Viral Video: ಬಲಿಷ್ಟ ಸಿಂಹವನ್ನೇ ಅಟ್ಟಾಡಿಸಿದ ದೈತ್ಯ ಆನೆ

ಸಾಮಾನ್ಯವಾಗಿ ಆನೆಗಳ ಮೇಲೆ ದಾಳಿ ನಡೆಸುವ ಸಿಂಹದ ಮೇಲೆಯೇ ಆನೆ ದಾಳಿ ನಡೆಸಿರುವುದು ಎಂದಾದರು ನೀವು ಕಂಡಿದ್ದೀರಾ? ಇಲ್ಲವಾಗಿದ್ದರೆ ಈ ವಿಡಿಯೋ ನೋಡಿ.

Viral Video: ಬಲಿಷ್ಟ ಸಿಂಹವನ್ನೇ ಅಟ್ಟಾಡಿಸಿದ ದೈತ್ಯ ಆನೆ
ಸಿಂಹದ ಮೇಲೆ ಆನೆಯ ದಾಳಿ
Edited By: Rakesh Nayak Manchi

Updated on: Sep 18, 2022 | 4:46 PM

ಸಿಂಹಗಳು ಆನೆಗಳ ಮೊದಲ ನೈಸರ್ಗಿಕ ಶತ್ರು. ಅವುಗಳ ದೊಡ್ಡ ಗಾತ್ರದ ಕಾರಣದಿಂದಾಗಿ ಇದು ಬೇಟೆಯ ಆದ್ಯತೆಯ ಆಯ್ಕೆಯಾಗಿಲ್ಲದಿದ್ದರೂ ಆನೆಯನ್ನು ಕೊಲ್ಲುವಷ್ಟು ಶಕ್ತಿಶಾಲಿ ಪರಭಕ್ಷಕವಾಗಿರುವ ಸಿಂಹಗಳು ಆನೆಗಳ ಮೇಲೆ ದಾಳಿ ಮಾಡುತ್ತವೆ. ಒಂದು ಆನೆಯನ್ನು ಬೇಟೆಯಾಡಿದರೆ ಸುಮಾರು ದಿನಗಳವರೆಗೆ ಬೇಟೆಯಾಡಬೇಕಾಗಿಲ್ಲ. ಆನೆಗಳು ಸಸ್ಯಾಹಾರಿಗಳು ಮತ್ತು ಸಾಮಾನ್ಯವಾಗಿ ಶಾಂತಿಯುತ ಪ್ರಾಣಿಗಳಾಗಿವೆ. ಆದ್ದರಿಂದ ಅವರು ಇತರ ಪ್ರಾಣಿಗಳ ಮೇಲೆ ದಾಳಿ ಮಾಡುವುದು ಮತ್ತು ಹಾನಿ ಮಾಡುವುದು ಅಪರೂಪದ ಪ್ರಕರಣವಾಗಿದೆ.

ಆನೆಗಳನ್ನೇ ಬೆದರಿಸುವ ಅಥವಾ ಆನೆಗಳ ಮೇಲೆ ದಾಳಿ ಮಾಡುವ ಸಿಂಹವನ್ನೇ ಆನೆಯೊಂದು ಅಟ್ಟಾಡಿಸಿದ್ದನು ಎಂದಾದರು ನೋಡಿದ್ದೀರಾ? ಇಂತಹ ಅಪರೂದಪ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಹವೊಂದು ಕುಳಿತುಕೊಂಡಿರುತ್ತದೆ. ಹಿಂದೆಯಿಂದ ಬಂದ ಆನೆಯೊಂದು ಧೂಳೆಬ್ಬಿಸಿಕೊಂಡೇ ಬಂದು ಓಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೈತ್ಯ ಆನೆಯು ಹಿಂಬದಿಯಿಂದ ದಾಳಿ ನಡೆಸುವ ವಿಚಾರ ತಿಳಿಯದ ಸಿಂಹ ತಕ್ಷಣಕ್ಕೆ ಹೆದರಿ ಓಡಿ ಹೋಗಿದೆ. ಈ ವಿಡಿಯೋವನ್ನು Animalsinthenaturetoday ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 122k ವೀಕ್ಷಣೆಗಳನ್ನು ಮತ್ತು 1,600 ಲೈಕ್​ಗಳನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Sun, 18 September 22

Web contact

TV9 Kannada

Read More
Follow Us