಾಮೆಂಟ್ ಮಾಡಿದ್ದಾರೆ. ನಾನು ಇವತ್ತು ನನ್ನ ಬೆಕ್ಕಿನ ಜೊತೆಗೆ ಈ ಆಟವನ್ನು ಪ್ರಯೋಗ ಮಾಡಬೇಕು ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ