Viral Video: ಅಯ್ಯೋ ತಪ್ಪು ತಿಳಿಬೇಡಿ ಈಕೆ ಆತನ ಗರ್ಲ್​ಫ್ರೆಂಡ್ ಅಲ್ಲ ಅಮ್ಮ

ನಿತ್ಯ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹಾಗೆಯೇ ವಿಡಿಯೋ ಒಂದು ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ. ಯುವತಿಯೊಬ್ಬಳ ತೊಡೆಯ ಮೇಲೆ ವ್ಯಕ್ತಿಯೊಬ್ಬ ಬಂದು ಕುಳಿತುಕೊಳ್ಳುವ ವಿಡಿಯೋ ಅದು , ಮೊದಲು ಆಕೆ ಆತನ ಗರ್ಲ್​ಫ್ರೆಂಡ್ ಇರಬೇಕೆಂದೆನಿಸುತ್ತದೆ ಆದರೆ ಆಕೆ ಗರ್ಲ್​ಫ್ರೆಂಡ್​ ಅಲ್ಲ, ಆತನ ತಾಯಿ ಎನ್ನುವುದು ನಿಜಕ್ಕೂ ಅಚ್ಚರಿಗೊಳಿಸದೇ ಇರಲಾರದು.

Viral Video: ಅಯ್ಯೋ ತಪ್ಪು ತಿಳಿಬೇಡಿ ಈಕೆ ಆತನ ಗರ್ಲ್​ಫ್ರೆಂಡ್ ಅಲ್ಲ ಅಮ್ಮ
ತಾಯಿ-ಮಗ
Image Credit source: News 18

Updated on: Feb 04, 2025 | 10:55 AM

ನಿತ್ಯ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹಾಗೆಯೇ ವಿಡಿಯೋ ಒಂದು ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ. ಯುವತಿಯೊಬ್ಬಳ ತೊಡೆಯ ಮೇಲೆ ವ್ಯಕ್ತಿಯೊಬ್ಬ ಬಂದು ಕುಳಿತುಕೊಳ್ಳುವ ವಿಡಿಯೋ ಅದು , ಮೊದಲು ಆಕೆ ಆತನ ಗರ್ಲ್​ಫ್ರೆಂಡ್ ಇರಬೇಕೆಂದೆನಿಸುತ್ತದೆ ಆದರೆ ಆಕೆ ಗರ್ಲ್​ಫ್ರೆಂಡ್​ ಅಲ್ಲ, ಆತನ ತಾಯಿ ಎನ್ನುವುದು ನಿಜಕ್ಕೂ ಅಚ್ಚರಿಗೊಳಿಸದೇ ಇರಲಾರದು.

ಹಾಗಾಗಿ ಆ ವಿಡಿಯೋ ಮೇಲೆ ಕಡಿಮೆ ವಯಸ್ಸಿನಲ್ಲಿ ತಾಯಿಯಾಗುವುದರಿಂದ ಸಿಗುವ ಪ್ರಯೋಜನಗಳು ಎನ್ನುವ ಶೀರ್ಷಿಯಲ್ಲಿ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. ಹೆಚ್ಚಿನ ಜನರು ಅವರಿಬ್ಬರನ್ನು ಗರ್ಲ್​ಫ್ರೆಂಡ್-ಬಾಯ್​ಫ್ರೆಂಡ್ ಎಂದುಕೊಂಡಿದ್ದರು. ಈ ಕುರಿತು ನ್ಯೂಸ್​18 ಇಂಗ್ಲಿಷ್ ವರದಿ ಮಾಡಿದೆ.

ಆದರೆ ವಿಡಿಯೋದಲ್ಲಿ ಹಳೇ ಘಟನೆಯನ್ನು ಅವರಿಬ್ಬರು ರಿಕ್ರಿಯೇಟ್ ಮಾಡುತ್ತಿದ್ದು, ಪಕ್ಕದಲ್ಲಿ ಆಕೆಯ ಮಗುವನ್ನು ಎತ್ತಿಕೊಂಡು ಕುಳಿತಿರುವುದನ್ನು ನೋಡಬಹುದು, ಆ ಮಗುವೇ ಆತ, ಆಕೆ ಆತನ ತಾಯಿ ಎಂಬುದು ಕೊನೆಯಲ್ಲಿ ತಿಳಿಯುತ್ತದೆ. ಇದನ್ನು ಜನಪ್ರಿಯತೆಗಾಗಿ ಮಾಡಲಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋವನ್ನು 12.5 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಕೆಲವರು ಆತ ಆತನ ತಾಯಿಗಿಂತ ದೊಡ್ಡವನ ರೀತಿಯಲ್ಲಿ ಕಾಣುತ್ತಾನೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಸುಳ್ಳು ಅವರಿಬ್ಬರು ಅಕ್ಕ, ತಮ್ಮನಿರಬಹುದು ಎನ್ನುವ ಸಂದೇಹ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:47 am, Tue, 4 February 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us