Viral : ಆಂಧ್ರಪ್ರದೇಶ ಮೂಲದ ಯುವತಿಯೊಬ್ಬಳು ಗಂಡನ ಹಳೆಯ ಪ್ರೇಯಸಿಯೊಂದಿಗೆ ಆತನ ಮದುವೆ ಮಾಡಿದ ಅಪರೂಪದ ಘಟನೆ ನಡೆದಿದೆ. ಮದುವೆ ನಂತರ ಮೂವರೂ ಒಟ್ಟಿಗೇ ವಾಸಿಸುತ್ತಿದ್ದಾರೆ. ಹೌದು ನೀವು ಓದಿದ್ದು ಸರಿ ಇದೆ. ಇದು ಸತ್ಯಘಟನೆ. ನಿತ್ಯವೂ ಪ್ರೀತಿ, ಪ್ರೇಮ, ಮದುವೆ ಇಂಥ ವಿಷಯಗಳಲ್ಲಿ ಸಾಕಷ್ಟು ಅಪರಾಧ ಸುದ್ದಿಗಳನ್ನು ಕೇಳುತ್ತೇವೆ ನೋಡುತ್ತೇವೆ. ಆದರೆ ಈ ಘಟನೆ ಸುಖಾಂತ್ಯವಾಗಿದ್ದು ಮತ್ತು ಅಚ್ಚರಿಯ ತಿರುವನ್ನೂ ಪಡೆದುಕೊಂಡಿದೆ.
ವರದಿಗಳ ಪ್ರಕಾರ, ಸ್ನೇಹಿತರಾಗಿದ್ದ ಕಲ್ಯಾಣ್ ಮತ್ತು ವಿಮಲಾ ಕೆಲ ವರ್ಷಗಳ ಹಿಂದೆ ಪ್ರೇಮವಿವಾಹದ ಮೂಲಕ ದಾಂಪತ್ಯಜೀವನಕ್ಕೆ ಕಾಲಿಟ್ಟರು. ಕಲ್ಯಾಣ್ ತಿರುಪತಿಯ ದಕ್ಕಿಲಿಯ ಅಂಬೇಡ್ಕರ್ ನಗರದಲ್ಲಿ ಕಂಟೆಂಟ್ ಕ್ರಿಯೇಟರ್. ಈತನ ಪತ್ನಿ ವಿಮಲಾ ಕೂಡ ಇದೇ ಕೆಲಸದಲ್ಲಿ ತೊಡಗಿಕೊಂಡರು. ಯೂಟ್ಯೂಬ್ ಮತ್ತು ಶೇರ್ಚಾಟ್ನಂತರ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಈ ಜೋಡಿ ಸೃಷ್ಟಿಸುವ ಕಂಟೆಂಟ್ ಕ್ರಿಯೇಷನ್ ಖ್ಯಾತಿ ಪಡೆದುಕೊಂಡಿತು. ಈ ಮೂಲಕ ಇವರಿಬ್ಬರೂ ಜನಪ್ರಿಯ ಜೋಡಿಗಳಾದರು.
ಹೀಗಿರುವಾಗಲೇ ಇವರ ವೈಯಕ್ತಿಕ ಬದುಕಿನ ಕಥೆಯಲ್ಲಿ ವಿಚಿತ್ರ ತಿರುವು ಕಾಣಿಸಿಕೊಂಡಿದೆ. ಕಲ್ಯಾಣ್‌ನ ಹಳೆಯ ಗೆಳತಿ, ವಿಶಾಖಪಟ್ಟಣಂನ ನಿತ್ಯಾಶ್ರೀ ಈ ದಂಪತಿಯ ಮನೆಗೆ ತೆರಳಿ ಗಲಾಟೆ ಮಾಡಿದ್ದಾಳೆ.
ವರದಿಗಳ ಪ್ರಕಾರ, ನಿತ್ಯಾಶ್ರೀ ಕೂಡ ಕಂಟೆಂಟ್ ಕ್ರಿಯೇಟರ್. ಈ ಹಿಂದೆ ಕಲ್ಯಾಣ್ ಜೊತೆ ಸಂಬಂಧವನ್ನು ಹೊಂದಿದ್ದಳು. ಆದರೆ ಯಾವುದೋ ಕಾರಣದಿಂದ ಪರಸ್ಪರ ಬೇರೆಯಾಗಿ ಸಂಪರ್ಕ ಕಡಿದುಕೊಂಡರು. ಅದಾದ ನಂತರ ಕಲ್ಯಾಣ ವಿಮಲಾರನ್ನು ಮದುವೆಯಾಗಿ ಸಂಸಾರ ಶುರುಮಾಡಿದರು.
ಆದರೆ ನಿತ್ಯಾಶ್ರೀ ಇದ್ದಕ್ಕಿದ್ದಂತೆ ತನ್ನ ಹಳೆಯ ಪ್ರೇಮಿಯ ಮನೆಗೆ ತೆರಳಿ, ಆತ ವಿವಾಹಿತನೆಂದು ತಿಳಿದರೂ ಆತನ ಹೆಂಡತಿ ವಿಮಲಾಳ ಬಳಿ ತನ್ನ ವಿಚಿತ್ರ ಕೋರಿಕೆಯನ್ನು ತೋಡಿಕೊಂಡಳು; ಕಲ್ಯಾಣ್ನನ್ನು ಮದುವೆಯಾಗಲು ಅನುಮತಿ ಕೊಡುವಂತೆ ನಿತ್ಯಾಶ್ರೀ ವಿಮಲಾಳನ್ನು ವಿನಂತಿಸಿಕೊಂಡಳು. ವಿಮಲಾ ಅವಳ ವಿನಂತಿಯನ್ನು ನಿರಾಕರಿಸದೆ ತಾನೇ ಮುಂದೆ ನಿಂತು ಅವರಿಬ್ಬರ ಮದುವೆಯನ್ನು ಮಾಡಿಸಿದಳು. ಇದೀಗ ಮೂವರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:56 pm, Sat, 1 October 22