
ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಜನರೆಲ್ಲರೂ ಮೃತ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ಜಮೀನಿಗೆ ಕರೆದುಕೊಂಡು ಹೋದರು. ಇತ್ತ ಬೇಸರಲ್ಲೇ ಓಡೋಡಿ ಬಂದ ಕರು ಜಮೀನಿನಲ್ಲಿ ತನ್ನ ಮಾಲೀಕನನ್ನು ಹುಡುಕಾಡಲು ಪ್ರಾರಂಭಿಸಿತು. ಇದನ್ನು ಅರಿತ ಅಲ್ಲಿದ್ದ ಜನರು ಕರುವನ್ನು ಮೃತದೇಹದ ಬಳಿ ಹೋಗಲು ದಾರಿ ಮಾಡಿಕೊಟ್ಟರು. ಹೀಗೆ ಚಟ್ಟದ ಮೇಲೆ ಮಲಗಿದ್ದ ಮೃತ ಮಾಲೀಕನ ಬಳಿ ಹೋಗಿ ಜೋರಾಗಿ ಬೊಬ್ಬಿಡುತ್ತಾ ಕಣ್ಣೀರಿಟ್ಟಿತು. ಈ ಕ್ಷಣವನ್ನು ನೋಡಿದರೆ ಎಂಥವರಿಗಾದರೂ ಕಣ್ಣಿನಲ್ಲಿ ನೀರು ಉಕ್ಕಿ ಹರಿಯದೆ ಇರದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ವಿಡಿಯೋದಲ್ಲಿ ಕಾಣುವಂತೆ, ಕರುವಿನ ಮಾಲೀಕ ಸಾವನ್ನಪ್ಪಿರುತ್ತಾರೆ. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ನಿಟ್ಟಿನಲ್ಲಿ ಸಮಸ್ತರು ಜಮೀನಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ಜಮೀನಿಗೆ ಬಂದ ಹಸು, ಮೃತಪಟ್ಟ ತನ್ನ ಮಾಲೀಕನನ್ನು ನೋಡಲು ಪರಿತಪಿಸುತ್ತಿತ್ತು. ಇದನ್ನು ನೋಡಿದ ಜನರು ಹಸುವನ್ನು ಮೃತದೇಹದತ್ತ ಹೋಗಲು ದಾರಿ ಮಾಡಿಕೊಟ್ಟರು. ಅದರಂತೆ ಮೃತದೇಹದ ಬಳಿ ಹೋದ ಹಸು ಬೇಸರದಲ್ಲಿ ಬೊಬ್ಬಿಡುತ್ತಾ ದೇಹವನ್ನು ಮುದ್ದಿಸಿ ಕಣ್ಣೀರಿಡುವುದನ್ನು ನೋಡಬಹುದು.
ತನ್ನನ್ನು ಸಲಹಿದ ಮಾಲೀಕನಿಗೆ ಹಸು ಕಣ್ಣೀರಿನ ವಿದಾಯ ಹೇಳುವಂತಹ ಮನಕಲಕುವ ಘಟನೆ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದಿದೆ. ಅಲ್ಲದೆ ಹಸುವಿನ ಉಪಸ್ಥಿತಿಯಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಿದೆ. ಈ ವಿಡಿಯೋವನ್ನು ಶಕ್ತಿ ಓಜಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಮಾಲೀಕನ ಸಾವಿನಿಂದಾಗಿ ಚಿತಾಗಾರ ತಲುಪಿದ ಸಾಕು ಹಸು” ಎಂದು ಶೀರ್ಷಿಕೆ ಬರೆದಿದ್ದಾರೆ. ಅಲ್ಲದೆ ಮಾಲೀಕನ ಮುಖವನ್ನು ಕೊನೆಯದಾಗಿ ನೋಡಲು ಹೊದಿಕೆಯನ್ನು ತೆಗೆಯಲಾಗಿತ್ತು ಎಂದೂ ಬರೆದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Thu, 22 September 22