ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಳ್ಳಲು. ಕಾಲಬದಲಾಗುತ್ತಿದ್ದಂತೆ ಪುರುಷರಿಗಂತಲೇ ಸೀಮಿತವಾಗಿದ್ದ ಕ್ಷೇತ್ರಗಳಲ್ಲೆಲ್ಲಾ ಮಹಿಳೆಯರು ಬಂದು ಸಾಧನೆ ಮಾಡಲು ತೊಡಗಿದ್ದಾರೆ. ಮಹಿಳೆಯರು ಬೈಕ್, ಆಟೋವನ್ನು ಮಹಿಳೆಯರು ಬಿಡುವುದು ಸದ್ಯದ ಮಟ್ಟಿಗೆ ಸಾಮಾನ್ಯವಾಗಿವೆ. ಅದಾಗ್ಯೂ ರೈಲು, ಮೆಟ್ರೋ ರೈಲು, ಬಸ್ ಬಿಡುತ್ತಿರುವ, ವಿಮಾನ ಹಾರಾಟ ನಡೆಸಿದ ನಿದರ್ಶನಗಳು ನಮ್ಮ ಕಣ್ಣಮುಂದೆಯೇ ಇದೆ. ಇಷ್ಟು ಮಾತ್ರವಲ್ಲ, ಇದೀಗ ಘನ ವಾಹನ ಲಾರಿಯೊಂದನ್ನು ಮಹಿಳೆಯೊಬ್ಬಳು ಚಲಾಯಿಸುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಟ್ರಕ್ವೊಂದರಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು, ಹಿಂಬಂದಿಯಿಂದ ಬರುತ್ತಿದ್ದ ಘನ ಲಾರಿಯೊಂದರ ವಿಡಿಯೋ ಮಾಡಿದ್ದಾರೆ. ಈ ಲಾರಿಯಲ್ಲಿ ಚಾಲಕಿಯಾಗಿರುವುದು ಓರ್ವ ಮಹಿಳೆ ಎಂಬುದು ವಿಶೇಷ. ವಿಡಿಯೋ ಮಾಡುತ್ತಿರುವುದನ್ನ ನೋಡಿದ ಮಹಿಳಾ ಚಾಲಕಿ ನಗಾಡಿದ್ದಾರೆ. ಲಾರಿ ಚಾಲಿಸುತ್ತಿರುವಾಗ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಏನೋ ಮಾತನಾಡಿದ್ದು ಅದಕ್ಕೆ ಮಹಿಳಾ ಚಾಲಕಿ ಅದಿನ್ನೇನೂ ಉತ್ತರವನ್ನು ನೀಡಿದ್ದಾರೆ. ವಿಡಿಯೋ ಕ್ಲಿಪ್ಗೆ ಮ್ಯೂಸಿಕ್ ಹಾಕಿರುವುದರಿಂದ ಅವರ ಸಂಭಾಷಣೆ ಕೇಳಿಸುವುದಿಲ್ಲ.
ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹೃದಯಸ್ಪರ್ಶಿ ವಿಡಿಯೋ ಇಂಟರ್ನೆಟ್ನಲ್ಲಿ ವಿಸ್ಮಯ ಮೂಡಿಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಘನ ವಾಹನ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅವನೀಶ್ ಹಂಚಿಕೊಂಡಿರುವ ವಿಡಿಯೋ 3.55 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಹಾಗೂ 18 ಸಾವಿರಕ್ಕೂ ಹೆಚ್ಚು ಲೈಕ್ಗಳು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ರೀಟ್ವೀಟ್ಗಳು ಆಗಿವೆ.
ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ಅವಳ ಬಗ್ಗೆ ಹೆಮ್ಮೆಯಿದೆ… ಅತ್ಯುತ್ತಮವಾಗಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, “ಆ ನಗು… ಅದ್ಭುತ!” ಎಂದರೆ, ಮಗದೊಬ್ಬರು, “ಸ್ಫೂರ್ತಿದಾಯಕ” ಎಂದು ಹೇಳಿಕೊಂಡಿದ್ದಾರೆ. ಮಗದೊಬ್ಬರು ಪ್ರತಿಕ್ರಿಯಿಸಿ, “ಅವಳ ಆತ್ಮವಿಶ್ವಾಸದ ಮಟ್ಟವು ತುಂಬಾ ಹೆಚ್ಚಾಗಿದೆ. ಹ್ಯಾಟ್ಸ್ ಆಫ್” ಎಂದಿದ್ದಾರೆ.
Published On - 5:01 pm, Mon, 18 July 22