ಆರ್ಡರ್ ಮಾಡಿದ್ದು ಮಟರ್ ಪನೀರ್, ಪಾರ್ಸೆಲ್​ನಲ್ಲಿ ಬಂದದ್ದು ಚಿಕನ್ ಕರಿ; ಹೊಟೇಲ್​ಗೆ 20,000 ರೂಪಾಯಿ ದಂಡ

ಸಸ್ಯಹಾರಿ ಗ್ರಾಹಕರಿಗೆ ಮಟರ್ ಪನೀರ್ ಬದಲಿಗೆ ಚಿಕನ್ ಕರಿ ವಿತರಿಸಿದ ಗ್ವಾಲಿಯರ್‌ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್​ಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ.

ಆರ್ಡರ್ ಮಾಡಿದ್ದು ಮಟರ್ ಪನೀರ್, ಪಾರ್ಸೆಲ್​ನಲ್ಲಿ ಬಂದದ್ದು ಚಿಕನ್ ಕರಿ; ಹೊಟೇಲ್​ಗೆ 20,000 ರೂಪಾಯಿ ದಂಡ
ಮಟರ್ ಪನೀರ್ ಮತ್ತು ಚಿಕನ್ ಕರಿ
Follow us
TV9 Web
| Updated By: Rakesh Nayak Manchi

Updated on: Jul 18, 2022 | 6:54 PM

ಆಹಾರ ವಿತರಣಾ ಅಪ್ಲಿಕೇಶನ್‌ಗಳು ನಮ್ಮ ಜೀವನವನ್ನು ತುಲನಾತ್ಮಕವಾಗಿ ಸುಲಭಗೊಳಿಸಿದರೂ ಕೆಲವೊಮ್ಮೆ ಆಗುವ ತಪ್ಪುಗಳು ಗಂಭೀರವಾಗಿ ಪರಿಣಮಿಸುತ್ತದೆ. ಆರ್ಡರ್ ಮಾಡುವುದು ಒಂದು, ಕೈಗೆ ತಲುಪುದು ಇನ್ನೊಂದು, ಈ ರೀತಿಯ ಘಟನೆಗಳು ಆಗಾಗೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಪರಿಣಾಮವಾಗಿ ಹೊಟೇಲ್​ಗೆ 20ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಗ್ವಾಲಿಯರ್‌ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್​ ಸಸ್ಯಹಾರಿ ಗ್ರಾಹಕರಿಗೆ ಮಟರ್ ಪನೀರ್ ಬದಲಿಗೆ ಚಿಕನ್ ಕರಿ ವಿತರಿಸಿ ತಕ್ಷ ಶಿಕ್ಷೆಯನ್ನು ಅನುಭವಿಸಿದೆ. 

ವಕೀಲ ಸಿದ್ಧಾರ್ಥ್ ಶ್ರೀವಾಸ್ತವ ಎಂಬವರು ಜಿವಾಜಿ ಕ್ಲಬ್ ರೆಸ್ಟೋರೆಂಟ್​ನಿಂದ ಝೋಮ್ಯಾಟೊ ಮೂಲಕ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಅದರಂತೆ ಆರ್ಡರ್ ಬಂದು ಕೈಸೇರಿದಾಗ ಮಟರ್ ಪನೀರ್ ಬದಲಿಗೆ ಚಿಕನ್ ಕರಿಯನ್ನು ತಪ್ಪಾಗಿ ನೀಡಿರುವುದು ತಿಳಿದುಬಂದಿದೆ. ಇದರಿಂದ ಅಸಮಧಾನಗೊಂಡ ಸಿದ್ಧಾರ್ಥ್, ಗ್ರಾಹಕರ ವೇದಿಕೆಯ ಬಾಗಿಲು ತಟ್ಟಿದರು. ಕ್ಲಬ್‌ನ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಿದ್ಧಾರ್ಥ್ ಆರೋಪಿಸಿದ್ದು, ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಾಗಿದೆ.

ಘಟನೆಯಿಂದ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಹೇಳಿದ ಗ್ರಾಹಕರ ವೇದಿಕೆ, ದೂರುದಾರರು ಕಾನೂನು ಹೋರಾಟದ ಸಂದರ್ಭದಲ್ಲಿ ಮಾಡಿದ ವೆಚ್ಚವನ್ನು ಮರುಪಾವಿತಿಸುವಂತೆ ಸೂಚಿಸಿ 20,000 ರೂ. ದಂಡ ವಿಧಿಸಿ ನಿರ್ದೇಶನ ಹೊರಡಿಸಿದೆ.

ವೇದಿಕೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದ್ದು, “ಇದು ಸೇವೆಯ ಕೊರತೆಯಾಗಿದ್ದು, ನಿರ್ಲಕ್ಷ್ಯದ ಪ್ರಕರಣವೂ ಆಗಿದೆ. ದೂರುದಾರರಿಗೆ ಮಾನಸಿಕ ಮತ್ತು ದೈಹಿಕ ತೊಂದರೆಯಾಗಿದ್ದು, ದಂಡದ ಮೊತ್ತದ ಜೊತೆಗೆ ದೂರುದಾರರು ವೇದಿಕೆ ಮೂಲಕ ಮಾಡಿದ ಕಾನೂನು ಹೋರಾಟಕ್ಕೆ ವ್ಯಯಿಸಿದ ವೆಚ್ಚವನ್ನು ಸಹ ಕ್ಲಬ್ ಪಾವತಿಸಬೇಕಾಗುತ್ತದೆ.