ಕೊಲಂಬಿಯಾದ ಕೊಲೀನ್​ ಗೌಡ ಮೊದಲ ಬಾರಿಗೆ ಜಿಲೇಬಿ ತಿಂದಾಗ

Columbian Woman : ಈ ಜಿಲೇಬಿ ಯಾಕೆ ಇಷ್ಟೊಂದು ತೆಳ್ಳಗಿದೆ ಎಂದು ಕೊಲಂಬಿಯಾದ ಕೊಲೀನ್ ನಗುತ್ತ ತನ್ನ ಭಾರತೀಯ ಪತಿಗೆ ಕೇಳುತ್ತಾಳೆ. 28 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಕೊಲಂಬಿಯಾದ ಕೊಲೀನ್​ ಗೌಡ ಮೊದಲ ಬಾರಿಗೆ ಜಿಲೇಬಿ ತಿಂದಾಗ
ಕೊಲೀನ್ ಗೌಡಾ ಜಿಲೇಬಿ ತಿನ್ನುವಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 01, 2022 | 4:48 PM

Viral Video : ಭಾರತೀಯರಾದ ನಾವು ಸಿಹಿತಿಂಡಿಪ್ರಿಯರು. ಅಂಗಡಿಗಳಿಗೆ ಹೋದಾಗ ಗಂಟೆಗಟ್ಟಲೆ ನಿಂತು ಕಾಯ್ದು ಖರೀದಿಸಿ ತರುತ್ತೇವೆ. ನಮ್ಮಲ್ಲಿರುವ ಥರಾವರಿ ತಿಂಡಿತಿನಿಸುಗಳಲ್ಲಿ ಈ ಜಿಲೇಬಿಯಂತೂ ಬಹುತೇಕರಿಗೆ ಪ್ರೀತಿಯ ಖಾದ್ಯ. ಜಿಲೇಬಿ ತಿನ್ನುವುದು ನಮಗೆ ಮಾಮೂಲಿ. ಆದರೆ ವಿದೇಶಿಯರಿಗೆ? ಅದೂ ಮೊದಲ ಸಲ ಪ್ರಯತ್ನಿಸಿದಾಗ ಅವರ ಪ್ರತಿಕ್ರಿಯೇ ಹೇಗಿರುತ್ತದೆ ನೋಡಬೇಕೆ? ಕೊಲಂಬಿಯಾದ ಮಹಿಳೆಯೊಬ್ಬರು ಜಿಲೇಬಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by colleen gowda (@colleengowda)

ಕೊಲೀನ್ ಗೌಡ (@colleengowda) ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಲಾಗಿದೆ. ಈ ಜಿಲೇಬಿ ಯಾಕೆ ಇಷ್ಟೊಂದು ತೆಳ್ಳಗಿದೆ ಎಂದು ಕೊಲಂಬಿಯಾದ ಕೊಲೀನ್ ನಗುತ್ತ ತನ್ನ ಭಾರತೀಯ ಪತಿಗೆ ಕೇಳುತ್ತಾಳೆ. ಈ ವಿಡಿಯೋ ನೋಡುತ್ತಿದ್ದರೆ ಈಕೆಗೆ ಈ ಜಿಲೇಬಿ ಅಷ್ಟೊಂದು ಇಷ್ಟವಾಗಿಲ್ಲವೆಂದು ತೋರುತ್ತದೆ.

ಸೆ.11ರಂದು ಹಂಚಿಕೊಂಡ ಈ ವಿಡಿಯೋ ಈತನಕ 28 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. 47,000 ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ‘ನೀವು ಭಾರತೀಯ ಆಹಾರವನ್ನು ತಿನ್ನಲು ಪ್ರಯತ್ನಿಸುವಾಗೆಲ್ಲ ಮುಕ್ತ ಮನಸಿನಿಂದ ಅನುಭವಿಸುತ್ತ ತಿನ್ನಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಿಮಗೆ ಜಿಲೇಬಿಯ ವಿನ್ಯಾಸ ಇಷ್ಟವಾಗದಿದ್ದರೆ ವೆನಿಲ್ಲಾ ಐಸ್​ಕ್ರೀಮ್​ನಲ್ಲಿ ಪುಡಿಪುಡಿ ಮಾಡಿಕೊಂಡು ತಿನ್ನಿರಿ’ ಎಂದಿದ್ದಾರೆ ಮತ್ತೊಬ್ಬರು. ‘ಕೊನೇಪಕ್ಷ ಈಕೆ ಇದನ್ನು ತಿನ್ನಲಾದರೂ ಪ್ರಯತ್ನಿಸುತ್ತಿದ್ದಾಳೆ!’ ಎಂದು ಮಗದೊಬ್ಬರು ಬೆಂಬಲಿಸಿದ್ದಾರೆ.

ನಿಮಗೇನು ಅನ್ನಿಸಿತು ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:45 pm, Sat, 1 October 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು