ಕ್ಯಾಷಿಯರ್​ ಮಿ. ಬೆಕ್ಕಣ್ಣ ಮತ್ತು ಬ್ಯಾಂಕ್​ ಮ್ಯಾನೇಜರ್​ ಮಿ. ಬೆಕ್ತಮ್ಮಣ್ಣ

Cat : ನೀವಂತೂ ಆನ್​ಲೈನಿನಲ್ಲಿ ಬೇಕಾಬಿಟ್ಟಿ ಖರೀದಿಸುವ ಚಟಕ್ಕೆ ಬಿದ್ದುಬಿಟ್ಟಿದ್ದೀರಿ. ಆದರೆ ಹಣವನ್ನು ಜತನದಿಂದ ಕಾಪಾಡಬೇಕು ಎನ್ನುವ ಅರಿವು ಈ ಬೆಕ್ಕುಗಳಿಗಂತೂ ಬಂದಿದೆ. ಇವುಗಳನ್ನು ನೋಡಿದ ಮೇಲಾದರೂ ನೀವು...

ಕ್ಯಾಷಿಯರ್​ ಮಿ. ಬೆಕ್ಕಣ್ಣ ಮತ್ತು ಬ್ಯಾಂಕ್​ ಮ್ಯಾನೇಜರ್​ ಮಿ. ಬೆಕ್ತಮ್ಮಣ್ಣ
ಕ್ಯಾಷಿಯರ್ ಕ್ಯಾಟ್
Follow us
ಶ್ರೀದೇವಿ ಕಳಸದ
|

Updated on:Oct 01, 2022 | 12:36 PM

Viral Video : ಹಣವನ್ನೇ ಹಾಸಿಹೊದ್ದು ಮಲಗುತ್ತಾರೇನು? ಎಂದು ಹಣದಾಹಿಗಳಿಗೆ ಹೇಳುವ ರೂಢಿಯಿದೆ. ನಾಲ್ಕುಕಾಲಿನ ಇವರು ಮಾತ್ರ, ಹೌದು ಉಳಿತಾಯ ಮಾಡಬೇಕೆಂದರೆ ಹೀಗೆ ಹಾಸಿಕೊಂಡು ಮಲಗಲೇಬೇಕು ಎನ್ನುತ್ತಿದ್ದಾರೆ. ಸಾಕಷ್ಟು ನೋಟುಗಳನ್ನು ಹಾಸಿಗೆಯಾಗಿಸಿಕೊಂಡ ಇವರು ಮೈಯೆಲ್ಲ ಕಣ್ಣಾಗಿ ನೋಟುಗಳ ಕಡೆ ನಿಗಾವಹಿಸಿದ್ದಾರೆ. ಅದಕ್ಕೆ ನೆಟ್ಟಿಗರು ಇವರನ್ನು ಸ್ಟ್ರಿಕ್ಟ್ ಕ್ಯಾಶಿಯರ್ ಎಂದು ಕರೆದಿದ್ದಾರೆ. ಯಾರೋ ಒಬ್ಬರು ಈ ಹಣದ ಪೆಟ್ಟಿಗೆಯಲ್ಲಿ ಸುಮ್ಮನೆ ನೋಟು ಕದಿಯಲು ನೋಡುತ್ತಾರೆ. ಆದರೆ ಆಕಾಶ ನೋಡುತ್ತಿದ್ದ ಈ ಬೆಕ್ಕು ಪಟ್ಟನೆ ಅವರ ಕೈಕಚ್ಚಿದಂತೆ ಮಾಡುತ್ತದೆ. ನಂತರ ನೋಟೊಂದನ್ನು ಹಾಕಿ ಉಳಿದ ಚಿಲ್ಲರೆಯನ್ನು ತೆಗೆದುಕೊಳ್ಳಲು ಕೈ ಹಾಕುತ್ತಾರೆ. ಆದರೆ ಮಿಸ್ಟರ್ ಕ್ಯಾಷಿಯರ್​ ಮಾತ್ರ ಅದಕ್ಕೆ ಅನುಮತಿ ನೀಡುವುದೇ ಇಲ್ಲ!

Only deposits are allowed under the cashier’s new rule…????? pic.twitter.com/l3yfmB5LjO

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

UPI ಪಾವತಿಯ ಈ ಕಾಲದಲ್ಲಿ ನಾವು ಅನಗತ್ಯವಾಗಿ ಆನ್​ಲೈನ್​ನಲ್ಲಿ ವಸ್ತುಗಳನ್ನ ಖರೀದಿಸುತ್ತಲೇ ಇರುತ್ತೇವೆ. ಇದೊಂದು ರೀತಿ ಅಭ್ಯಾಸವೇ ಆಗಿ ಹೋಗಿದೆ ನಮಗೆಲ್ಲ. ಆದರೆ ಈ ಬೆಕ್ಕು ಮಾತ್ರ ಹಣವನ್ನು ಸುಮ್ಮಸುಮ್ಮನೆ ವ್ಯರ್ಥ ಮಾಡಬಾರದು ಎನ್ನುವ ಮನೆಯ ಹಿರಿಯ ಸದಸ್ಯನಂತೆ ವರ್ತಿಸುತ್ತಿದೆ!

ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಬೆಕ್ಕು ಮತ್ತು ಹಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಈ ವಿಡಿಯೋದ ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ. ಹಣ ಎಣಿಸುತ್ತಿರುವ ಈ ಇನ್ನೊಬ್ಬ ಬೆಕ್ತಮ್ಮಣ್ಣನನ್ನು ನೋಡಿ.

ಇದು ಬ್ಯಾಂಕಿನ ಮ್ಯಾನೇಜರ್ ಆಗುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದೆ ಎಂದು ತಮಾಷೆ ಮಾಡಿದ್ದಾರೆ ನೆಟ್ಟಿಗರು. ಸಾಮಾನ್ಯವಾಗಿ ಒಂದು ತುಂಡು ಹಾಳೆ ಸಿಕ್ಕರೂ ಬೆಕ್ಕುಗಳು ಚಿಂದಿಚಿಪ್ಪಾಡಿ ಮಾಡಿಬಿಡುತ್ತವೆ. ಆದರೆ ಈ ಎರಡೂ ಬೆಕ್ಕುಗಳು ಮಾತ್ರ ಎಷ್ಟೊಂದು ಜತನದಿಂದ ಹಣವನ್ನು ನೋಡಿಕೊಳ್ಳುತ್ತಿವೆ ನೋಡಿ.

ಸದ್ಯ ಬೆಕ್ಕಿಗಾದರೂ ಹಣದ ಬೆಲೆ ತಿಳಿಯುತ್ತಿದೆಯಲ್ಲ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:32 pm, Sat, 1 October 22