Viral Video: ಇದು ಸಖತ್​ ಲಿಪ್​​​ ಲಾಕ್​​​ ಕಿಸ್​​ ನೋಡಿ, ಕಾಲೇಜು ಗೆಳೆಯರ ಫನ್ನಿ ವಿಡಿಯೋ  

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಸ್ನೇಹಕ್ಕೆ ಸಂಬಂಧಪಟ್ಟ ವಿಡಿಯೋಗಳು ನಮ್ಮನ್ನು ತುಸು ಹೆಚ್ಚೇ ಸೆಳೆಯುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ನ ಕಿಸ್ ಮಿ ಕ್ಲೋಸ್ ಯುವರ್ ಐಸ್ ಸಾಂಗ್ ಗೆ ಫ್ರೆಂಡ್ಸ್ ಗುಂಪೊಂದು ಮಾಡಿದ ಫನ್ನಿ ರೀಲ್ಸ್ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. 

Viral Video: ಇದು ಸಖತ್​ ಲಿಪ್​​​ ಲಾಕ್​​​ ಕಿಸ್​​ ನೋಡಿ, ಕಾಲೇಜು ಗೆಳೆಯರ ಫನ್ನಿ ವಿಡಿಯೋ  
ವೈರಲ್​​ ವಿಡಿಯೋ
Edited By:

Updated on: Apr 23, 2024 | 5:53 PM

ಖುಷಿ, ಹರಟೆ, ತರ್ಲೆ ಹೀಗೆ ಎಲ್ಲದಕ್ಕೂ ನೆಲೆಯಾಗಿರುವ ಫ್ರೆಂಡ್ಸ್ ಸರ್ಕಲ್ ಎಂಬುದು ನವೋಲ್ಲಾಸದ ಜೀವಸೆಲೆ.  ಗೆದ್ದಾಗ ನಮ್ಮೊಡನೆ ಸಂತೋಷಪಡುವ ಕಷ್ಟದ ದಿನಗಳಲ್ಲಿ ಬೆನ್ನೆಲುಬಾಗಿ ಧೈರ್ಯ ತುಂಬಿ ನಮ್ಮನ್ನು ಮೇಲಕ್ಕೆತ್ತುವ ಸ್ನೇಹ ವರ್ಗ  ನಿಜಕ್ಕೂ ದೇವರ ವರವೇ ಸರಿ. ಆದರೂ ತರ್ಲೆ, ತುಂಟಾಟಗಳಿಲ್ಲದೆ ಈ ಸ್ನೇಹ ಅಪೂರ್ಣ ಅಂತಾನೇ ಹೇಳಬಹುದು. ಪ್ರತಿಯೊಂದು ಫ್ರೆಂಡ್ಸ್ ಸರ್ಕಲ್ ಗಳಲ್ಲೂ ಗೆಳೆಯರು  ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ತುಂಟಾಟಗಳನ್ನಾಡುತ್ತಿರುತ್ತಾರೆ. ಸ್ನೇಹಿತರ ತುಂಟಾಟಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಫನ್ನಿ ವಿಡಿಯೋ ವೈರಲ್ ಆಗಿದ್ದು, ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ನ ಕಿಸ್ ಮಿ ಕ್ಲೋಸ್ ಯುವರ್ ಐಸ್ ಸಾಂಗ್ ಗೆ ತರ್ಲೆ ಫ್ರೆಂಡ್ಸ್ಗಳು ಮಾಡಿದ ಫನ್ನಿ ರೀಲ್ಸ್ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು @_tokiyoo7_ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ನ ಕಿಸ್ ಮಿ ಕ್ಲೋಸ್ ಯುವರ್ ಐಸ್ ಸಾಂಗ್ ಗೆ ಫ್ರೆಂಡ್ಸ್ ಗುಂಪೊಂದು ಫನ್ನಿ ರೀಲ್ಸ್ ಮಾಡಿರುವ ದೃಶ್ಯವನ್ನು ಕಾಣಬಹುದು.  ಆಪ್ತ ಸ್ನೇಹಿತರು  ಕಾಲೇಜು ಮೈದಾನದ ಬಳಿ  ಕುಳಿತಿರುತ್ತಾರೆ. ಅವರಲ್ಲಿ ಮೇಲೆ ಕುಳಿತಿದ್ದಂತಹ ಇಬ್ಬರು ಗೆಳೆಯರು ಕೆಳಗೆ ಕುಳಿತಿದ್ದಂತಹ ಇಬ್ಬರು ಗೆಳೆಯರ ಮುಖವನ್ನು ಹಿಡಿದು ಒಬ್ಬರಿಗೊಬ್ಬರು ಲಿಪ್ ಕಿಸ್ ಕೊಡುವಂತೆ ಮಾಡಿದ್ದಾರೆ. ಈ ವಿಡಿಯೋಗೆ ಕಿಸ್ ಮಿ ಕ್ಲೋಸ್ ಯುವರ್ ಐಸ್ ಹಾಡನ್ನು ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: OYO ರೂಮ್ ಮುಚ್ಚಿಸಿದ್ದೀರಾ, ಈಗ ನಮಗೆ ನೀವೇ ರೂಮ್​​​ ನೀಡಿ ಶಾಸಕರ ಮುಂದೆ ಬೇಡಿಕೆಯಿಟ್ಟ ಲವರ್ಸ್​​

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ  ವಿಡಿಯೋ 9.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಜೀವದ ಗೆಳೆಯರ ತಮಾಷೆಯ ವಿಡಿಯೋವನ್ನು ಕಂಡು ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us