AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible oil price: ಗುಡ್​ ನ್ಯೂಸ್…ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ

Edible oil price: ಈ ಹಿಂದೆ ಜೂನ್ 18 ರಂದು ಕಂಪನಿಯು ಲೀಟರ್‌ಗೆ 10 ರೂ. ಕಡಿತಗೊಳಿಸಿತ್ತು. ಇದೀಗ ಮತ್ತೆ 30 ರೂ. ಕಡಿಮೆ ಮಾಡಿದ್ದು, ಹೊಸ ಎಂಆರ್‌ಪಿಯೊಂದಿಗೆ ತಾಜಾ ಸ್ಟಾಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

Edible oil price: ಗುಡ್​ ನ್ಯೂಸ್...ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ
Edible oil price
TV9 Web
| Edited By: |

Updated on:Jul 19, 2022 | 10:34 AM

Share

ಕೇಂದ್ರ ಸರ್ಕಾರ ಖಾದ್ಯ ತೈಲಗಳ ಮೇಲಿನ ತೆರಿಗೆ ಮೊತ್ತವನ್ನು ಇಳಿಸಿದ ಬೆನ್ನಲ್ಲೇ, ಇದೀಗ ಅದಾನಿ ವಿಲ್ಮರ್ (Adani Wilmar) ಕಂಪೆನಿಯು ಅಡುಗೆ ಎಣ್ಣೆ (Edible oil price) ಮೇಲೆ ಬರೋಬ್ಬರಿ 30 ರೂ. ಕಡಿತ ಮಾಡುವುದಾಗಿ ಷೋಷಿಸಿದೆ. ಖಾದ್ಯ ತೈಲ ಬೆಲೆಯಲ್ಲಿ ಜಾಗತಿಕ ಕುಸಿತದ ನಡುವೆ, ಕಂಪನಿಯು ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆಗಳನ್ನು ಕಡಿಮೆ ಮಾಡಿರುವುದು ವಿಶೇಷ. ಹೊಸ MRP (ಗರಿಷ್ಠ ಚಿಲ್ಲರೆ ಬೆಲೆ) ಯೊಂದಿಗೆ ಖಾದ್ಯ ತೈಲಗಳ ತಾಜಾ ಸ್ಟಾಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಅಹಮದಾಬಾದ್ ಮೂಲದ ಅದಾನಿ ವಿಲ್ಮರ್ ಕಂಪನಿ ತಿಳಿಸಿದೆ. ಕಂಪನಿಯು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುತ್ತದೆ. ಈ ಕಂಪೆನಿಯು ಸುಮಾರು 20 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಹೀಗಾಗಿ ತೈಲ ಬೆಲೆ ಇಳಿಕೆಯ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಸಿಗಲಿದೆ.

ಅದಾನಿ ವಿಲ್ಮರ್ ಪ್ರಕಾರ, ಸೋಯಾಬೀನ್ ಎಣ್ಣೆಯ ಬೆಲೆಯಲ್ಲಿ ಗರಿಷ್ಠ ಕಡಿತಗೊಳಿಸಲಾಗಿದೆ. ಅದರಂತೆ ಸೋಯಾಬೀನ್ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಕೆಯಾಗಿದೆ. ಆದರೆ ಸಾಸಿವೆ ಎಣ್ಣೆ ಬೆಲೆಯಲ್ಲಿ ಕನಿಷ್ಠ ಕಡಿತವನ್ನು ಮಾಡಲಾಗಿದೆ. ಇದರ ಬೆಲೆ 195 ರಿಂದ 190 ರೂ.ಗೆ ಇಳಿಕೆ ಮಾಡಲಾಗಿದೆ.

ಕೇಂದ್ರ ಆಹಾರ ಸಚಿವಾಲಯದ ನಿರ್ದೇಶನದ ನಂತರ MRP ನಲ್ಲಿ ಕಡಿತ ಮಾಡಲಾಗಿದೆ. ಜಾಗತಿಕ ಖಾದ್ಯ ತೈಲ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಜುಲೈ 6 ರಂದು ಸಚಿವಾಲಯವು ಖಾದ್ಯ ತೈಲ ಕಂಪನಿಗಳಿಗೆ ಸೂಚಿಸಿದೆ. ಧಾರಾ ಬ್ರಾಂಡ್‌ನಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುವ ಪ್ರಮುಖ ಹಾಲು ಪೂರೈಕೆದಾರ ಮದರ್ ಡೈರಿ, ಸೋಯಾಬೀನ್ ಮತ್ತು ರೈಸ್ ಬ್ರಾನ್ ಎಣ್ಣೆಯನ್ನು ಪ್ರತಿ ಲೀಟರ್‌ಗೆ 14 ರೂ.ವರೆಗೆ ಕಡಿತಗೊಳಿಸಿದೆ.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Image
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Image
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಸೋಮವಾರ ಅದಾನಿ ಗ್ರೂಪ್ ಮತ್ತು ಸಿಂಗಾಪುರದ ವಿಲ್ಮರ್ ಗ್ರೂಪ್ ನಡುವಿನ ಜಂಟಿ ಉದ್ಯಮ – ಖಾದ್ಯ ತೈಲಗಳ MRP ಯನ್ನು ಲೀಟರ್‌ಗೆ 30 ರೂಪಾಯಿಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಹಿಂದೆ ಜೂನ್ 18 ರಂದು ಕಂಪನಿಯು ಲೀಟರ್‌ಗೆ 10 ರೂ. ಕಡಿತಗೊಳಿಸಿತ್ತು. ಇದೀಗ ಮತ್ತೆ 30 ರೂ. ಕಡಿಮೆ ಮಾಡಿದ್ದು, ಹೊಸ ಎಂಆರ್‌ಪಿಯೊಂದಿಗೆ ತಾಜಾ ಸ್ಟಾಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಹೊಸ ದರಗಳು ಹೀಗಿರಲಿದೆ:

  • ಫಾರ್ಚೂನ್ ಸೋಯಾಬೀನ್ ಎಣ್ಣೆ ಪ್ರತಿ ಲೀಟರ್​​ ಗೆ- 165 ರೂ. (ಹಿಂದಿನ ದರ 195 ರೂ.)
  • ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್​ ಗೆ- 199 ರೂ.(ಹಿಂದಿನ ದರ 210 ರೂ.)
  • ಸಾಸಿವೆ ಎಣ್ಣೆ ಪ್ರತಿ ಲೀಟರ್‌ಗೆ- 190 ರೂ. (ಹಿಂದಿನ ದರ 195 ರೂ.)
  • ಫಾರ್ಚೂನ್ ರೈಸ್ ಬ್ರಾನ್ ಎಣ್ಣೆ ಪ್ರತಿ ಲೀಟರ್‌ಗೆ – 210 ರೂ. (ಹಿಂದಿನ ದರ 225 ರೂ.)
  • ಶೇಂಗಾ ಎಣ್ಣೆ ಪ್ರತಿ ಲೀಟರ್‌ಗೆ- 210 ರೂ. (ಹಿಂದಿನ ದರ 220 ರೂ.)

Published On - 10:33 am, Tue, 19 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ