
Viral Video : ಜಗತ್ತು ಪ್ರಕ್ಷುಬ್ಧ ಎನ್ನಿಸುವ ಹೊತ್ತಿಗೆ ಹೀಗೆ ಕರುಣೆಯನ್ನೇ ಧ್ಯಾನಿಸಲು ದೇವರು ಅವಕಾಶ ಮಾಡಿಕೊಡುತ್ತಾನೆ. ಭರವಸೆಯನ್ನು ಇಷ್ಟು ಬೇಗ ಕಳೆದುಕೊಂಡರೆ ಹೇಗೆ? ಎಂದು ಹೀಗೆ ಪುಟ್ಟದೇವತೆಗಳೊಳಗೆ ಅವತರಿಸಿ ಕೇಳುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪುಟ್ಟಣ್ಣನೊಬ್ಬ ಪಕ್ಷಿಗಳಿಗೆ ಆಹಾರ ಕೊಡುತ್ತಿದ್ದಾನೆ. ಅವು ಒಂದಾದ ಮೇಲೊಂದು ಪುಟ್ಟ ಬಾಯಿ ತೆಗೆಯುತ್ತ ಮೆಲ್ಲುತ್ತಿವೆ. ಸ್ವೀಕರಿಸುವುದು ಬಹಳ ಸುಲಭ. ಆದರೆ ಕೊಡುವುದು?
ಮಗು ಅಥವಾ ಮಾಗಿದ ಮನಸಿಗೆ ಮಾತ್ರ ಹೀಗಿರಲು ಸಾಧ್ಯ. ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ಅಂದುಕೊಳ್ಳುವ ಎಲ್ಲರಿಗೂ ಕರುಣೆ ಎನ್ನುವುದು ಭರವಸೆಯನ್ನು ನೀಡುತ್ತದೆ ಎಂಬ ಶೀರ್ಷಿಕೆ ಇದಕ್ಕಿದೆ.
ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್ ಜನರು ನೋಡಿದ್ದಾರೆ. 81,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಪುಟ್ಟ ಕಡ್ಡಿಗಳಿಂದ ಆಹಾರದ ತುಣುಕನ್ನು ಹಕ್ಕಿಗಳ ಬಾಯಿಗೆ ಇಟ್ಟಮೇಲೆ ಆ ಹಕ್ಕಿಗಳು ನಿಂತಲ್ಲೇ ಕುಣಿಯುವುದನ್ನು ಗಮನಿಸಿ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಸೈಬರ್ ಸೇಫ್ ಟೀ; ಗೂಗಲ್ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ
ಈ ಮಗು ಅಪಾರ ಕರುಣೆಯನ್ನು ಹೊಂದಿದೆ ಎಂದು ಶ್ಲಾಘಿಸುತ್ತಾರೆ ನೆಟ್ಟಿಗರು. ಹೀಗೆ ಜಗತ್ತಿನ ಪವಿತ್ರ ಸಂಗತಿಗಳನ್ನು ಕಾಪಾಡಲು ಇಂಥ ಜೀವಗಳು ಹೆಚ್ಚಲಿ ಎಂದು ಹಾರೈಸಿದ್ದಾರೆ ಅನೇಕರು. ಇದು ನಿಜವಾದ ಸೌಂದರ್ಯ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:44 pm, Tue, 7 February 23