ಡ್ರೋನ್​ ಸೆರೆಹಿಡಿದ ಮೌಂಟ್ ಎವರೆಸ್ಟ್​ನ ಮನಮೋಹಕ ದೃಶ್ಯ, ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ನೋಡಿ

Mount Everest : ಮೌಂಟ್​ ಎವರೆಸ್ಟ್​ಗೆ ಹೋಗದಿದ್ದರೇನಂತೆ, ನೀವಿದ್ದಲ್ಲೇ ಅದರ ದೃಶ್ಯವೈಭವವನ್ನು ನೋಡಿ ಆಹ್ಲಾದಿಸಬಹುದು. ಡ್ರೋನ್​ ಕ್ಯಾಮೆರಾದ ಈ ಅದ್ಭುತ ದೃಶ್ಯಗಳು ನಿಮ್ಮ ಮನಸೆಳೆಯುವಲ್ಲಿ ಎರಡು ಮಾತಿಲ್ಲ.

ಡ್ರೋನ್​ ಸೆರೆಹಿಡಿದ ಮೌಂಟ್ ಎವರೆಸ್ಟ್​ನ ಮನಮೋಹಕ ದೃಶ್ಯ, ಹರ್ಷ ಗೋಯೆಂಕಾ ಹಂಚಿಕೊಂಡ ಈ ವಿಡಿಯೋ ನೋಡಿ
ಮೌಂಟ್​ ಎವರೆಸ್ಟ್​ನ ಹಿಮರಾಶಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Oct 01, 2022 | 2:53 PM

Viral Video : ಇವು ಮೌಂಟ್ ಎವರೆಸ್ಟ್​ನ ನಯನಮನೋಹರ ದೃಶ್ಯಗಳು. ನೋಡುತ್ತಿದ್ದಂತೆ ಮೈಯೆಲ್ಲ ನವಿರೇಳುತ್ತದೆ. ಹಿಮಾಚ್ಛಾದಿತ ಪರ್ವತಗಳು, ಚಲಿಸುವ ಮೋಡಗಳು ಸ್ವರ್ಗವೆಂದರೆ ಇದೇ ಇರಬೇಕು ಎನ್ನಿಸದೇ ಇರದು. @8kraw_official ಈ ಪ್ರಾಜೆಕ್ಟ್​ನಲ್ಲಿ ಭಾಗಿಯಾಗಿದೆ. ಪರ್ವತದ ಅದ್ಭುತ ಸೌಂದರ್ಯ ಮತ್ತು ಅದರ ಸುತ್ತಮುತ್ತಲಿನ ಅನನ್ಯ ಸೊಬಗನ್ನು ಡ್ರೋನ್​ ಮೂಲಕ ಸೆರೆಹಿಡಿಯಲಾಗಿದೆ. ಆಗಸ್ಟ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಉದ್ಯಮಿ ಹರ್ಷ್ ಗೋಯೆಂಕಾ  ವಿಡಿಯೋ ಅನ್ನು ಟ್ವಿಟರ್​ನಲ್ಲಿ ಮರುಹಂಚಿಕೆ ಮಾಡಿಕೊಂಡಿದ್ದಾರೆ. ‘ಡ್ರೋನ್‌ನಿಂದ ಸೆರೆಹಿಡಿಯಲಾದ ಮೌಂಟ್ ಎವರೆಸ್ಟ್‌ನ ಈ ಅದ್ಭುತ ದೃಶ್ಯಗಳು’ ಎಂಬ ಶೀರ್ಷಿಕೆ ಇದಕ್ಕಿದೆ. 

ಈತನಕ ಈ ವಿಡಿಯೋ ಸುಮಾರು 72,000 ವೀಕ್ಷಕರನ್ನು ತಲುಪಿದೆ. ಸುಮಾರು 2,400 ಲೈಕ್‌ಗಳನ್ನು ಇದು ಗಳಿಸಿದೆ. ಈ ವಿಡಿಯೋ ಅನ್ನು ನೋಡಿದ ಟ್ವಿಟರ್​ ಖಾತೆದಾರರು ಅನೇಕ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಉಸಿರು’ ಎಂದು ಒಬ್ಬರು ಹೇಳಿದ್ದಾರೆ. ಎಂಥ ಅದ್ಭುತ ದೃಶ್ಯಗಳು ಇವು, ಹೊಸ ತಂತ್ರಜ್ಞಾನದ ಅನ್ವೇಷಣೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಹೀಗಿಲ್ಲಿ ಈ ದೃಶ್ಯವೈಭವವನ್ನು ನೋಡುತ್ತಿದ್ದರೆ ಮನಸ್ಸು ಎಷ್ಟೊಂದು ಪ್ರಫುಲ್ಲಿತಗೊಳ್ಳುತ್ತದಲ್ಲ!

ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ