ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ, ಜೊತೆಗೆ ಜೀವಮಾನ ಭದ್ರತೆಯೂ!

Postal Life Insurance Scheme Suraksha: ಒಟ್ಟು ಪಾಲಿಸಿ ಅವಧಿಯಲ್ಲಿ ರೋಹಿತ್ ಎಂಬಾತ 4,62,000 ರೂ. ಹಣ ಕಟ್ಟುತ್ತಾನೆ. ರೋಹಿತ್ ಗೆ 80 ವರ್ಷವಾದಾಗ, ಪಾಲಿಸಿ ಮೆಚ್ಯುರಿಟಿಗೆ ಬರುತ್ತದೆ. ಪಾಲಿಸಿ ಮುಕ್ತಾಯವಾದಾಗ ರೋಹಿತ್​ ಗೆ ಆರಂಭದಲ್ಲಿ 5 ಲಕ್ಷ ರೂ. ವಿಮಾ ಮೊತ್ತ ಮತ್ತು 13,30,000 ರೂ. ಬೋನಸ್ ಅಂದರೆ ಒಟ್ಟು ರೂ. 18,30,000 ಕೈಗೆ ಬರಲಿದೆ.

ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ, ಜೊತೆಗೆ ಜೀವಮಾನ ಭದ್ರತೆಯೂ!
ಅಂಚೆ ಸುರಕ್ಷಾ ವಿಮೆ ಯೋಜನೆ: ಅಂಚೆ ಕಚೇರಿಯಲ್ಲಿ ನಿತ್ಯ 35 ರೂ ಹೂಡಿದರೆ ಸಿಗುತ್ತದೆ 18 ಲಕ್ಷ ರೂ ಲಾಭ! ಜೊತೆಗೆ ಜೀವಮಾನ ಭದ್ರತೆಯೂ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 19, 2022 | 10:48 PM

ಕಡಿಮೆ ಮೊತ್ತ ಹೂಡಿಕೆ ಮಾಡಿ, ಮೆಚ್ಯೂರಿಟಿ ಬಳಿಕ ಭಾರೀ ಮೊತ್ತವನ್ನು ಪಡೆಯಲು ಬಯಸುವಿರಾ.. ಹಾಗಾದರೆ ನಿಮಗೆ ಒಂದು ಪವಾಡ ರೀತಿಯ ಯೋಜನೆ ಬಗ್ಗೆ ಇಲ್ಲಿ ಮಾಹಿತಿ ಇದೆ ನೋಡಿ. ಇದರಲ್ಲಿ ತಿಂಗಳಿಗೆ 1100 ರೂ. ಅಂದರೆ ದಿನಕ್ಕೆ 35 ರೂ. ಠೇವಣಿ ಹೂಡುತ್ತಾ ಹೋದರೆ ಮೆಚ್ಯೂರಿಟಿ ವೇಳೆಗೆ 18 ಲಕ್ಷ ರೂ. ಕ್ಕಿಂತ ಹೆಚ್ಚು ಮೊತ್ತ ಪಡೆಯಬಹುದು. ಆದರೆ, ಈ ಯೋಜನೆಯಲ್ಲಿ ಇನ್ನೂ ಒಂದು ವಿಶೇಷವಿದೆ. ಈ ವಿಶಿಷ್ಟ ಯೋಜನೆಯು ಅಲ್ಪ ಮೊತ್ತದ ಹಣವನ್ನು ಠೇವಣಿ ಮಾಡುವ ಮೂಲಕ ಲಕ್ಷಗಳ ಆದಾಯವನ್ನು ನೀಡುತ್ತದೆ ಜೊತೆಗೆ, ಜೀವನಪೂರ್ತಿ ನಿಮಗೆ ವಿಮಾ ರಕ್ಷಣೆಯನ್ನೂ ನೀಡುತ್ತದೆ. ಅಂದರೆ ವಿಮಾ ಯೋಜನಾ ಅವಧಿಯಲ್ಲಿ ನಿಮ್ಮ ಜೀವಕ್ಕೆ ಏನಾದರೂ ಅವಘಡ ಸಂಭವಿಸಿದರೆ ವಿಮಾ ರಕ್ಷಣೆಯ ಸಂಪೂರ್ಣ ಖಾತ್ರಿಯಿದೆ. ನಾಮಿನಿಗೆ ಬಡ್ಡಿ, ಅಸಲು ಸಂಪೂರ್ಣವಾಗಿ ಕೈಗೆ ಸಿಗುತ್ತದೆ. ಇದನ್ನು ಬೋನಸ್ ಪಾಲಿಸಿ ಎಂದು ಕರೆಯಲಾಗುತ್ತದೆ. ಇಂತಹ ಅಮೂಲ್ಯ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance Scheme Suraksha) ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗಾಗಿ ನೀಡಲಾಗಿದೆ.

ಈ ಅಂಚೆ ವಿಮಾ ಪಾಲಿಸಿಯನ್ನು 19 ವರ್ಷದಿಂದ 55 ವರ್ಷ ವಯಸ್ಸಿನವರು ತೆಗೆದುಕೊಳ್ಳಬಹುದು. ಪ್ರೀಮಿಯಂ ಪಾವತಿಸಲು ನೀವು 4 ಆಯ್ಕೆಗಳನ್ನು ಪಡೆಯುತ್ತೀರಿ. ನೀವು ಪ್ರೀಮಿಯಂ ಅನ್ನು 55 ವರ್ಷ ಅಥವಾ 58 ವರ್ಷ ವಯಸ್ಸಿನವರೆಗೆ. 60 ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ ಪಾವತಿಸಬಹುದು. ಈ ಪಾಲಿಸಿಯನ್ನು ಕನಿಷ್ಠ 20,000 ರೂ. ಮತ್ತು ಗರಿಷ್ಠ 50 ಲಕ್ಷ ರೂ. ವಿಮಾ ಮೊತ್ತದೊಂದಿಗೆ ತೆಗೆದುಕೊಳ್ಳಬಹುದು. ಈ ಅಂಚೆ ಜೀವ ವಿಮೆಯ ಹೆಸರು ಸುರಕ್ಷಾ.

ಇಲ್ಲೊಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ..

ಈಗ ನಾವು ಈ ಪಾಲಿಸಿಯಲ್ಲಿನ ಭದ್ರತೆಯ ವಿಧಾನ ಅರ್ಥ ಮಾಡಿಕೊಳ್ಳೋಣ. 35 ವರ್ಷದ ರೋಹಿತ್ ಅಂಚೆ ಕಚೇರಿಯಿಂದ ಈ ಭದ್ರತಾ ಸ್ಕೀಂ ಆಯ್ಕೆ ಮಾಡಿಕೊಂಡಿದ್ದಾರೆ ಅಂತಿಟ್ಟುಕೊಳ್ಳೋಣ. ರೋಹಿತ್ 5 ಲಕ್ಷ ರೂ. ಪಾಲಿಸಿ ತೆಗೆದುಕೊಂಡರು. ಪಾಲಿಸಿ ನಿಯಮಗಳ ಪ್ರಕಾರ, ರೋಹಿತ್ 80 ವರ್ಷ ವಯಸ್ಸು ಪೂರೈಸುವವರೆಗೆ ಸಂಪೂರ್ಣ ಕವರೇಜ್ ಲಭ್ಯವಿರುತ್ತದೆ. ಅಂದರೆ ರೋಹಿತ್ ಅವರ ಪಾಲಿಸಿ ಅವಧಿಯು 45 ವರ್ಷಗಳು. ರೋಹಿತ್ 70 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅವರು 35 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಮೂಲಕ ರೋಹಿತ್ ಸುಮಾರು 1100 ರೂ. ಪಾವತಿಸಬೇಕು. ಅಂದರೆ ಒಂದು ದಿನಕ್ಕೆ ಈ ಮೊತ್ತ ಸುಮಾರು 35 ರೂ. ಬರುತ್ತದೆ. ರೋಹಿತ್ ಅವರು ಬಯಸಿದಲ್ಲಿ 13,200 ರೂ. ವಾರ್ಷಿಕ ಪ್ರೀಮಿಯಂ ಪಾವತಿಸಬಹುದು.

ಮೆಚ್ಯುರಿಟಿ ನಂತರ..

ಒಟ್ಟು ಪಾಲಿಸಿ ಅವಧಿಯಲ್ಲಿ ಅಂದರೆ 35 ವರ್ಷಗಳಲ್ಲಿ ರೋಹಿತ್ 4,62,000 ರೂ. ಪ್ರೀಮಿಯಂ ಕಟ್ಟುತ್ತಾರೆ. ರೋಹಿತ್ 80 ವರ್ಷಕ್ಕೆ ಕಾಲಿಟ್ಟಾಗ, ಪಾಲಿಸಿ ಮೆಚ್ಯುರಿಟಿ ಆಗುತ್ತದೆ. ಆಗ ರೋಹಿತ್ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾನೆ. ಮೆಚ್ಯೂರಿಟಿ ವೇಳೆ ರೋಹಿತ್​ ಗೆ ಮೊದಲು ರೂ. 5 ಲಕ್ಷ ವಿಮಾ ಮೊತ್ತ, ರೂ.13,30,000 ಬೋನಸ್ ಎಂದರೆ ಒಟ್ಟಾರೆಯಾಗಿ 18,30,00 0 ರೂ. ಸಿಗುತ್ತದೆ.

35 ವರ್ಷದ ರೋಹಿತ್ 35 ವರ್ಷಗಳ ಪಾಲಿಸಿ ಅವಧಿಯಲ್ಲಿ ಒಟ್ಟು 4,62,000 ರೂ. ಪಾವತಿಸಿ 18,30,000 ರೂ. ಮೆಚ್ಯೂರ್ ಅಮೌಂಟ್​ ಆಗಿರುವುದನ್ನು ಇಲ್ಲಿ ಗಮನಿಸಬಹುದು. ಹಾಗೆಯೇ, 80 ವರ್ಷಗಳ ಜೀವ ಭದ್ರತೆಯನ್ನೂ ಪಡೆದರು. ಅದಕ್ಕಾಗಿಯೇ ಈ ವಿಶೇಷ ಅಂಚೆ ಪಾಲಿಸಿಯನ್ನು ಜೀವ ವಿಮೆ ಪಾಲಿಸಿ ಎಂದು ಕರೆಯಲಾಗುತ್ತದೆ.

ಸಾವಿನ ಗಂಡಾಂತರದಿಂದ ದೊರಕುವ ಪ್ರಯೋಜನಗಳು:

ರೋಹಿತ್ ಗೆ ಆತನ 80 ವರ್ಷ ವಯಸ್ಸಿನವರೆಗೆ ಈ ಪಾಲಿಸಿಯು ಜೀವ ವಿಮೆ ಭದ್ರತೆಯನ್ನು ಕಲ್ಪಿಸುತ್ತದೆ. ಪಾಲಿಸಿ ಮೆಚ್ಯುರಿಟಿಗೂ ಮೊದಲು ರೋಹಿತ್ ಗೆ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಅಂತಹ ಗಂಡಾಂತರ ಪರಿಸ್ಥಿತಿಯಲ್ಲಿ, ಸಂರಕ್ಷಣಾ ನೀತಿಯ ಅಡಿಯಲ್ಲಿ ನಾಮಿನಿಗೆ ಪಾಲಿಸಿಯ ಪ್ರಯೋಜನವನ್ನು ನೀಡಲಾಗುತ್ತದೆ. ನಾಮಿನಿಯು ಪಾಲಿಸಿದಾರನ ಮರಣದ ಪ್ರಯೋಜನವನ್ನು ಪಡೆಯುತ್ತಾನೆ. ಇದರಲ್ಲಿ 5 ಲಕ್ಷ ರೂ. ಬೋನಸ್ ಗ್ಯಾರೆಂಟಿ ದೊರೆಯುತ್ತದೆ. ಇದಲ್ಲದೆ, ನಾಮಿನಿಗೆ ಬೋನಸ್ ಹಣವೂ ಸಿಗುತ್ತದೆ.

ಪಾಲಿಸಿ ಜಾರಿಯಲ್ಲಿರುವ ಎಲ್ಲಾ ದಿನಗಳವರೆಗೆ ನಾಮಿನಿಗೆ ಬೋನಸ್ ಲಭಿಸುತ್ತದೆ. ಪಾಲಿಸಿಯ 5 ವರ್ಷಗಳ ನಂತರ, ರೋಹಿತ್‌ಗೆ ಯಾವುದೇ ಅಹಿತಕರ ಘಟನೆಗೆ ತುತ್ತಾದ ಸಂದರ್ಭದಲ್ಲಿ, ಆತನ ನಾಮಿನಿಗೆ ವಾರ್ಷಿಕ 38,000 ರೂ. ರಂತೆ 5 ಲಕ್ಷ ರೂ. ಮೊತ್ತ ಖಾತರಿಯಾಗಿ ಸಿಗುತ್ತದೆ. 5 ವರ್ಷಗಳ ಬೋನಸ್ 1,90,000 ರೂ. ಸಿಗುತ್ತದೆ. ಈ ರೀತಿ, 5 ವರ್ಷಗಳವರೆಗೆ ಪಾಲಿಸಿಯನ್ನು ಜಾರಿಯಲ್ಲಿಟ್ಟಿದರೆ, ನಾಮಿನಿಗೆ 6,90,000 ರೂ. ಹೊಂದುತ್ತಾರೆ. ಐದು ವರ್ಷಗಳಲ್ಲಿ ಕೇವಲ 5,500 ರೂ. ಪ್ರೀಮಿಯಂ ಪಾವತಿಸಿರುತ್ತಾರೆ ಎಂಬುದು ಗಮನಾರ್ಹ.

To read in telugu click here

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್