Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್

ಸ್ಕೇಟಿಂಗ್ ಮಾಡುತ್ತಿರುವ ಮಹಿಳೆಯೊಂದಿಗೆ ಸಾಕು ನಾಯಿ ಮತ್ತು ಕುದುರೆ ಓಡುತ್ತಿರುವ ಮನಮೋಹಕ ವಿಡಿಯೋ ವೈರಲ್ ಆಗುತ್ತಿದೆ. ಅದರ ವಿಡಿಯೋ ಇಲ್ಲಿದೆ ನೋಡಿ.

Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್
ಮಹಿಳೆ, ನಾಯಿ ಮತ್ತು ಕುದುರೆ
Edited By:

Updated on: Jun 23, 2022 | 12:50 PM

ಸಾಮಾಜಿಕ ಜಾಲತಾಣಗಳಲ್ಲಿ ಆಗೊಂದು, ಈಗೊಂದು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ತನ್ನ ಸಾಕು ನಾಯಿ (Dog) ಮತ್ತು ಕುದುರೆ (Horse)ಯೊಂದಿಗೆ ಮಹಿಳೆಯೊಬ್ಬಳು ಸ್ಕೇಟಿಂಗ್ (Skating) ಮಾಡುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಪ್ರಶಾಂತವಾದ ಪ್ರದೇಶದಲ್ಲಿನ ಮಹಿಳೆಯ ಸ್ಕೇಟಿಂಗ್ ಜೊತೆ ನಾಯಿ ಮತ್ತು ಕುದುರೆ ಓಡುತ್ತಿರುವ ಮನಮೋಹಕ ವಿಡಿಯೋ ನೆಟ್ಟಿಗರ ಕಣ್ಮನ ಸೆಳೆದಿದ್ದು, 7.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 3.60 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ.

ಇದನ್ನೂ ಓದಿ: Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು

ಸಾರಾ ಎಂಬ ಮಹಿಳೆ ಅಕ್ಕ ಪಕ್ಕ ಅಚ್ಚ ಹಸುರಿನಿಂದ ಕೂಡಿದ ಪ್ರದೇಶದಲ್ಲಿ ಹಾದು ಹೋಗಿರುವ ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್ ಮಾಡಿದ್ದಾಳೆ. ಇವರ ಮುಂದೆ ಸಣ್ಣ ಗಾತ್ರದ ನಾಯಿಯೊಂದು ಓಡುತ್ತಿದ್ದು, ಮಹಿಳೆಯ ಪಕ್ಕದಲ್ಲಿ ಕುದುರೆ ಕೂಡ ಓಡುತ್ತದೆ. ಆಹ್ಲಾದಕರ ವಾತಾವರಣದಲ್ಲಿ ಎರಡು ಪ್ರಾಣಿಗಳ ಓಟ ಮತ್ತು ಮಹಿಳೆಯ ಸ್ಕೇಟಿಂಗ್ ವಿಡಿಯೋವನ್ನು buitengebieden ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral Photo: ಸ್ವಿಮ್ಮಿಂಗ್ ಪೂಲ್​ನಲ್ಲಿ ಮೂರ್ಛೆ ತಪ್ಪಿದ ಈಜುಗಾರ್ತಿ; ಈಜುಕೊಳಕ್ಕೆ ಜಿಗಿದು ಕಾಪಾಡಿದ ಕೋಚ್

ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ವರ್ಷಗಳ ಹಿಂದೆ ನಾನು ನನ್ನ ಕುದುರೆಯೊಂದಿಗೆ ಓಡುತ್ತಿದ್ದೆ. ಅವನು ಯಾವಾಗಲೂ ನನ್ನನ್ನು ಗೆಲ್ಲಲು ಬಿಡುತ್ತಿದ್ದನು ಮತ್ತು ಮನೆಗೆ ಹೋಗುವಾಗ ನಾನು ಅವನನ್ನು ಸೋಲಿಸಿದ್ದೇನೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Thu, 23 June 22