Viral Video : ಪ್ರಾಣಿಗಳು ತಮ್ಮ ಆಟದೊಂದಿಗೆ ತಾವಾಗಿಯೇ ನಮ್ಮನ್ನು ರಂಜಿಸುವುದು ಬೇರೆ. ಆದರೆ ನಮ್ಮ ರಂಜನೆಗೆ ಪ್ರಾಣಿಗಳಿಗೆ ತೊಂದರೆ ಕೊಡುವುದು ಬೇರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಯಾರೋ ಒಬ್ಬಾತ ಈ ಬೆಕ್ಕನ್ನೇನೋ ಸಾಕಿದ್ದಾನೆ. ಆದರೆ ತನ್ನ ತಿಳಿಗೇಡಿತನದಿಂದ ಈ ಬೆಕ್ಕನ್ನು ಬೆಂಚಿಗೆ ಕಟ್ಟಿದ್ಧಾನೆ. ಆಗ ಈ ಬೆಕ್ಕು ಏನು ಮಾಡಬೇಕು? ಅದೇನು ನಾಯಿಯೇ, ಕಟ್ಟಿದಲ್ಲಿ ಇರಲು? ನೋಡಿ ಏನು ಮಾಡಿದೆ.
Had enough, let’s go home ? pic.twitter.com/DH4wD3DDms
ಇದನ್ನೂ ಓದಿ— Best Videos ?? (@_BestVideos) February 4, 2023
ಈತ ಕಟ್ಟಿಹಾಕಿರುವುದು ಸಣ್ಣ ಬೆಂಚಲ್ಲ. ಕಟ್ಟಿಗೆಯ ದೊಡ್ಡ ಬೆಂಚು. ದಾರಿಗಾಣದ ಬೆಕ್ಕು ಅದನ್ನೇ ಎಳೆದುಕೊಂಡು ಹೊರಟಿದೆ. ಇದನ್ನು ನೋಡಿದ ನೆಟ್ಟಿಗರು ಇದರ ಪೋಷಕನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.7 ಲಕ್ಷ ಜನರು ನೋಡಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನರು ಇಷ್ಪಪಟ್ಟಿದ್ದಾರೆ. 145 ಜನರು ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್
ಇದು ಪ್ರಾಣಿಹಿಂಸೆ ಎಂದು ಅನೇಕರು ಹೇಳಿದ್ದಾರೆ. ಈ ಬೆಕ್ಕಿನ ಪೋಷಕನನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ ಕೆಲವರು. ಬೇಗ ಇದರ ಪೋಷಕ ಕಟ್ಟಿದ್ದನ್ನು ಬಿಚ್ಚಬಾರದೆ? ಎಂದು ಅನೇಕರು ಕೇಳಿದ್ದಾರೆ. ಆದರೆ ರೀಲ್ ಮಾಡಲೆಂದೇ ಹೀಗೆ ಆತ ಮಾಡಿದ್ದರೆ ಏನು ಮಾಡುವುದು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ.
ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ಪ್ರಾಣಿಗಳನ್ನು ಸಾಕಿದ ನಂತರ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಮ್ಮ ಖುಷಿಗಾಗಿ, ಮಜಾಗಾಗಿ ಅವುಗಳಿಗೆ ತೊಂದರೆ ಕೊಡಬಾರದು. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲೆಂದೇ ಪ್ರಾಣಿಗಳನ್ನು ತಮ್ಮ ಮನಬಂದಂತೆ ಕುಣಿಸುತ್ತಾರೆ. ಆದರೆ ಇದರಿಂದ ಅವುಗಳಿಗೆ, ಖುಷಿ ಸಮಾಧಾನ ಆಗುವುದೆ? ಅವೂ ಜೀವವೇ ತಾನೆ? ಸಾಕುವ ಮೊದಲು ಯೋಚಿಸಿ. ಸಾಕಿದ ನಂತರ ಪ್ರಜ್ಞೆಯಿಂದ ಪೋಷಿಸಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:40 pm, Thu, 9 February 23