
ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಧೀಶರ ಮೇಲೆ ವಕೀಲೆ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ನಡೆದಿದೆ. ಜಡ್ಜ್ ಮತ್ತು ಲಾಯರ್ನ ಪರಸ್ಪರ ಹೊಡೆದಾಟವನ್ನು ಮೊಬೈಲ್ ಮೂಲಕ ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಸದ್ಯ ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
@BurmeeM ಎಂಬ ಟ್ವಟಿರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಎರಡೇ ದಿನದಲ್ಲಿ ಭಾರೀ ವೈರಲ್ ಆಗಿದೆ. ಆಗಸ್ಟ್ 05ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಇವರಿಬ್ಬರ ಪರಸ್ಪರ ಹೊಡೆದಾಟ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಹಿಳೆಯ ತಲೆ ತುಂಬಾ ಹೇನು, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ ಪ್ರಯಾಣಿಕರು
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಾರಂಭದಲ್ಲಿ ಜಡ್ಜ್ ಮತ್ತು ಲಾಯರ್ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಬಳಿಕ ಪರಸ್ಪರ ಜಡೆ ಹಿಡಿದು ಎಳೆದಾಡಿರುವುದನ್ನು ಕಾಣಬಹುದು. ಇವರಿಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಮಹಿಳಾ ಪೊಲೀಸ್ ಬಂದು ಜಗಳವನ್ನು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 am, Wed, 7 August 24