
Viral : ಮಾದಕ ವಸ್ತುಗಳನ್ನು, ಚಿನ್ನದ ಬಿಸ್ಕತ್ತುಗಳನ್ನು ಬಚ್ಚಿಟ್ಟಿಕೊಂಡು ಪ್ರಯಾಣಿಸುವುದು ಮತ್ತು ಪೊಲೀಸರ ಕೈಗೆ ಸಿಕ್ಕುಹಾಕಿಕೊಳ್ಳುವುದು ಹೊಸ ವಿಷಯವೇನಲ್ಲ. ಮೇಲಿಂದ ಮೇಲೆ ಇಂಥ ಪ್ರಸಂಗಗಳು ನಡೆಯುತ್ತಲೇ ಇರುವುದರಿಂದ ಈ ಕೃತ್ಯಗಳಿಗೆ ಅಂತ್ಯವೇ ಇಲ್ಲವೇ? ಎಂಬ ಬೇಸರ ಮಾತ್ರ ಮುಗಿಯದ್ದು. ಇದೀಗ 4.9 ಕೋಟಿ ಮೌಲ್ಯದ ಕೊಕೇನ್ ಅನ್ನು ತನ್ನ ಸ್ಯಾಂಡಲ್ನೊಳಗೆ ಬಚ್ಚಿಟ್ಟುಕೊಂಡಿದ್ದ ಮಹಿಳೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಆರೋಪಿಯು ತನ್ನ ಸ್ಯಾಂಡಲ್ಸ್ನೊಳಗೆ ರೂಪಿಸಾಗಿದ್ದ ರಹಸ್ಯ ಜಾಗದಲ್ಲಿ ಕೊಕೇನ್ ಅನ್ನು ಬಚ್ಚಿಟ್ಟುಕೊಂಡಿದ್ದಳು. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ. 4.9 ಕೋಟಿ ಮೌಲ್ಯದ 490 ಗ್ರಾಂ ಕೊಕೇನ್ ಅನ್ನು ಮುಂಬೈ ಏರ್ಪೋರ್ಟ್ ಕಸ್ಟಮ್ಸ್ ವಶಪಡಿಸಿಕೊಂಡಿದೆ. ಸೆಪ್ಟೆಂಬರ್ 29 ರಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ANI ಸುದ್ದಿ ಸಂಸ್ಥೆಯು ಟ್ವೀಟ್ ಮಾಡಿದ ವಿಡಿಯೋದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಚಿರತೆ ಪ್ರಿಂಟ್ ಇರುವ ಸ್ಯಾಂಡಲ್ಸ್ಗಳನ್ನು ಕತ್ತರಿಸಿ ಕೊಕೇನ್ ಅನ್ನು ಹೊರತೆಗೆದಿರುವುದನ್ನು ತೋರಿಸಲಾಗಿದೆ. ಈ ವಿಡಿಯೋ 18,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ವೈರಲ್ ಆಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ