WhatsAppನಲ್ಲಿ ಬರುವ ಮದ್ವೆ ಆಮಂತ್ರಣ ಓದುವ ಮೊದಲು ಈ ಸುದ್ದಿ ಓದಲೇಬೇಕು

ವಾಟ್ಸಪ್‌ನಲ್ಲಿ ಬರುವ ನಕಲಿ ಮದುವೆ ಕಾರ್ಡ್‌ಗಳ ಮೂಲಕ ಸೈಬರ್ ವಂಚನೆ ಹೆಚ್ಚುತ್ತಿದೆ. ಅಪರಿಚಿತ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸೋರಿಕೆ ಆಗಿ ಹಣ ಕಳುವಾಗಬಹುದು. ಉತ್ತರ ಪ್ರದೇಶದಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಡಿಜಿಟಲ್ ಆಹ್ವಾನದ ಹೆಸರಿನಲ್ಲಿ ಬರುವ ವೈರಸ್‌ಯುಕ್ತ ಲಿಂಕ್‌ಗಳಿಂದ ಜಾಗರೂಕರಾಗಿರಿ. ಆನ್‌ಲೈನ್ ವಂಚನೆಗಳಿಂದ ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಎಚ್ಚರಿಕೆ ವಹಿಸಿ.

WhatsAppನಲ್ಲಿ ಬರುವ ಮದ್ವೆ ಆಮಂತ್ರಣ ಓದುವ ಮೊದಲು ಈ ಸುದ್ದಿ ಓದಲೇಬೇಕು
ಸಾಂದರ್ಭಿಕ ಚಿತ್ರ

Updated on: Dec 05, 2025 | 5:19 PM

ಈ ಮದುವೆ ಸಂದರ್ಭದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರು ವಾಟ್ಸಪ್​​ಗಳಲ್ಲಿ ಮದುವೆ ಕಾರ್ಡ್​​​ಗಳನ್ನು ಕಳಿಸುವುದು ಸಹಜ, ಈ ಡಿಜಿಟಲ್​​ ಯುಗದಲ್ಲಿ ಯಾರು ಕೂಡ ಮನೆಗೆ ಬಂದು ಆಮಂತ್ರಣ ನೀಡುವುದಿಲ್ಲ. ಆದರೆ ಇದೀಗ ಈ ವಾಟ್ಸಪ್​​ನಲ್ಲಿ (WhatsApp scam) ಬರುವ ಮದುವೆ ಕಾರ್ಡ್​​​ಗಳಲ್ಲಿಯೂ ವಂಚನೆ ಮಾಡಲು ಶುರುವಾಗಿದೆ. ವಿವಾಹ ಕಾರ್ಡ್ ನಕಲಿ APK (Android Application Package) ಗಳನ್ನು ತೆರೆಯುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳವ ಸಾಧ್ಯತೆಗಳು ಇದೆ. ಇತ್ತೀಚೆಗೆ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ವಂಚಕರು ಬಿಜ್ನೋರ್ ಮತ್ತು ಅಮ್ರೋಹಾದಲ್ಲಿ ಜನರಿಂದ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು WhatsApp ನಲ್ಲಿ ನಕಲಿ ವಿವಾಹ ಆಮಂತ್ರಣಗಳನ್ನು ಬಳಸುತ್ತಿದ್ದಾರೆ. ಈ ನಕಲಿ ಆಮಂತ್ರಣಗಳ ಲಿಂಕ್​​ನ್ನು ವಾಟ್ಸಪ್​​ನಲ್ಲಿ ಕಳುಹಿಸಲಾಗುತ್ತದೆ. ಲಿಂಕ್​​ ತೆರೆದಾಗ  ಅದು  ಫೋನ್‌ನಲ್ಲಿ ವೈರಸ್​​​​​ ಸೃಷ್ಟಿಸಿ ಫೋನ್‌ಗೆ ಸೋಂಕು ತರುತ್ತದೆ. ನಂತರ ನಿಮ್ಮ ಫೋನ್​​ನಲ್ಲಿರುವ ಎಲ್ಲ ಮಾಹಿತಿಗಳು ವಂಚಕರ ಕೈ ಸೇರುತ್ತದೆ. ಅದಕ್ಕಾಗಿ ಅವರು ವಿವಾಹ ಕಾರ್ಡ್‌ಗಳ ಬಳಕೆ ಮಾಡುತ್ತಾರೆ. ಒಂದು ವೇಳೆ ಈ ಲಿಂಕ್​​ನ್ನು ನೇರವಾಗಿ ಕಳುಹಿಸಿದ್ರೆ ಅನುಮಾನ ಬರುಬಹುದು ಎಂದು ಈ ಮದುವೆ ಕಾರ್ಡ್​​ಗಳನ್ನು ಉಪಯೋಗಿಸುತ್ತಾರೆ.

“ಡಿಜಿಟಲ್ ಆಹ್ವಾನ” ಹಗರಣಗಳ ಏರಿಕೆ

ವಂಚನೆಯ ಮದುವೆ ಕಾರ್ಡ್ apks ಸಹಾಯದಿಂದ, ಸ್ಕ್ಯಾಮರ್‌ಗಳು ಬ್ಯಾಂಕ್ ಖಾತೆಗಳು, ಪಾಸ್‌ವರ್ಡ್‌ಗಳು ಮತ್ತು ಸಂಪರ್ಕಗಳನ್ನು ಪ್ರವೇಶ ಮಾಡಿ. ನಿಮ್ಮ ಬ್ಯಾಂಕ್​​ನಲ್ಲಿರುವ ಹಣ ಮಾಯಾವಾಗಬಹುದು. ಕಳೆದ ಎರಡು ತಿಂಗಳಲ್ಲಿ ಬಿಜ್ನೋರ್‌ನಲ್ಲಿ ಇಂತಹ 15 ಪ್ರಕರಣಗಳು ವರದಿಯಾಗಿವೆ. ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಧಂಪುರ ನಿವಾಸಿ ಡಾ. ಓಂಪ್ರಕಾಶ್ ಚೌಹಾಣ್ ಅವರಿಗೆ ಮದುವೆಯ ಆಮಂತ್ರಣ ಸಂದೇಶ ಬಂದು ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ತಕ್ಷಣ ಅವರ ಬ್ಯಾಂಕ್​​ ಖಾತೆಯಲ್ಲಿದ್ದ 31,000 ರೂ. ಹಣ ಹೋಗಿದೆ. ಈ ಬಗ್ಗೆ ಬಿಜ್ನೋರ್‌ನ ಹೆಚ್ಚುವರಿ ಎಸ್‌ಪಿ (ನಗರ) ಡಾ. ಕೃಷ್ಣ ಗೋಪಾಲ್ ಮಾತನಾಡಿ, ನಕಲಿ ಆಮಂತ್ರಣ ಪತ್ರಗಳು ಸಾಮಾನ್ಯವಾಗಿ APK ಫೈಲ್‌ಗಳಾಗಿ ಬರುತ್ತವೆ. ಜನರು ಈ ಫೈಲ್‌ಗಳನ್ನು ನಿಜವಾದ ಆಮಂತ್ರಣ ಪತ್ರಗಳೆಂದು ಭಾವಿಸಿ ಡೌನ್‌ಲೋಡ್ ಮಾಡುತ್ತಾರೆ. ಆಗ ಅವರ ಖಾತೆಯಲ್ಲಿ ಹಣ ಹೋಗುತ್ತದೆ.

ಇದನ್ನೂ ಓದಿ: ಧೂಮಪಾನ ನಿಷೇಧಿಸಿದ ಜಗತ್ತಿನ ಮೊದಲು ರಾಷ್ಟ್ರ ಇದು

ಅಪರಿಚಿತ ಮೂಲಗಳಿಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ, ಪರಿಚಯವಿಲ್ಲದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ ಮತ್ತು ಪರಿಶೀಲಿಸದೆ ಕರೆ ಅಥವಾ ವಾಟ್ಸಾಪ್‌ನಲ್ಲಿರುವ ಯಾರೊಂದಿಗೂ OTP ಗಳನ್ನು ಹಂಚಿಕೊಳ್ಳಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣ ಬಿಜ್ನೋರ್​​​ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ “ಡಿಜಿಟಲ್ ಆಹ್ವಾನ” ವಂಚನೆಗಳು ಹೆಚ್ಚುತ್ತಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು 2023 ರಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಸೈಬರ್ ಅಪರಾಧ ದೂರುಗಳನ್ನು ಸ್ವೀಕರಿಸಿದೆ. ಆದ್ದರಿಂದ, ಪೊಲೀಸರು ಸಾರ್ವಜನಿಕರು ಜಾಗರೂಕರಾಗಿರಿ ಮತ್ತು ಅಂತಹ ಘಟನೆಗಳನ್ನು ಗಂಭೀರ ಎಚ್ಚರಿಕೆಗಳಾಗಿ ಪರಿಗಣಿಸಬೇಕೆಂದು ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ