AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಾಂಗ ದಾನಕ್ಕೂ ಜಿಎಸ್‌ಟಿ; ತಮಾಷೆಯಾಗಿ ವಿತ್ತ ಸಚಿವೆಯ ಕಾಲೆಳೆದ ಇನ್ಫ್ಲ್ಯುಯೆನ್ಸರ್

ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಗಾಗ್ಗೆ ಟ್ರೋಲ್‌ ಆಗ್ತಿರ್ತಾರೆ. ಈಗಂತೂ ಪಾಕ್‌ಕಾರ್ನ್‌ಗೆ ವಿಧಿಸಿದ ತೆರಿಗೆಗೆ ಸಂಬಂಧಿಸಿದಂತೆ ಇವರು ಟ್ರೋಲ್‌ಗೆ ಗುರಿಯಾಗಿದ್ದಾರೆ. ಅಂಗಾಂಗ ದಾನಕ್ಕೂ ಜಿಎಸ್‌ಟಿ, ಕಿಡ್ನಿ ಫೈಲ್ಯೂರ್‌ ಬಳಿಕ ಕಿಡ್ನಿ ಕಸಿ ಮಾಡಿದ್ರೆ ಆ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತೆ ಎಂದು ತಮಾಷೆಯಾಗಿ ಹೇಳುವ ಮೂಲಕ ಇನ್ಫ್ಲ್ಯುಯೆನ್ಸರ್ ಒಬ್ರು ಇದೀಗ ನಿರ್ಮಲಾ ಸೀತರಾಮನ್‌ ಅವರನ್ನು ಕಾಲೆಳೆದಿದ್ದಾರೆ. ಈ ವಿಡಿಯೋ ಫುಲ್‌ ವೈರಲ್‌ ಆಗಿದೆ.

ಅಂಗಾಂಗ ದಾನಕ್ಕೂ ಜಿಎಸ್‌ಟಿ; ತಮಾಷೆಯಾಗಿ ವಿತ್ತ ಸಚಿವೆಯ ಕಾಲೆಳೆದ ಇನ್ಫ್ಲ್ಯುಯೆನ್ಸರ್
ರಾಧ ಮತ್ತು ​​ನಿರ್ಮಲಾ ಸೀತಾರಾಮನ್‌
ಮಾಲಾಶ್ರೀ ಅಂಚನ್​
| Edited By: |

Updated on:Dec 26, 2024 | 12:59 PM

Share

ಜಿಎಸ್‌ಟಿ ವಿಚಾರಕ್ಕೆ ಸಂಬಂದಪಟ್ಟಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಗಾಗ್ಗೆ ಟ್ರೋಲ್‌ಗೆ ಗುರಿಯಾಗುತ್ತಿರುತ್ತಾರೆ. ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಜಿಎಸ್‌ಡಿ ಮಂಡಳಿ ಸಭೆಯಲ್ಲಿ ಪಾಪ್‌ಕಾರ್ನ್‌ಗೂ ಕೂಡಾ ಮೂರು ರೀತಿಯಲ್ಲಿ ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿದ್ದು, ಈ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ವಿತ್ತ ಸಚಿವೆ ಮತ್ತೊಮ್ಮೆ ಯರ್ರಾಬಿರ್ರಿ ಟ್ರೋಲ್‌ ಆಗ್ತಿದ್ದಾರೆ. ಇನ್ಫುಯೆನ್ಸರ್‌ ಒಬ್ರು ಕೂಡಾ ಅಂಗಾಂಗ ದಾನಕ್ಕೂ ಜಿಎಸ್‌ಟಿ, ಕಿಡ್ನಿ ಫೈಲ್ಯೂರ್‌ ಬಳಿಕ ಕಿಡ್ನಿ ಕಸಿ ಮಾಡಿದ್ರೆ ಆ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತೆ ಎಂದು ತಮಾಷೆಯಾಗಿ ಹೇಳುವ ಮೂಲಕ ನಿರ್ಮಲಾ ಸೀತಾರಾಮನ್‌ ಅವನ್ನು ಸಖತ್‌ ಆಗಿ ಟ್ರೋಲ್‌ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ಮುಂಬೈ ಮೂಲದ ಕಂಟೆಂಟ್‌ ಕ್ರಿಯೆಟರ್‌ ರಾಧ (radha_thefunnyfoodie) ಎಂಬವರು ನಿರ್ಮಲಾ ಸೀತಾರಾಮನ್‌ ಅವರನ್ನು ಹಾಗೂ ಭಾರತೀಯ ತೆರಿಗೆ ವ್ಯವಸ್ಥೆಯನ್ನು ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ. ಹೌದು ಆಕೆ ವಿತ್ತ ಸಚಿವೆಯಂತೆ ಮಾತನಾಡುತ್ತಾ “ಜಿಎಸ್‌ಟಿ ಕೌನ್ಸಿಲ್‌ ಅಂಗಾಂಗ ದಾನವನ್ನೂ ಜಿಎಸ್‌ಟಿ ವ್ಯಾಪ್ತಿಯಲ್ಲಿ ಸೇರಿಸಲು ನಿರ್ಧರಿಸಿದೆ. ಇನ್ನು ಮುಂದೆ ಯಾರಾದರೂ ಅಂಗಾಂಗ ದಾನ ಮಾಡಿದರೆ ಅಥವಾ ಸ್ವೀಕರಿಸಿದೆ ಆ ಶಸ್ತ್ರಚಿಕಿತ್ಸೆಗೆ 18% ಜಿಎಸ್‌ಟಿ ತೆರಿಗೆ ವಿಧಿಸಲಾಗುವುದು. ಒಂದು ವೇಳೆ ಮೂತ್ರಪಿಂಡದ ವೈಫಲ್ಯವಾಗಿ ಕಿಡ್ನಿ ಕಸಿ ಮಾಡಿಸಿಕೊಂಡರೆ ಆ ಜೀವಿತಾವಧಿ ವಿಸ್ತರಿಸಿದ ಲೆಕ್ಕದಲ್ಲಿ ನಿಮ್ಮ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ. ಇನ್ನೂ ಕಾರ್ನಿಯಾ ದಾನ, ರಕ್ತದಾನಕ್ಕೂ ಜಿಎಸ್‌ಟಿ ಅನ್ವಯವಾಗಲಿದೆ” ಎಂದು ಹೇಳುತ್ತಾ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆಯನ್ನು ಟ್ರೋಲ್‌ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಮಂತ ಸಿಂಗಲ್​ ಹುಡುಗರೇ ಈಕೆಯ ಟಾರ್ಗೆಟ್!; ಏಳನೇ ಮದುವೆಯ ವೇಳೆ ಸಿಕ್ಕಿಬಿದ್ದ ಯುವತಿ

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ನಾಲ್ಕು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ 7.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಅನೇಕರು ʼನೀವು ಏಕೆ ಈ ರೀತಿಯ ಐಡಿಯಾಗಳನ್ನು ನಿರ್ಮಲಾ ಸೀತಾರಾಮನ್‌ಗೆ ಕೊಡ್ತಿರಾʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ತೆರಿಗೆ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬಂದರೂ ಆಶ್ಚರ್ಯವಿಲ್ಲʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:23 pm, Thu, 26 December 24