
ಇತ್ತೀಚಿನ ದಿನಗಳಲ್ಲಿ ಕಾಲೇಜು ಯುವತಿಯರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ. ಅಚ್ಚರಿಯ ಸಂಗತಿ ಏನಪ್ಪಾಂತಂದರೆ, ನಾರಿಮಣಿಯರ ಇಂತಹ ಫೈಟಿಂಗ್ಗಳಲ್ಲಿ ಹೆಚ್ಚಿನವುಗಳು ಒಬ್ಬ ಪ್ರಿಯತಮನಿಗಾಗಿ ನಡೆಯುತ್ತದೆ. ಈಗಾಗಲೇ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ಇದೀಗ ಮತ್ತೊಂದು ವಿಡಿಯೋ ಹರಿದಾಡಲು ಆರಂಭವಾಗಿದೆ. ಇಬ್ಬರು ಯುವತಿಯರು ಒಬ್ಬನನ್ನು ಪ್ರೀತಿಸಿ ಆತ ತನ್ನವನೆಂದು ಹೇಳುತ್ತಾ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಯುವತಿಯರು ಕಾಲೇಜು ಸಮವಸ್ತ್ರ ಧರಿಸಿಕೊಂಡು ಹೊಡೆದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋದಲ್ಲಿ, ಸಮವಸ್ತ್ರ ಧರಿಸಿದ ಇಬ್ಬರು ಯುವತಿಯರು ಯುವಕನಿಗಾಗಿ ಜಗಳ ಮಾಡಿಕೊಳ್ಳಲು ಆರಂಭಿಸುತ್ತಾರೆ. ಇಬ್ಬರು ಕೂಡ ಪರಸ್ಪರ ತಲೆಗೂದಲನ್ನು ಎಳೆಯುವುದು, ಹೊಡೆಯುವುದನ್ನು ಮಾಡಿದ್ದಾರೆ. ಈ ವೇಳೆ ಇಬ್ಬರ ಜಗಳವನ್ನು ಬಿಡಿಸಲು ಅವರ ಸ್ನೇಹಿತರು ಪರದಾಡಿ ಕೊನೆಗೂ ಅವರನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗುವುದನ್ನು ನೋಡಬಹುದು. UnSeen India ಎಂಬ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ನಡುವೆ ಜಗಳ” ಎಂದು ಶೀರ್ಷಿಕೆ ನೀಡಲಾಗಿದೆ. 1.27 ಲಕ್ಷಕ್ಕೂ ಅಧಿಕ ಮಂಡಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, 3 ಸಾವಿರಕ್ಕೂ ಅಧಿಕ ಲೈಕ್ಗಳು ಬಂದಿವೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Mon, 17 October 22