Viral Video: ನಾಯಿ ಮಾಡಿದ ಕಿತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ

ಮನೆಯೊಳಗೆ ಆಟವಾಡುತ್ತಿದ್ದ ನಾಯಿ ಸೋಫಾದ ಮೇಲೆ ಇರಿಸಲಾದ ಲಿಥಿಯಂ ಬ್ಯಾಟರಿಯನ್ನು ಅಗಿಯಲು ಪ್ರಾರಂಭಿಸಿದೆ. ಇದಕ್ಕಿದ್ದಂತೆ ಬ್ಯಾಟರಿಯಿಂದ ಸ್ಪಾರ್ಕ್ ಉಂಟಾಗಿದ್ದು, ಕೆಲ ಕ್ಷಣದಲ್ಲಿ ಹಾಸಿಗೆ ಸೋಫಾ ಸುಟ್ಟು ಭಸ್ಮವಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Follow us
ಅಕ್ಷತಾ ವರ್ಕಾಡಿ
|

Updated on:Aug 09, 2024 | 11:15 AM

ಅನೇಕರಿಗೆ ಮನೆಯಲ್ಲಿ ಎಲ್ಲೆಂದರಲ್ಲಿ ವಸ್ತುಗಳನ್ನು ಇಡುವ ಅಭ್ಯಾಸವಿರುತ್ತದೆ. ನಿಮಗೂ ಇಂತಹ ಅಭ್ಯಾಸವಿದ್ದರೆ ಜಾಗರೂಕರಾಗಿರಿ. ಏಕೆಂದರೆ, ಇದು ಗಂಭೀರ ಪರಿಣಾಮಗಳನ್ನೂ ಉಂಟುಮಾಡಬಹುದು. ಅಮೆರಿಕದ ಒಕ್ಲಹೋಮಾದಿಂದ ಇಂತಹದೊಂದು ವಿಡಿಯೋ ಹೊರಬಿದ್ದಿದ್ದು, ಒಂದು ಕ್ಷಣ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ.

ಅಮೆರಿಕದ ಒಕ್ಲಹೋಮ ರಾಜ್ಯದ ತುಲ್ಸಾ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೀಡಿಯೊದ ಆರಂಭದಲ್ಲಿ, ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಲಿವಿಂಗ್ ರೂಮ್‌ನಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ನಾಯಿಯೊಂದು ಸೋಫಾದ ಮುಂಭಾಗದ ಹಾಸಿಗೆಯ ಮೇಲೆ ಇರಿಸಲಾದ ಲಿಥಿಯಂ ಬ್ಯಾಟರಿಯನ್ನು ಅಗಿಯಲು ಪ್ರಾರಂಭಿಸುತ್ತದೆ. ಇದಕ್ಕಿದ್ದಂತೆ ಬ್ಯಾಟರಿಯಿಂದ ಸ್ಪಾರ್ಕ್ ಉಂಟಾಗಿದ್ದು, ಕೆಲ ಕ್ಷಣದಲ್ಲಿ ಹಾಸಿಗೆ ಸೋಫಾ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ನಾಯಿ ಹಾಗೂ ಬೆಕ್ಕಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: ಕ್ರಾಪ್ ಓವರ್ ಫೆಸ್ಟಿವಲ್​​ನಲ್ಲಿ ಪಾಪ್ ಗಾಯಕಿ ರಿಹಾನ್ನಾ ಅವತಾರ ಹೇಗಿದೆ ನೋಡಿ

ಈ 37 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ತುಲ್ಸಾ ಅಗ್ನಿಶಾಮಕ ಇಲಾಖೆ ಬಿಡುಗಡೆ ಮಾಡಿದೆ. ಇದರೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿಗಳ ಅಪಾಯದ ಬಗ್ಗೆಯೂ ಇಲಾಖೆ ಜನರಿಗೆ ಅರಿವು ಮೂಡಿಸಿದೆ. ಅಗಸ್ಟ್​​​ 7ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 19.3 ಮಿಲಿಯನ್ ಅಂದರೆ 1ಕೋಟಿಯ 93ಲಕ್ಷ ​​​ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Thu, 8 August 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು