Viral Video: ನಂಗೆ ಮಲಗ್ಬೇಕು.. ಬೆಡ್​ಶೀಟ್​ ಅಡಿ ನುಗ್ತಿರುವ ಹೆಬ್ಬಾವು ಎಳೆಯಲು ಹೆಲ್ಪ್ ಮಾಡ್ತೀರಾ ಪ್ಲೀಸ್

| Updated By: Rakesh Nayak Manchi

Updated on: Sep 04, 2022 | 12:25 PM

ಹಾವು ಕಂಡರೆ ಒಂದು ಮೈಲಿ ದೂರ ಓಡುವ ಜನರ ಮಧ್ಯೆ ಇಲ್ಲೊಬ್ಬಳು ಸಣ್ಣ ಬಾಲಕಿ ದೈತ್ಯ ಹೆಬ್ಬಾವಿನೊಂದಿಗೆ ಆಡುತ್ತಿದ್ದಾಳೆ. ವೈರಲ್ ಆಗುತ್ತಿರುವ ಬಾಲಕಿಯ ವಿಡಿಯೋ ಇಲ್ಲಿದೆ ನೋಡಿ.

Viral Video: ನಂಗೆ ಮಲಗ್ಬೇಕು.. ಬೆಡ್​ಶೀಟ್​ ಅಡಿ ನುಗ್ತಿರುವ ಹೆಬ್ಬಾವು ಎಳೆಯಲು ಹೆಲ್ಪ್ ಮಾಡ್ತೀರಾ ಪ್ಲೀಸ್
ಹೆಬ್ಬಾವಿನೊಂದಿಗೆ ಆಡುತ್ತಿರುವ ಬಾಲಕಿ
Follow us on

ಹಾವಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾದಲ್ಲಿ ನೋಡಿದಷ್ಟು ಚಂಚ ನಿಜವಾಗಿಯೂ ನಿಮ್ಮ ಪಕ್ಕದಲ್ಲಿದ್ದಾಗ ಇರುವುದಿಲ್ಲ, ಹಾವು ಕಂಡರೆ ಒಂದಷ್ಟು ದೂರ ಓಡುವವರೇ ಹೆಚ್ಚು. ಹೀಗಿದ್ದಾಗ ಪುಟ್ಟ ಬಾಲಕಿಯೊಬ್ಬಳು ದೈತ್ಯ ಕಪ್ಪು ಬಣ್ಣದ ಹೆಬ್ಬಾವಿನೊಂದಿಗೆ ಆಡುತ್ತಿರುವ ವಿಡಿಯೋ ಇಂಟರ್ನೆಟ್​ನಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಲ್ಲದೆ ಚಿಂತೆಗೀಡು ಮಾಡಿದೆ. ನಿಸ್ಸಂಶಯವಾಗಿ ಭಯಭೀತರಾಗಿದ್ದಾರೆ.

snakemasterexotics ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಾಲಕಿ ಹಾವಿನೊಂದಿಗೆ ಆಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, “ಅವಳು ಮಲಗಲು ಬಯಸುತ್ತಾಳೆ ಎಂದು ನಾನು ಭಾವಿಸುತ್ತೇನೆ” ಎಂದು ಶೀರ್ಷಿಕೆ ಬರೆಯಲಾಗಿದೆ. ಖಾತೆಯ ಬಯೋ ಪ್ರಕಾರ, ಅರಿಯಾನಾ ಅತ್ಯಾಸಕ್ತಿಯ ಉರಗ ಪ್ರೇಮಿಯಾಗಿದ್ದು, ವಿವಿಧ ರೀತಿಯ ಹಾವುಗಳನ್ನು ಮುದ್ದಿಸುವ ಮತ್ತು ಆಡುವ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಅರಿಯಾನಾಳ ಬೆಡ್​ರೂಮ್​ನ ಮಂಚಕ್ಕೆ ಹಾಕಿರುವ ಹಾಸಿಗೆಯ ಕವರ್ ಒಳಗೆ ಹೆಬ್ಬಾವು ಜಾರಲು ಪ್ರಯತ್ನಿಸುತ್ತಿರುತ್ತದೆ. ಈ ವೇಳೆ ಅರಿಯಾನಾ ಅದರ ಬಾಲವನ್ನು ಹಿಡಿದು ಎಳೆಯಲು ಪ್ರಯತ್ನಿಸುವುದನ್ನು ಕಾಣಬಹುದು.

ವಿಡಿಯೋ ವೀಕ್ಷಿಸಿ: 

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Sun, 4 September 22