
ಸೋಶಿಯಲ್ ಮೀಡಿಯಾಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋ ಒಂದು ಎಲ್ಲೆಡೆ ಭಾರೀ ವೈರಲ್ ಆಗಿದೆ. ಮಹಿಳೆಯೊಬ್ಬರು ರಾಮ ನಾಮ ಹಾಡುತ್ತಿದ್ದಂತೆ ಕೋತಿಯೊಂದು ಹತ್ತಿರ ಬಂದಿದ್ದು, ಹಾಡು ಕೇಳುತ್ತಾ ಕುಳಿತಿದೆ. ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮ ನಾಮ ಕೇಳುತ್ತಲೇ ಆಕೆಯ ಹೆಗಲ ಮೇಲೆ ತಲೆಯಿಟ್ಟು ಸುಮ್ಮನೆ ಕುಳಿತಿದೆ. ಸದ್ಯ ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
@NandiniVenkate3 ಎಂಬ ಟ್ವಟಿರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಂದು ಬೆಳಗ್ಗೆ(ಆ.27) ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 14 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಹರೇ ರಾಮ ಹರೇ ರಾಮ… ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಶ್ರೀರಾಮನಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿರುವುದು ಮತ್ತು “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಮತ್ತು “ರಾಮ್ ರಾಮ್ ಪಾಹಿಮಾಮ್, ರಾಮ್ ರಾಮ್ ರಕ್ಷಮಾಮ್” ಮುಂತಾದ ಮಂತ್ರಗಳನ್ನು ಪಠಿಸುವುದನ್ನು ಕಾಣಬಹುದು. ಇದಕ್ಕಿದ್ದಂತೆ ಬಂದ ಕೋತಿ ಟೇಬಲ್ ಮೇಲೆ ಭಕ್ತಿಯಿಂದ ಕೇಳಿಸಿಕೊಂಡಿದ್ದು, ಬಳಿಕ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ