AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಚಿತ್ರದಲ್ಲಿ ಮೊದಲು ಏನು ಕಾಣುತ್ತೀರಿ ಮತ್ತು ಅದಕ್ಕನುಗುಣವಾಗಿ ನಿಮ್ಮ ವ್ಯಕ್ತಿತ್ವ ಎಂಥದು

Optical Illusion : ಥಟ್ಟನೆ ನೋಡಿದಾಗ ಈ ಚಿತ್ರದಲ್ಲಿ ಮೊದಲು ಏನು ಕಾಣುತ್ತದೆ? ಎನ್ನುವುದನ್ನಷ್ಟೇ ಗುರುತಿಸುವುದಲ್ಲ. ಈ ಗುರುತಿಸುವಿಕೆಯಿಂದ ನಿಮ್ಮ ವ್ಯಕ್ತಿತ್ವ ಎಂಥದು ಎಂದೂ ತಿಳಿದುಕೊಳ್ಳಬಹುದು.

ಈ ಚಿತ್ರದಲ್ಲಿ ಮೊದಲು ಏನು ಕಾಣುತ್ತೀರಿ ಮತ್ತು ಅದಕ್ಕನುಗುಣವಾಗಿ ನಿಮ್ಮ ವ್ಯಕ್ತಿತ್ವ ಎಂಥದು
ಏನು ಕಾಣಿಸುತ್ತಿದೆ ನಿಮಗಿಲ್ಲಿ?
TV9 Web
| Updated By: ಶ್ರೀದೇವಿ ಕಳಸದ|

Updated on: Oct 01, 2022 | 11:01 AM

Share

Viral Optical Illusion Personality Test : ಪ್ರತೀದಿನವೂ ಇಂಥ ಬ್ರೇನ್​ ಟೀಸರ್​ಗಳನ್ನು ನೋಡುತ್ತ ತಲೆಕೆಡಿಸಿಕೊಂಡು ಉತ್ತರ ಕಂಡುಕೊಳ್ಳುವುದನ್ನು ರೂಢಿಸಿಕೊಂಡು ಮನಸ್ಸನ್ನು ಉಲ್ಲಸಿತಗೊಳಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೀರಿ ಅಲ್ಲವೆ? ಈಗ ಇಲ್ಲಿರುವ ಈ ಆಪ್ಟಿಕಲ್ ಇಲ್ಲ್ಯೂಷನ್​ನಲ್ಲಿ ಕೇವಲ ಚಿತ್ರದಲ್ಲಿ ಏನಿದೆ ಎಂದು ಗುರುತಿಸುವುದಷ್ಟೇ ಅಲ್ಲ, ಏನನ್ನು ಗುರುತಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಅಂದರೆ ನಿಮ್ಮದು ಸ್ಪರ್ಧಾತ್ಮಕ ಮನೋಭಾವವೆ? ಅಥವಾ ಪ್ರಾಮಾಣಿಕ ವ್ಯಕ್ತಿತ್ವವೇ ಎಂದು ನಿಮಗೆ ನೀವೇ ಖಚಿತಪಡಿಸಿಕೊಳ್ಳಬಹುದು. ಇದನ್ನು ಚಾರ್ಲ್ಸ್ ಮೆರಿಯಟ್ ಎನ್ನುವವರು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 84,000 ಜನರು ಇದನ್ನು ವೀಕ್ಷಿಸಿದ್ದಾರೆ. ಇದನ್ನು ನೋಡಿದ ಅನೇಕರು ಅಚ್ಚರಿಗೆ ಒಳಗಾಗಿ ಪ್ರತಿಕ್ರಿಯಿಸಿದ್ದಾರೆ. ಬಹಳ ಅದ್ಭುತವಾಗಿ ಈ ಚಿತ್ರವು ಸಂಯೋಜಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಅನೇಕರು ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಫಲಿತಾಂಶ ಸಿಕ್ಕಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆಗಸ್ಟ್ 2021 ಸಾಮಾಜಿಕ ಜಾಲತಾಣದಲ್ಲಿ ಇದನ್ನು ಮೊದಲ ಬಾರಿಗೆ ಪ್ರಕಟಿಸಲಾಗಿದೆ.

ಈ ಚಿತ್ರದಲ್ಲಿ ನಿಮಗೆ ತಲೆಬುರುಡೆ ಕಂಡಿದ್ದರೆ ನೀವು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು. ನಂಬಿಕೆಗೆ ಅರ್ಹರು ಎಂದರ್ಥ. ನಿಮ್ಮ ಸ್ನೇಹಿತರು ಯಾವಾಗಲೂ ನಿಮ್ಮ ಮೇಲೆ ವಿಶ್ವಾಸ ಇಡಬಹುದು. ಆದರೆ ಕೆಲವೊಮ್ಮೆ ಅವರಿಗೆ ಇಷ್ಟವಿಲ್ಲದ ವಿಷಯಗಳನ್ನು ಕೂಡ ನೀವು ಹೇಳಿಬಿಡುತ್ತೀರಿ.

ಇಬ್ಬರು ಹುಡುಗಿಯರು ಕಾರ್ಡ್​ ಆಡುತ್ತಿರುವಂತೆ ಈ ಚಿತ್ರದಲ್ಲಿ ಕಂಡರೆ, ನೀವು ಸ್ಪರ್ಧಾತ್ಮಕ ಮನೋಭಾವದವರು ಮತ್ತು ಆಶಾವಾದಿಗಳು ನಿಮ್ಮ ಮನಸ್ಸು ಸದಾ ಪ್ರಫುಲ್ಲತೆಯಿಂದ ಕೂಡಿರುತ್ತದೆ. ಪ್ರತಿಯೊಂದನ್ನು ಗೆಲ್ಲಲು ನೀವು ಬಯಸುತ್ತೀರಿ ಎಂದರ್ಥ.

ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ