ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚೆಗೆ ಕಳ್ಳತನದ ವಿಡಿಯೋವೊಂದು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಹೆದ್ದಾರಿಯಲ್ಲಿ ಅಳವಡಿಸಲಾದ ಬೀದಿ ದೀಪಗಳನ್ನು ಕದಿಯುತ್ತಿರುವುದನ್ನು ಕಾಣಬಹುದು. ಕೆಳಗೊಬ್ಬ ಗೋಣಿ ಚೀಲ ಹಿಡಿದು ನಿಂತಿರುವುದನ್ನು ಕಾಣಬಹುದು. ಇದನ್ನೆಲ್ಲ ಗಮನಿಸಿದ ನೆರೆಹೊರೆಯವರು ತಕ್ಷಣ ಅಲ್ಲಿಗೆ ತಲುಪಿದ್ದಾರೆ. ಸದ್ಯ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.
ಬೀದಿ ದೀಪಕ್ಕಾಗಿ ಕಂಬ ಹತ್ತಿದ್ದ ವ್ಯಕ್ತಿ ದೀಪ ಇಳಿಸಿ ಕೆಳಗೆ ಬರಲು ಮುಂದಾಗಿದ್ದ. ಅಷ್ಟರಲ್ಲಿ ಸ್ಥಳೀಯರು ಮತ್ತು ಸಂಬಂಧಪಟ್ಟ ಸಿಬ್ಬಂದಿ ಅಲ್ಲಿಗೆ ತಲುಪಿದ್ದಾರೆ. ರೆಡ್ ಹ್ಯಾಂಡ್ ಆಗಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇದನ್ನೆಲ್ಲ ವಿಡಿಯೋ ಮಾಡಿದ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಸಲಿಂಗಕಾಮಿ ಜೋಡಿಗೆ 100 ವರ್ಷ ಜೈಲು ಶಿಕ್ಷೆ; ಅಪರಾಧದ ಬಗ್ಗೆ ತಿಳಿದರೆ ನಿಮ್ಮ ರಕ್ತ ಕುದಿಯುವುದಂತೂ ಖಂಡಿತಾ
scribe_prashant ಎಂಬ ಇನ್ಸ್ಟಾಗ್ರಾಮ್(www.instagram.com/scribe_prashant) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಬೀದಿ ದೀಪಗಳ ಕಳ್ಳತನದ ವಿಶೇಷ ವಿಡಿಯೋ ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ 5ದಿನಗಳಲ್ಲಿ 1ಮಿಲಿಯನ್ ಅಂದರೆ 10ಲಕ್ಷಕ್ಕೂಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ವಿಡಿಯೋಗೆ ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Thu, 26 December 24