ರಾಂಗ್ ಸೈಡ್ ನಲ್ಲಿ ಬಂದು ಎದುರಿಗೆ ಬಂದ ಕಾರಿನ ಚಾಲಕನ ಮೇಲೆ ದರ್ಪ ತೋರಿದ ಅಧಿಕಾರಿ

Updated on: Apr 05, 2024 | 1:01 PM

ರಾಂಗ್ ಸೈಡ್ ನಲ್ಲಿ ಬಂದರೂ ಕೂಡ ಎದುರಿಗೆ ಬಂದ ಕಾರಿಗೆ ದಾರಿ ಬಿಡುವಂತೆ ಬೆದರಿಸಿದ್ದಾನೆ. ಈತನ ದರ್ಪದ ವರ್ತನೆ ಕಾರಿನ ಮುಂಭಾಗದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾಟ್ನಾ: ರಾಂಗ್ ಸೈಡ್ ನಲ್ಲಿ ಬಂದು ಎದುರಿಗಿದ್ದ ಕಾರಿನ ಚಾಲಕನ ಮೇಲೆ ದರ್ಪ ತೋರಿದ ಬಿಹಾರದ ಪಾಟ್ನಾದ ಸರ್ಕಾರಿ ಅಧಿಕಾರಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ರಾಂಗ್ ಸೈಡ್ ನಲ್ಲಿ ಬಂದರೂ ಕೂಡ ಎದುರಿಗೆ ಬಂದ ಕಾರಿಗೆ ದಾರಿ ಬಿಡುವಂತೆ ಬೆದರಿಸಿದ್ದಾನೆ. ಅಧಿಕಾರಿ ರಾಂಗ್ ಸೈಡ್ ನಲ್ಲಿ ಬಂದಿರುವುದು ಮತ್ತು ಕಾರಿನಿಂದ ಇಳಿದು ಬಂತು ಮುಂದೆ ಇರುವ ಕಾರು ಚಾಲಕನಿಗೆ ಬೆದರಿಕೆ ಹಾಕುತ್ತಿರುವುದು ಕಾರಿನ ಮುಂದಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.

@abhijitmajumder ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಧಿಕಾರಿಯ ದರ್ಪದ ಮಾತುಗಳ ವಿಡಿಯೋವನ್ನು ಏಪ್ರಿಲ್​ 04ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 4ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿಕಾರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Apr 05, 2024 01:00 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More