AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಪ್ರೇಯಸಿಯೊಂದಿಗೆ ಗಂಡನ ಮದುವೆ ಮಾಡಿದ ಹೆಂಡತಿ, ಮೂವರೂ ಈಗ ಒಟ್ಟಿಗೆ ವಾಸಿಸುತ್ತಿದ್ದಾರೆ

Andhra Pradesh : ಕಲ್ಯಾಣ್-ವಿಮಲಾ ದಂಪತಿಯು ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್​ ಕ್ರಿಯೇಷನ್​ ಮೂಲಕ ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಕಲ್ಯಾಣ್​ನ ಹಳೆಯ ಪ್ರೇಯಸಿ ನಿತ್ಯಾಶ್ರೀ ಇವರ ಬಾಳಿನಲ್ಲಿ ಪ್ರವೇಶಿಸಿದಳು.

ಹಳೆಯ ಪ್ರೇಯಸಿಯೊಂದಿಗೆ ಗಂಡನ ಮದುವೆ ಮಾಡಿದ ಹೆಂಡತಿ, ಮೂವರೂ ಈಗ ಒಟ್ಟಿಗೆ ವಾಸಿಸುತ್ತಿದ್ದಾರೆ
ಪ್ರೇಯಸಿಯೊಂದಿಗೆ ಗಂಡನ ಮದುವೆ ಮಾಡಿಸಿದ ಹೆಂಡತಿ
ಶ್ರೀದೇವಿ ಕಳಸದ
|

Updated on:Oct 01, 2022 | 2:00 PM

Share

Viral : ಆಂಧ್ರಪ್ರದೇಶ ಮೂಲದ ಯುವತಿಯೊಬ್ಬಳು ಗಂಡನ ಹಳೆಯ ಪ್ರೇಯಸಿಯೊಂದಿಗೆ ಆತನ ಮದುವೆ ಮಾಡಿದ ಅಪರೂಪದ ಘಟನೆ ನಡೆದಿದೆ. ಮದುವೆ ನಂತರ ಮೂವರೂ ಒಟ್ಟಿಗೇ ವಾಸಿಸುತ್ತಿದ್ದಾರೆ. ಹೌದು ನೀವು ಓದಿದ್ದು ಸರಿ ಇದೆ. ಇದು ಸತ್ಯಘಟನೆ. ನಿತ್ಯವೂ ಪ್ರೀತಿ, ಪ್ರೇಮ, ಮದುವೆ ಇಂಥ ವಿಷಯಗಳಲ್ಲಿ ಸಾಕಷ್ಟು ಅಪರಾಧ ಸುದ್ದಿಗಳನ್ನು ಕೇಳುತ್ತೇವೆ ನೋಡುತ್ತೇವೆ. ಆದರೆ ಈ ಘಟನೆ ಸುಖಾಂತ್ಯವಾಗಿದ್ದು ಮತ್ತು ಅಚ್ಚರಿಯ ತಿರುವನ್ನೂ ಪಡೆದುಕೊಂಡಿದೆ.

ವರದಿಗಳ ಪ್ರಕಾರ, ಸ್ನೇಹಿತರಾಗಿದ್ದ ಕಲ್ಯಾಣ್ ಮತ್ತು ವಿಮಲಾ ಕೆಲ ವರ್ಷಗಳ ಹಿಂದೆ ಪ್ರೇಮವಿವಾಹದ ಮೂಲಕ ದಾಂಪತ್ಯಜೀವನಕ್ಕೆ ಕಾಲಿಟ್ಟರು. ಕಲ್ಯಾಣ್ ತಿರುಪತಿಯ ದಕ್ಕಿಲಿಯ ಅಂಬೇಡ್ಕರ್ ನಗರದಲ್ಲಿ ಕಂಟೆಂಟ್ ಕ್ರಿಯೇಟರ್. ಈತನ ಪತ್ನಿ ವಿಮಲಾ ಕೂಡ ಇದೇ ಕೆಲಸದಲ್ಲಿ ತೊಡಗಿಕೊಂಡರು. ಯೂಟ್ಯೂಬ್ ಮತ್ತು ಶೇರ್​ಚಾಟ್​ನಂತರ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಈ ಜೋಡಿ ಸೃಷ್ಟಿಸುವ ಕಂಟೆಂಟ್​ ಕ್ರಿಯೇಷನ್ ಖ್ಯಾತಿ ಪಡೆದುಕೊಂಡಿತು. ಈ ಮೂಲಕ ಇವರಿಬ್ಬರೂ ಜನಪ್ರಿಯ ಜೋಡಿಗಳಾದರು.

ಹೀಗಿರುವಾಗಲೇ ಇವರ ವೈಯಕ್ತಿಕ ಬದುಕಿನ ಕಥೆಯಲ್ಲಿ ವಿಚಿತ್ರ ತಿರುವು ಕಾಣಿಸಿಕೊಂಡಿದೆ. ಕಲ್ಯಾಣ್‌ನ ಹಳೆಯ ಗೆಳತಿ, ವಿಶಾಖಪಟ್ಟಣಂನ ನಿತ್ಯಾಶ್ರೀ ಈ ದಂಪತಿಯ ಮನೆಗೆ ತೆರಳಿ ಗಲಾಟೆ ಮಾಡಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವರದಿಗಳ ಪ್ರಕಾರ, ನಿತ್ಯಾಶ್ರೀ ಕೂಡ ಕಂಟೆಂಟ್​ ಕ್ರಿಯೇಟರ್​. ಈ ಹಿಂದೆ ಕಲ್ಯಾಣ್​ ಜೊತೆ ಸಂಬಂಧವನ್ನು ಹೊಂದಿದ್ದಳು. ಆದರೆ ಯಾವುದೋ ಕಾರಣದಿಂದ ಪರಸ್ಪರ ಬೇರೆಯಾಗಿ ಸಂಪರ್ಕ ಕಡಿದುಕೊಂಡರು. ಅದಾದ ನಂತರ ಕಲ್ಯಾಣ ವಿಮಲಾರನ್ನು ಮದುವೆಯಾಗಿ ಸಂಸಾರ ಶುರುಮಾಡಿದರು.

ಆದರೆ ನಿತ್ಯಾಶ್ರೀ ಇದ್ದಕ್ಕಿದ್ದಂತೆ ತನ್ನ ಹಳೆಯ ಪ್ರೇಮಿಯ ಮನೆಗೆ ತೆರಳಿ, ಆತ ವಿವಾಹಿತನೆಂದು ತಿಳಿದರೂ ಆತನ ಹೆಂಡತಿ ವಿಮಲಾಳ ಬಳಿ ತನ್ನ ವಿಚಿತ್ರ ಕೋರಿಕೆಯನ್ನು ತೋಡಿಕೊಂಡಳು; ಕಲ್ಯಾಣ್​ನನ್ನು ಮದುವೆಯಾಗಲು ಅನುಮತಿ ಕೊಡುವಂತೆ ನಿತ್ಯಾಶ್ರೀ ವಿಮಲಾಳನ್ನು ವಿನಂತಿಸಿಕೊಂಡಳು. ವಿಮಲಾ ಅವಳ ವಿನಂತಿಯನ್ನು ನಿರಾಕರಿಸದೆ ತಾನೇ ಮುಂದೆ ನಿಂತು ಅವರಿಬ್ಬರ ಮದುವೆಯನ್ನು ಮಾಡಿಸಿದಳು. ಇದೀಗ ಮೂವರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:56 pm, Sat, 1 October 22

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ