How To Download EPF Passbook: ಇಪಿಎಫ್ ಪಾಸ್‌ಬುಕ್ ಆನ್ಲೈನ್ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ಇಪಿಎಫ್ ಪಾಸ್‌ಬುಕ್ ಆನ್ಲೈನ್ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರಣೆ ಈ ಲೇಖನದಲ್ಲಿದೆ.
ಉದ್ಯೋಗಿಯ ಸಂಬಳದ ಕೆಲವು ಭಾಗವನ್ನು ಪ್ರತಿ ತಿಂಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆಗೆ ಜಮಾ ಮಾಡಲಾಗುತ್ತದೆ. ನೌಕರರು ನಿವೃತ್ತಿಯ ನಂತರ ಅಥವಾ ನಿರ್ದಿಷ್ಟ ಅವಧಿಯ ನಂತರ ಈ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ. ಸದ್ಯಕ್ಕೆ ಇಪಿಎಫ್ ಬಡ್ಡಿ ದರವು ಶೇ 8.10 ಆಗಿದೆ. ಆದರೆ ಇದು ಬದಲಾವಣೆಗೆ ಒಳಪಟ್ಟಿರುತ್ತದೆ. ಇಪಿಎಫ್ ಖಾತೆಯ ಬ್ಯಾಲೆನ್ಸ್ ಅಥವಾ ಖಾತೆಗೆ ಜಮೆಯಾದ ಬಡ್ಡಿಯನ್ನು ಪರಿಶೀಲಿಸಲು ಬಯಸಿದರೆ ನಿಮ್ಮ ಮನೆಯಿಂದಲೇ ತಿಳಿದುಕೊಳ್ಳಬಹುದು. ಇದಕ್ಕಾಗಿ ಇಪಿಎಫ್‌ಒ ಖಾತೆದಾರರಿಗೆ ಇ-ಪಾಸ್‌ಬುಕ್‌ಗೆ ಸಂಪರ್ಕ ದೊರಕಿಸುತ್ತದೆ. ಅದನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
ಇಪಿಎಫ್ ಎಂದರೇನು?
ಇಪಿಎಫ್ ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952ರ ಅಡಿಯಲ್ಲಿ ಪ್ರಾರಂಭವಾದ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿ ಮತ್ತು ಉದ್ಯೋಗದಾತರು ಈ ಯೋಜನೆಗೆ ಮಾಸಿಕ ಆಧಾರದ ಮೇಲೆ ಸಮಾನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಾರೆ. 20 ಅಥವಾ ಹೆಚ್ಚಿನ ಜನರು ಉದ್ಯೋಗದಲ್ಲಿರುವ ಎಲ್ಲ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಂಡಿದೆ. ಸದ್ಯಕ್ಕೆ ಸುಮಾರು 50 ಮಿಲಿಯನ್ ಇಪಿಎಫ್‌ಒ ಚಂದಾದಾರರಿದ್ದಾರೆ. ಜೂನ್ 3ರಂದು ಕೇಂದ್ರ ಸರ್ಕಾರವು 2021-22ರ ಇಪಿಎಫ್ ಠೇವಣಿಗಳ ಮೇಲೆ ವಾರ್ಷಿಕ ಶೇ 8.1ರ ಬಡ್ಡಿದರವನ್ನು ಒಪ್ಪಿದೆ – ಇದು ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣ ಬಡ್ಡಿ ದರವಾಗಿದೆ. ಮಾರ್ಚ್‌ನಲ್ಲಿ ಇಪಿಎಫ್‌ಒ 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2020-21ರಲ್ಲಿ ಒದಗಿಸಿದ ಶೇ 8.5ರಿಂದ ಶೇ 8.1ಕ್ಕೆ ಇಳಿಸಲು ನಿರ್ಧರಿಸಿತ್ತು.
ಇಪಿಎಫ್ ಇ-ಪಾಸ್‌ಬುಕ್ ಡೌನ್‌ಲೋಡ್ ಮಾಡುವುದು ಹೇಗೆ?
– ಅಧಿಕೃತ EPFO ವೆಬ್‌ಸೈಟ್‌ಗೆ ಭೇಟಿ ನೀಡಿ (https://passbook.epfindia.gov.in/MemberPassBook/Login).
– ಯೂನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಪಾಸ್‌ವರ್ಡ್, ಕ್ಯಾಪ್ಚಾ ಕೋಡ್‌ನೊಂದಿಗೆ ಖಾತೆಯ ವಿವರಗಳನ್ನು ನಮೂದಿಸಿ.
– ಆ ನಂತರ ‘ಲಾಗಿನ್’ ಬಟನ್ ಮೇಲೆ ಕ್ಲಿಕ್ ಮಾಡಿ.
– ಸಂಬಂಧಿತ ಸದಸ್ಯ ID ಆಯ್ಕೆ ಮಾಡಿ ಮತ್ತು ನಿಮ್ಮ ಪಿಎಫ್ ಇ-ಪಾಸ್‌ಬುಕ್ ಪರದೆಯ ಮೇಲೆ ಕಾಣಿಸುತ್ತದೆ.
– ನೀವು ಇ-ಪಾಸ್‌ಬುಕ್ ಅನ್ನು ಪಿಡಿಎಫ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು.
Published On - 1:21 pm, Mon, 11 July 22