- Kannada News Photo gallery Cricket photos Steve Smith sold his Sydney Mansion for a whopping 65 Crore
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Steve Smith: ಈ ಬಾರಿ ಐಪಿಎಲ್ ಆಡದಿದ್ದರೂ ಸ್ಟೀವ್ ಸ್ಮಿತ್ ಒಂದೇ ವರ್ಷದೊಳಗೆ ಬರೋಬ್ಬರಿ 30 ಕೋಟಿ ಲಾಭಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
Updated on:Jul 09, 2022 | 4:09 PM

ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಅಷ್ಟೇ ಯಾಕೆ ಬದಲಿ ಆಟಗಾರನಾಗಿಯೂ ಕೂಡ ಐಪಿಎಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಒಂದೇ ವರ್ಷದೊಳಗೆ ಸ್ಟೀವ್ ಸ್ಮಿತ್ ಬರೋಬ್ಬರಿ 30 ಕೋಟಿ ಲಾಭಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಸ್ಟೀವ್ ಸ್ಮಿತ್ ಹೀಗೆ ಲಾಭಗಳಿಸಿದ್ದು ತಮ್ಮ ಮನೆಯ ಮಾರಾಟದಿಂದ ಎಂಬುದು ವಿಶೇಷ. ಮೊದಲೇ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ. ಇನ್ನು ಸ್ಮಿತ್ ಅವರ ಮನೆ ಖರೀದಿಗೆ ದೊಡ್ಡ ಕುಳಗಳ ದಂಡೇ ಕ್ಯೂನಲ್ಲಿರುತ್ತದೆ. ಅಂತದ್ರಲ್ಲಿ ಸ್ಮಿತ್ ಸಿಡ್ನಿಯ ದಿ ಕಿಂಗ್ಸ್ ರೋಡ್ನಲ್ಲಿರುವ ಮನೆಯನ್ನು ಮಾರಾಟ ಮಾಡಿದ್ದಾರೆ.

ದಿ ಕಿಂಗ್ಸ್ ರೋಡ್ ಆಸ್ಟ್ರೇಲಿಯಾದ ಅತ್ಯಂತ ಸುರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಈ ಪ್ರದೇಶದಲ್ಲಿ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳಿವೆ. ಇಂತಹ ಪ್ರದೇಶದಲ್ಲಿದ್ದ ಮನೆಯನ್ನು ಸ್ಮಿತ್ ಬರೋಬ್ಬರಿ 12.30 ಮಿಲಿಯನ್ ಆಸ್ಟ್ರೇಲಿಯಾ ಡಾಲರ್ಗೆ ಮಾರಾಟ ಮಾಡಿದ್ದಾರೆ.

ಹರಾಜಿನ ಮೂಲಕ ಮಾರಾಟ ಮಾಡಲಾದ ಈ ಮನೆಗೆ 11.5 ಮಿಲಿಯನ್ ಆರಂಭಿಕ ಬಿಡ್ ಎಂದು ನಿಗದಿಪಡಿಸಲಾಗಿತ್ತು. ಅದರಂತೆ ಶುರುವಾದ ಮಿಲಿಯನ್ ಡಾಲರ್ ಹರಾಜು ಅಂತಿಮವಾಗಿ 12.38 ಮಿಲಿಯನ್ ಡಾಲರ್ಗೆ ಬಂದು ನಿಂತಿದೆ. ಅಂದರೆ ಸುಮಾರು 65 ಕೋಟಿ ರೂ.ಗೆ ಮನೆ ಮಾರಾಟವಾಗಿದೆ.

ವಿಶೇಷ ಎಂದರೆ ಸ್ಟೀವ್ ಸ್ಮಿತ್ ಈ ಮನೆಯನ್ನು ಖರೀದಿಸಿದ್ದು ಕೇವಲ 6.6 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗೆ. ಅಂದರೆ ಇದೀಗ ಡಬಲ್ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 30 ಕೋಟಿಗೂ ಅಧಿಕ ಮೊತ್ತವನ್ನು ಲಾಭ ಪಡೆದಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ನಲ್ಲಿ ಕಾಣಿಸಿಕೊಳ್ಳದಿದ್ದರೂ ಬಿಸಿನೆಸ್ ಡೀಲ್ ಮೂಲಕ ಸ್ಟೀವ್ ಸ್ಮಿತ್ 30 ಕೋಟಿ ಆದಾಯಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
Published On - 2:24 pm, Sat, 9 July 22














