EPF: ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಒಂದು ಗಂಟೆಯ ಒಳಗಡೆ EPF ಹಣ ಪಡೆಯುವುದು ಹೇಗೆ?
ಅರ್ಹ ನೌಕರರು ತಮ್ಮ ಭವಿಷ್ಯ ನಿಧಿಯಿಂದ ಮುಂಗಡವಾಗಿ 1 ಲಕ್ಷ ರೂ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಅವಕಾಶ ಇದೆ.

ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನೌಕರರ ಪಾಲಿಗೆ ಆರ್ಥಿಕ ಭರವಸೆ ಅಂದರೇ ಅದು ನೌಕರರ ಭವಿಷ್ಯ ನಿಧಿ (EPF) ಅಂದರೇ ತಪ್ಪಾಗಲಾರದು. ಇತ್ತೀಚೆಗಷ್ಟೆ ಇದರಲ್ಲಿ ಮಹತ್ವದ ಬದಲಾವಣೆ ಕೂಡ ತರಲಾಗಿದ್ದು ಅರ್ಹ ನೌಕರರು ತಮ್ಮ ಭವಿಷ್ಯ ನಿಧಿಯಿಂದ ಮುಂಗಡವಾಗಿ 1 ಲಕ್ಷ ರೂ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ (Medical Emergency ) ಹಣವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಲು ಅವಕಾಶ ಇದೆ. ಅಧಿಕೃತ EPFO ನ ವೆಬ್ಸೈಟ್ನಲ್ಲಿ ಅಗತ್ಯ ಮಾಹಿತಿ ನೀಡುವ ಮೂಲಕ ಕೇವಲ ಒಂದು ಗಂಟೆಯಲ್ಲಿ ಹಣ ಪಡೆದುಕೊಳ್ಳಬಹುದು. ಈ ಹಿಂದೆ, ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಇಪಿಎಫ್ ಖಾತೆಯಿಂದ ಮುಂಗಡ ತೆಗೆದುಕೊಳ್ಳಲು ಇಪಿಎಫ್ ಅನುಮತಿ ನೀಡಿತ್ತು. ಆದರೆ, ಈ ಮೊತ್ತವು ವೆಚ್ಚದ ಅಂದಾಜುಗಳ ಆಧಾರದ ಮೇಲೆ ಅಥವಾ ವೈದ್ಯಕೀಯ ಬಿಲ್ ಗಳ ಮರುಪಾವತಿಯ ನಂತರವೇ ಲಭ್ಯವಿತ್ತು. ಆದರೆ, ಈ ವೈದ್ಯಕೀಯ ಮುಂಗಡವು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ಇಪಿಎಫ್ ಸದಸ್ಯರು ಯಾವುದೇ ಬಿಲ್ ಅಥವಾ ಅಂದಾಜು ವೆಚ್ಚವನ್ನು ತೋರಿಸುವ ಅಗತ್ಯವಿಲ್ಲ, ಕೇವಲ ಅರ್ಜಿ ಸಲ್ಲಿಸಿ ಮತ್ತು ಮೊತ್ತವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ.
ನೌಕರರು ಕೆಲಸದಿಂದ ನಿವೃತ್ತರಾದಾಗ ಅಥವಾ ಎರಡು ತಿಂಗಳಗಿಂತಲೂ ಹೆಚ್ಚು ಕಾಲ ನಿರುದ್ಯೋಗಿಯಾದ ಸಂದರ್ಭದಲ್ಲಿ ಪಿಎಫ್ನ ಸಂಪೂರ್ಣ ಹಣ ಪಡೆದುಕೊಳ್ಳುವ ಅವಕಾಶ ಕೂಡ ಇದೆ. ಇದರ ಜೊತೆಗೆ ವೈದ್ಯಕೀಯ, ಗೃಹ ಸಾಲ, ಗೃಹ ಸಾಲ ಮರುಪಾವತಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳಬಹುದು. ಹಾಗಾದರೇ EPFOನ ವೆಬ್ಸೈಟ್ ನಿಂದ ಹಣ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.
- ಮೊದಲು epfindia.gov.inಗೆ ಲಾಗಿನ್ ಆಗಿರಿ.
- ವೆಬ್ಸೈಟ್ನ ಮುಖಪುಟದ ಬಲ ಮೂಲೆಯಲ್ಲಿ ಆನ್ಲೈನ್ ಸರ್ವಿಸ್ ಮತ್ತು ಕ್ಲೈಮ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
- ಈಗ ಹೊಸ ಪೇಜ್ ಒಂದು ತೆರೆಯಲಿದ್ದು, ಇಲ್ಲಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ UAN ಅನ್ನಿ ಲಿಂಕ್ ಮಾಡಬೇಕು. ಜೊತೆಗೆ ಅಲ್ಲಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.
- ಈಗ ಪ್ರೊಸಿಡ್ ಫಾರ್ ಆನ್ಲೈನ್ ಕ್ಲೈಮ್ ಎಂದು ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಅಲ್ಲಿರುವ ಆಯ್ಕೆಯಲ್ಲಿ medical emergency ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಇದಾದ ಬಳಿಕ ಒಂದು ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ. ಇದರ ಜೊತೆಗೆ UMANG ವೆಬ್ಸೈಟ್ ಮೂಲಕ ಹಣ ಪಡೆದುಕೊಳ್ಳಬಹುದಾಗಿದೆ.
ಇದನ್ನು ನೆನಪಿಟ್ಟುಕೊಳ್ಳಿ:
- ರೋಗಿಯನ್ನು ಚಿಕಿತ್ಸೆಗಾಗಿ ಸರ್ಕಾರಿ/ಸಾರ್ವಜನಿಕ ವಲಯದ ಘಟಕ/ಸಿಜಿಎಚ್ ಎಸ್ ಪ್ಯಾನಲ್ ಆಸ್ಪತ್ರೆಗೆ ದಾಖಲಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಆಗ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಾರೆ ಮತ್ತು ನಂತರ ಅವರ ವೈದ್ಯಕೀಯ ಮುಂಗಡವನ್ನು ನೀಡಲಾಗುತ್ತದೆ.
- ಉದ್ಯೋಗಿ ಅಥವಾ ಕುಟುಂಬದ ಯಾವುದೇ ಸದಸ್ಯರು ಆಸ್ಪತ್ರೆ ಮತ್ತು ರೋಗಿಯ ವಿವರಗಳನ್ನು ನೀಡುವ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ, ವೆಚ್ಚದ ಅಂದಾಜು ಇಲ್ಲ ಮತ್ತು ವೈದ್ಯಕೀಯ ಮುಂಗಡವನ್ನು ನೀಡಬೇಕು ಎಂದು ಉಲ್ಲೇಖಿಸುತ್ತದೆ.
- ಆಸ್ಪತ್ರೆಗೆ ದಾಖಲಾಗಲು ಸಹಾಯಕ್ಕಾಗಿ ಸದಸ್ಯರಿಂದ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಿಂದ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ಈ ಮೊತ್ತವನ್ನು ಸ್ವೀಕರಿಸಲಾಗುತ್ತದೆ.
SMS ಮೂಲಕ PF ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ?:
ಪ್ರತಿಯೊಬ್ಬ EPFO ಸದಸ್ಯರು ತಮ್ಮದೆ UAN ( ಸಾರ್ವತ್ರಿಕ ಖಾತೆ ಸಂಖ್ಯೆ) ಹೊಂದಿದ್ದಾರೆ. PF ಖಾತೆಯ ಬಾಕಿಯನ್ನು ತಿಳಿಯಲು, ನೌಕರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಯಿಂದ 7738299899 ಗೆ ‘ EPFOHO UAN ENG ‘ ಗೆ SMS ಕಳುಹಿಸಬಹುದು. ಈ ಮೂಲಕ ನೌಕರರು ಅವರ ಪಿಎಫ್ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ. ಉಮಂಗ್ ಆಪ್ ಮೂಲಕವು ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದು.
Published On - 11:24 am, Tue, 19 July 22








