ಪುಣೆ ಟ್ರಾಫಿಕ್ಕಿಗೆ ಬೇಸತ್ತು ಆಟೋದಲ್ಲಿ ಪ್ರಯಾಣಿಸಿದ ಮರ್ಸಿಡೀಸ್ ಇಂಡಿಯಾದ ಸಿಇಒ

Mercedes India : ಮರ್ಸಿಡೀಸ್​ ಇಂಡಿಯಾದ ಸಿಇಒ ಮಾರ್ಟಿನ್​ ಶ್ಚ್ವೆಂಕ್ ಪುಣೆಯ ಟ್ರಾಫಿಕ್‌ನಲ್ಲಿ ಸಿಲುಕಿದಾಗ ತಮ್ಮ ಅತ್ಯಾಧುನಿಕ ಕಾರಿನಿಂದ ಇಳಿದು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಪುಣೆ ಟ್ರಾಫಿಕ್ಕಿಗೆ ಬೇಸತ್ತು ಆಟೋದಲ್ಲಿ ಪ್ರಯಾಣಿಸಿದ ಮರ್ಸಿಡೀಸ್ ಇಂಡಿಯಾದ ಸಿಇಒ
ಮರ್ಸಿಡೀಸ್ ಇಂಡಿಯಾದ ಸಿಇಒ ಟ್ವೀಟ್ ಮಾಡಿದ ಈ ಫೋಟೋ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 01, 2022 | 10:18 AM

Viral : ಕೆಲ ತಿಂಗಳ ಹಿಂದೆ ನಿಧನರಾದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿಯವರ ಹಳೆಯ ಫೋಟೋ ಅವರ ಮರಣಾನಂತರ ವೈರಲ್ ಆಗಿತ್ತು. ಅವರು ಧಾಬಾವೊಂದರಲ್ಲಿ ತಮ್ಮ ಡ್ರೈವರ್​ನೊಂದಿಗೆ ಕುಳಿತು ಊಟ ಮಾಡುತ್ತಿರುವ ಫೋಟೋ ಅದಾಗಿತ್ತು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸಾಮಾಜಿಕವಾಗಿ ಉನ್ನತಮಟ್ಟದ ಜೀವನಶೈಲಿ ಸಾಗಿಸುತ್ತಿದ್ದರೂ ವೈಯಕ್ತಿಕವಾಗಿ ಮತ್ತು ಕೆಲ ವಿಷಯವಾಗಿ ಸಾಮಾನ್ಯರಂತೆ ಸರಳವಾಗಿ ಬದುಕುವುದನ್ನು ಅನೇಕರು ಇಷ್ಟಪಡುತ್ತಾರೆ ಮತ್ತು ರೂಢಿಸಿಕೊಂಡಿರುತ್ತಾರೆ. ಮೇಲಾಗಿ ಅಂಥ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Martin Schwenk (@martins_masala)

ಇತ್ತೀಚೆಗೆ ಮರ್ಸಿಡೀಸ್​ ಬೆಂಝ್​ ಇಂಡಿಯಾದ ಸಿಇಒ ಮಾರ್ಟಿನ್ ಶ್ಚ್ವೆಂಕ್ ಪುಣೆಯಲ್ಲಿ ತಮ್ಮ ಮರ್ಸಿಡೀಸ್ ಎಸ್-ಕ್ಲಾಸ್‌ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರು. ಗಂಟೆಗಟ್ಟಲೆ ಇಲ್ಲೇ ನಿಲ್ಲುವ ಬದಲಾಗಿ ಏನು ಮಾಡಬಹುದು ಎಂದು ಆಲೋಚಿಸುತ್ತಾ ತಮ್ಮ ಕಾರಿನಿಂದ ಇಳಿದೇ ಬಿಟ್ಟರು. ಕೆಲ ಕಿ.ಮೀ ನಡೆದ ಮೇಲೆ ಆಟೋ ಸಿಕ್ಕಿತು. ನಂತರ ಆಟೋ ಏರಿ ತಲುಪಬೇಕಾದ ಸ್ಥಳ ತಲುಪಿದರು. ಈ ವಿಷಯವನ್ನು ಅವರೇ ಆಟೋದ ಒಳಬದಿಯ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಅನೇಕ ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ ಒಬ್ಬರು, ಗಝನೀ ಸಿನೆಮಾದಲ್ಲಿ ಅಮೀರ್​ಖಾನ್​ ತಮ್ಮ ಗರ್ಲ್​ಫ್ರೆಂಡ್​ಅನ್ನು ಭೇಟಿಯಾಗಲು ಹೋಗುವ ದೃಶ್ಯ ನೆನಪಾಗುತ್ತಿದೆ ಎಂದಿದ್ದಾರೆ. ಆಟೋವಾಲಾ ಮೀಟರ್ ಹಾಕಿಕೊಂಡು ಗಾಡಿ ಓಡಿಸಿದರು ತಾನೆ? ಎಂದು ಮತ್ತೊಬ್ಬರು ಕೇಳಿದ್ಧಾರೆ. ಸರಿಯಾದ ಲೊಕೇಷನ್​ಗೆ ವಡಾ ಪಾವ್​ ಕೂಡ ಆರ್ಡರ್ ಮಾಡಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:15 am, Sat, 1 October 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್