NPS: ಮೊಬೈಲ್​ ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎನ್​ಪಿಎಸ್ ಅಕೌಂಟ್​ ಆರಂಭ!

ಗ್ರಾಹಕರು ಇದೀಗ ಎನ್​ಪಿಎಸ್ ಖಾತೆಯನ್ನು ಕೇವಲ ಒಂದು ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತೆರೆಯಬಹುದಾಗಿದೆ ಎಂದು ಪಿಂಚಣಿ ನಿಧಿ ಪ್ರಾಧಿಕಾರ ಮತ್ತು ಬ್ಯಾಂಕ್​ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

NPS: ಮೊಬೈಲ್​ ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎನ್​ಪಿಎಸ್ ಅಕೌಂಟ್​ ಆರಂಭ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 18, 2022 | 2:29 PM

ದೆಹಲಿ: ಪಿಂಚಣಿ ನಿಧಿ ನಿಯಂತ್ರಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ (Pension Fund Regulatory and Development Authority- PFRDA) ಒಪ್ಪಂದ ಮಾಡಿಕೊಂಡಿರುವ ಬ್ಯಾಂಕ್ ಆಫ್ ಇಂಡಿಯಾ (Bank of India – BOI) ಕಾಗದ ರಹಿತ ವಿಧಾನದಲ್ಲಿ ಎನ್​ಪಿಎಸ್ (National Pension System – NPS) ಖಾತೆ ತೆರೆಯಲು ಅವಕಾಶ ಮಾಡಿಕೊಡುವ ವ್ಯವಸ್ಥೆಯನ್ನು ಪರಿಚಯಿಸಿದೆ. ಗ್ರಾಹಕರು ಇದೀಗ ಎನ್​ಪಿಎಸ್ ಖಾತೆಯನ್ನು ಕೇವಲ ಒಂದು ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತೆರೆಯಬಹುದಾಗಿದೆ ಎಂದು ಪಿಂಚಣಿ ನಿಧಿ ಪ್ರಾಧಿಕಾರ ಮತ್ತು ಬ್ಯಾಂಕ್​ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕ್ಯುಆರ್​ ಕೋಡ್ ಸ್ಕ್ಯಾನ್ ಮಾಡಿದಾಗ ಅದು ನಿಮ್ಮನ್ನು ಎನ್​ಪಿಎಸ್ ಖಾತೆ ತೆರೆಯಲು ಇರುವ ವೆಬ್​ಪೇಜ್​ಗೆ ಕರೆದೊಯ್ಯುತ್ತದೆ. ಅಲ್ಲಿ ನೀವು ಆಧಾರ್ ವಿವರ ಕೊಡಬೇಕು. ನಿಮ್ಮ ಭಾವಚಿತ್ರ ಹಾಗೂ ಇತರ ವಿವರಗಳನ್ನು ಅದೇ ವೆಬ್​ಪೇಜ್​ ಡಿಜಿಲಾಕರ್ ಮೂಲಕ ಪಡೆದುಕೊಳ್ಳುತ್ತದೆ. ಹೊಸ ಸೌಲಭ್ಯಕ್ಕೆ PFRDA ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್​ ಆಫ್ ಇಂಡಿಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಕೆ.ದಾಸ್ ಮತ್ತು ಕಾರ್ಯಕಾರಿ ನಿರ್ದೇಶಕ ಸ್ವರೂಪ್ ದಾಸ್​ಗುಪ್ತ ಉಪಸ್ಥಿತರಿದ್ದರು.

ಡಿಜಿಟಲ್ ವಿಧಾನದಲ್ಲಿ ಖಾತೆ ತೆರೆಯುವುದು ಅತ್ಯಂತ ಸುಲಭವಾಗಿ ಮತ್ತು ಬೇಗನೇ ಆಗುತ್ತದೆ. ಕೆಲವೇ ಕ್ಲಿಕ್​ಗಳಲ್ಲಿ ನಿಮ್ಮ ಖಾತೆ ಆರಂಭವಾಗಿ ಎನ್​ಪಿಎಸ್​ ನಂಬರ್​ ಸಿಗುತ್ತದೆ. ನಿಮ್ಮ ಎನ್​ಪಿಎಸ್ ಖಾತೆಗೆ ಹೆಚ್ಚುವರಿಯಾಗಿ ಹಣ ಪಾವತಿ ಮಾಡಲು ಇದೇ ಕ್ಯುಆರ್ ಕೋಡ್ ನೆರವಾಗಲಿದೆ.

ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅತ್ಯುತ್ತಮ ಯೋಜನೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂಬುದು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆ. ಚಂದಾದಾರರು ತಮ್ಮ ಭವಿಷ್ಯವನ್ನು ಪಿಂಚಣಿ ರೂಪದಲ್ಲಿ ಭದ್ರಪಡಿಸಿಕೊಳ್ಳಲು ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಸರ್ಕಾರದ ಬೆಂಬಲದೊಂದಿಗೆ ಎನ್​ಪಿಎಸ್​ ಹೂಡಿಕೆಯು ಈಕ್ವಿಟಿ ಮತ್ತು ಸಾಲಪತ್ರಗಳ ಇನ್​ಸ್ಟ್ರುಮೆಂಟ್​ಗಳಲ್ಲಿ ಹಣ ತೊಡಗಿಸಲು ಮಾನ್ಯತೆ ನೀಡುತ್ತದೆ. ಪಿಪಿಎಫ್​, ಇಪಿಎಫ್​, ಸುಕನ್ಯಾ ಸಮೃದ್ಧಿ, ಇತ್ಯಾದಿಗಳಂತೆ, ಈ ಸ್ವಯಂಪ್ರೇರಿತ ಕೊಡುಗೆಯ ಪಿಂಚಣಿ ವ್ಯವಸ್ಥೆಯು ವಿನಾಯಿತಿ, ವಿನಾಯಿತಿ, ವಿನಾಯಿತಿ (EEE) ಸಾಧನವಾಗಿದ್ದು, ಮೆಚ್ಯೂರಿಟಿ ಮತ್ತು ಸಂಪೂರ್ಣ ಪಿಂಚಣಿ ಹಿಂಪಡೆಯುವ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ. ನಿವೃತ್ತಿಯ ನಂತರ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯಲು, ಹೂಡಿಕೆದಾರರು ಸಾಧ್ಯವಾದಷ್ಟು ಬೇಗ NPSನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. NPS ಪಿಂಚಣಿ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೂಲಕ, ತಿಂಗಳಿಗೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿಯನ್ನು ನೀಡುವ ನಿಧಿಯನ್ನು ಮಾಡಲು ಎಷ್ಟು ಕೊಡುಗೆ ನೀಡಬೇಕೆಂದು ಲೆಕ್ಕ ಹಾಕಬಹುದು.

ಯಾರಾದರೂ 20ನೇ ವಯಸ್ಸಿನಲ್ಲಿ NPSನಲ್ಲಿ ಮಾಸಿಕ 5,000 ರೂಪಾಯಿಗಳನ್ನು ಹೂಡಿಕೆ ಮಾಡುವುದಕ್ಕೆ ಶುರು ಮಾಡಿ, ನಿವೃತ್ತಿ ಆಗುವವರೆಗೆ ಅಥವಾ ಚಂದಾದಾರರು 60 ವರ್ಷಗಳನ್ನು ತಲುಪುವವರೆಗೆ ಹೂಡಿಕೆ ಮಾಡಿದಲ್ಲಿ NPS ಕ್ಯಾಲ್ಕುಲೇಟರ್ ಪ್ರಕಾರ, ಒಬ್ಬರು ಸುಮಾರು 1.91 ಕೋಟಿ ರೂಪಾಯಿಗಳ ಒಟ್ಟು ಮುಕ್ತಾಯ ಮೊತ್ತ ಮತ್ತು 1.27 ಕೋಟಿ ವರ್ಷಾಶನವನ್ನು ಪಡೆಯುತ್ತಾರೆ ಎಂದು ಸೂಚಿಸುತ್ತದೆ. ಮಾಸಿಕ ಪಿಂಚಣಿಗಾಗಿ ವರ್ಷಾಶನದಲ್ಲಿ ಮರು-ಹೂಡಿಕೆಯನ್ನು ಪಡೆಯುವ ಮೌಲ್ಯ. ಆದ್ದರಿಂದ 1.27 ಕೋಟಿ ವರ್ಷಾಶನ ಮೌಲ್ಯದ ಮೇಲೆ ಶೇ 6ರ ವಾರ್ಷಿಕ ಆದಾಯವನ್ನು ಊಹಿಸಿದರೆ ರೂ. 63,768 ಮಾಸಿಕ ಪಿಂಚಣಿ ಪಡೆಯುತ್ತಾರೆ.

Published On - 2:22 pm, Mon, 18 July 22

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ