Video Viral: ಬಸ್​​ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಕಿಟಕಿ ಮೂಲಕ ಹತ್ತಿದ ಮಹಿಳೆ

ವೈರಲ್​​ ಆಗಿರುವ ವಿಡಿಯೋದಲ್ಲಿ ,ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರು ಕುಳಿತಿರುವುದನ್ನು ಕಾಣಬಹುದು. ಆದರೆ ಬಸ್​​ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಕಿಟಕಿ ಮೂಲಕ ಹತ್ತಿದ್ದಾಳೆ. ಸೀರೆಯುಟ್ಟ ಮಹಿಳೆ ಬಸ್ಸಿನ ಹಿಂಬದಿಯ ಕಿಟಿಕಿಯಿಂದ ಬಸ್ಸು ಹತ್ತುತ್ತಿರುವ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

Video Viral: ಬಸ್​​ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಕಿಟಕಿ ಮೂಲಕ ಹತ್ತಿದ ಮಹಿಳೆ

Updated on: Aug 16, 2024 | 5:22 PM

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ ಬೆನ್ನಲ್ಲೇ ಬಸ್ಸಿನಲ್ಲಿ ಮಹಿಳೆಯರು ನಾನಾ ರೀತಿಯಲ್ಲಿ ಅವತಾರಗಳನ್ನಾಡುವ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬಸ್ಸಿನ ಕಿಟಕಿಯಿಂದ ಹತ್ತುತ್ತಿರುವುದು ಸೆರೆಯಾಗಿದೆ.

@ChourePrafull ಎಂಬ ಟ್ವಟಿರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ಆಗಸ್ಟ್​​ 14ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಜೊತೆಗೆ ಸಾಕಷ್ಟು ನೆಟ್ಟಿಗರು ” ಫ್ರೀ ಬಸ್​​ ಎಫೆಕ್ಟ್​​​​​​” ಎಂದು ಕಾಮೆಂಟ್​​ನಲ್ಲಿ ಬರೆದಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ನಾಯಿ ಮಾಡಿದ ಕಿತ್ತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ

ವೈರಲ್​​ ಆಗಿರುವ ವಿಡಿಯೋದಲ್ಲಿ ,ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರು ಕುಳಿತಿರುವುದನ್ನು ಕಾಣಬಹುದು. ಆದರೆ ಬಸ್​​ ಹತ್ತಲು ಬಿಡಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಕಿಟಕಿ ಮೂಲಕ ಹತ್ತಿದ್ದಾಳೆ. ಸೀರೆಯುಟ್ಟ ಮಹಿಳೆ ಬಸ್ಸಿನ ಹಿಂಬದಿಯ ಕಿಟಿಕಿಯಿಂದ ಬಸ್ಸು ಹತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ಸಿನಲ್ಲಿ ಕುಳಿತಿರುವ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಮಹಿಳೆ ಬಸ್ಸು ಹತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us