Viral Video : ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಜನ ಇಂತಹ ಜಾಗಗಳನ್ನು ಹುಡುಕುತ್ತಿದ್ದಾರೆ

ರಾಜ್ಯದಲ್ಲಿ ಸೆಕೆ ವಿಪರೀತವಾಗಿದೆ. ಹೆಚ್ಚುತ್ತಿರುವ ತಾಪದಿಂದ ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಹರಿಯುತ್ತಿರುವ ನೀರಿನಲ್ಲಿ ಹಾಯಾಗಿ ಮಲಗಿದ್ದು ಪಕ್ಕಕ್ಕೆ ಪ್ಯಾನ್ ಕೂಡ ಇಟ್ಟುಕೊಂಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral Video : ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಜನ ಇಂತಹ ಜಾಗಗಳನ್ನು ಹುಡುಕುತ್ತಿದ್ದಾರೆ
Edited By:

Updated on: Apr 06, 2024 | 3:17 PM

ದೇಶಾದ್ಯಂತ ಬಿಸಿಲಿನ ಧಗೆ ದಿನದಿಂದ ಹೆಚ್ಚುತ್ತಲೇ ಇದೆ. ಅದರಲ್ಲೂ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯ ತೀವ್ರ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಮನೆಯೊಳಗೆ ಇರಲು ಆಗದೇ, ಹೊರಗಡೆ ಕಾಲಿಡಲು ಆಗುತ್ತಿಲ್ಲ. ಇತ್ತ ಫ್ಯಾನಿನಡಿಯಲ್ಲಿ ಕುಳಿತುಕೊಳ್ಳುವ ಎಂದರೆ ಬಿಸಿ ಗಾಳಿಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇಲ್ಲೊಬ್ಬ ವ್ಯಕ್ತಿಯು ಹಚ್ಚ ಹಸಿರಿನ ಪರಿಸರದ ನಡುವೆ ಹರಿಯುತ್ತಿರುವ ನೀರಿನಲ್ಲಿ ಹಾಯಾಗಿ ಮಲಗಿದ್ದು, ಪಕ್ಕದಲ್ಲೇ ಪ್ಯಾನ್ ಅನ್ನು ಇಟ್ಟುಕೊಂಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋವನ್ನು ಕುಮಾರ್ ಎಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ‘ಸದ್ಯ ಕರ್ನಾಟಕದ ಜನ ಇಂತಹ ಜಾಗಗಳ ಹುಡುಕಾಟದಲ್ಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಕೆಲವೇ ಕೆಲವು ಸೆಕೆಂಡಿನ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನುಯೊಬ್ಬನು ಹರಿಯುವ ನೀರಿನಲ್ಲಿ ಮೈಯೊಡ್ಡಿ ಮಲಗಿರುವುದನ್ನು ಕಾಣಬಹುದು. ಅದಲ್ಲದೇ ಪಕ್ಕದಲ್ಲೇ ಫ್ಯಾನ್ ಕೂಡ ಇಟ್ಟಿದ್ದಾನೆ. ಈ ಕ್ಲಿಪಿಂಗ್ಸ್ ನೋಡಿದರೆ ವಿಪರೀತ ತಾಪದಿಂದ ಮುಕ್ತಿ ಹೊಂದಲು ಹೇಳಿ ಮಾಡಿಸಿದ ಐಡಿಯಾ ಇದು ಎನ್ನುವಂತಿದೆ.

ಇದನ್ನೂ ಓದಿ: ಕಾರಿಗೆ ಚಿಪ್ಸ್ ಪ್ಯಾಕೆಟ್​​​​ನಿಂದ ಅಲಂಕಾರ, ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಮದುಮಗ

ವೈರಲ್​​ ವಿಡಿಯೋ ಇಲ್ಲಿದೆ

ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನಲವತ್ತೊಂದು ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರು ಈತನ ಈ ಐಡಿಯಾವನ್ನು ಮೆಚ್ಚಿಕೊಂಡಿದ್ದು, ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.