2000 ಚಾಕೋಲೇಟ್ ಗರಿಗಳ​ ಫೀನಿಕ್ಸ್ ಈಗ ಅಂತರ್ಜಾಲದಲ್ಲಿ ಹಾರಾಡುತ್ತಿದೆ

Chocolate Phoenix : 12.8 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 8.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ನಿಮಗೂ ಈ ಚಾಕೋಲೇಟ್​ ಫೀನಿಕ್ಸ್ ನೋಡಬೇಕೆನ್ನಿಸುತ್ತಿದೆಯೇ?

2000 ಚಾಕೋಲೇಟ್ ಗರಿಗಳ​ ಫೀನಿಕ್ಸ್ ಈಗ ಅಂತರ್ಜಾಲದಲ್ಲಿ ಹಾರಾಡುತ್ತಿದೆ
ಅಂತಿಮಸ್ಪರ್ಶ ಕೊಡುತ್ತಿರುವ ಚೆಫ್ ಅಮೌರಿ
Edited By: ಶ್ರೀದೇವಿ ಕಳಸದ

Updated on: Oct 10, 2022 | 10:28 AM

Viral Video : ಕೌಶಲ ಮತ್ತು ಪ್ರತಿಭೆಯನ್ನು ಈವತ್ತು ಹೆಚ್ಚು ಮಾನ್ಯ ಮಾಡಲಾಗುತ್ತಿದೆ. ಇದಕ್ಕೊಂದು ಒಳ್ಳೆಯ ವೇದಿಕೆಯಾಗಿ ಅಂತರ್ಜಾಲ ರೂಪುಗೊಂಡಿದೆ. ಕಲಾವಂತಿಕೆಗೆ ಬೇಕಿರುವುದು ಸ್ಪಂದನೆ. ಇದು ಅಂತರ್ಜಾಲದಲ್ಲಿ ಸಿಗುತ್ತಿದ್ದಂತೆ ಸ್ಫೂರ್ತಿ ಹುಡುಕಾಡಬೇಕಿಲ್ಲ. ಹೀಗಾಗಿ ಅನೇಕರು ಉತ್ಸಾಹದಿಂದ ತಮ್ಮ ತಮ್ಮ ವೃತ್ತಿ, ಪ್ರವೃತ್ತಿಗಳ ಮೂಲಕ ಹೊಸ ಪ್ರಯತ್ನಗಳಿಗೆ ತೊಡಗಿಕೊಳ್ಳುತ್ತಿದ್ದಾರೆ. ಈಗ ವೈರಲ್ ಆಗುತ್ತಿರುವ ಈ ಚಾಕೋಲೇಟ್​ ಫೀನಿಕ್ಸ್​ ಹಕ್ಕಿಯನ್ನು ಗಮನಿಸಿ. ಇದನ್ನು ತಯಾರಿಸಿದವರು ಖ್ಯಾತ ಪೇಸ್ಟ್ರಿ ಚೆಫ್ ಅಮೌರಿ ಗುಯಿಚಾನ್ ಎಂಬುವವರು. ಇದೀಗ ನೆಟ್ಟಿಗರನ್ನು ಈ ಫೀನಿಕ್ಸ್​ ಅಚ್ಚರಿಗೊಳಿಸುತ್ತಿದೆ. ಅಮೌರಿ ತಮ್ಮ ಕಲಾನೈಪುಣ್ಯದಿಂದ ಮತ್ತಷ್ಟು ಜನಪ್ರಿಯರಾಗುತ್ತಿದ್ದಾರೆ.

ಈಗಾಗಲೇ ಅನೇಕ ಪ್ರಾಣಿಗಳನ್ನು, ನಿತ್ಯಬಳಕೆಯ ವಸ್ತುಗಳನ್ನು, ಹಣ್ಣು ತರಕಾರಿಗಳನ್ನು ಏನೆಲ್ಲವನ್ನೂ ಬೇಕರಿ ಕಲೆಯಲ್ಲಿ ವಿನ್ಯಾಸಗೊಳಿಸಿ ನೆಟ್ಟಿಗರ ಮನಗೆದ್ದಿದ್ದಾರೆ ಅಮೌರಿ. ಐದು ದಿನಗಳ ಹಿಂದೆ ಇನ್​ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್​ ಮಾಡಿರುವ ಈ ಚಾಕೊಲೇಟ್ ಫೀನಿಕ್ಸ್​ ಅಂತೂ ಅದ್ಭುತ! ಪೂರ್ತಿ ಚಾಕೋಲೇಟ್​ನಿಂದಲೇ ಇದನ್ನು ತಯಾರಿಸಿದ್ದಾರೆ. 2,000 ಗರಿಗಳನ್ನು ಮಾಡಿಕೊಂಡು ಒಂದೊಂದೇ ಜೋಡಿಸುತ್ತಾ ಹೋಗಿದ್ದಾರೆ. ನಂತರ ಬಣ್ಣಗಳನ್ನು ಸ್ಪ್ರೇ ಮಾಡಿ, ಇದೊಂದು ಚಾಕೋಲೇಟಿನಿಂದ ಮಾಡಲ್ಪಟ್ಟ ಕಲಾಕೃತಿಯೇ ಎಂದು ನಂಬಲಸಾಧ್ಯವಾದಂತೆ ಫಿನಿಶಿಂಗ್ ಕೊಟ್ಟಿದ್ದಾರೆ.

9.9 ಮಿಲಿಯನ್​ ಫಾಲೋವರ್​ಗಳು ಇವರ ಇನ್​ಸ್ಟಾಗ್ರಾಂ ಖಾತೆಗಿದ್ದಾರೆ. ಈತನಕ 12.8 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 8.5 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಅನೇಕರು ಕಲಾವಿದರ ಸೃಜನಶೀಲತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ನಿಮ್ಮಅದ್ಭುತ ಕಲಾಸೃಷ್ಟಿಯನ್ನು ಬಹಳ ಇಷ್ಟಪಡುತ್ತೇನೆ. ಬಹಳ ಬುದ್ಧಿವಂತಿಕೆಯಿಂದ ರೂಪಿಸುತ್ತೀರಿ’ ಎಂದಿದ್ದಾರೆ ಒಬ್ಬ ಇನ್​ಸ್ಟಾಗ್ರಾಂ ಖಾತೆದಾರರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

 

Published On - 10:20 am, Mon, 10 October 22

Web contact

TV9 Kannada

Read More
Follow Us