Video: ಹೈ ಸ್ಪೀಡ್ ರೈಡಿಂಗ್, ನಿಯಂತ್ರಣ ತಪ್ಪಿ ಬೈಕ್​ನಿಂದ ಮಾರುದ್ದ ದೂರಕ್ಕೆ ಬಿದ್ದ ಯುವತಿ; ಭೀಕರ ಅಪಘಾತ ವಿಡಿಯೋ ಇಲ್ಲಿದೆ ನೋಡಿ

Video: ಹೈ ಸ್ಪೀಡ್ ರೈಡಿಂಗ್, ನಿಯಂತ್ರಣ ತಪ್ಪಿ ಬೈಕ್​ನಿಂದ ಮಾರುದ್ದ ದೂರಕ್ಕೆ ಬಿದ್ದ ಯುವತಿ; ಭೀಕರ ಅಪಘಾತ ವಿಡಿಯೋ ಇಲ್ಲಿದೆ ನೋಡಿ

ಅಕ್ಷತಾ ವರ್ಕಾಡಿ
|

Updated on: Aug 08, 2024 | 12:33 PM

ಅತೀ ವೇಗದಲ್ಲಿದ್ದ ಬೈಕ್​​​ ಆಕೆ ಬಿದ್ದ ಜಾಗದಿಂದ ಸಾಕಷ್ಟು ದೂರಕ್ಕೆ ಹೋಗಿ ಡಿವೈಡರ್​​ ಡಿಕ್ಕಿ ಹೊಡೆದು ನಿಂತಿದೆ. ಅಗಸ್ಟ್​​​ 07ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 23.3 ಮಿಲಿಯನ್​​ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಭೀಕರ ರಸ್ತೆ ಅಪಘಾತದ ವಿಡಿಯೊವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​​ ಆಗಿದೆ. ವೇಗವಾಗಿ ಬಂದ ಬೈಕ್​​ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದಿದ್ದು, ಬೈಕ್​​​ನಲ್ಲಿದ್ದ ಯುವತಿ ರಸ್ತೆಗೆ ಬಿದ್ದಿದ್ದಾಳೆ. ಹೆಲ್ಮೆಟ್​​​ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬೈಕ್​​ನಲ್ಲಿದ್ದ ಕ್ಯಾಮೆರಾದಲ್ಲಿ ಭೀಕರ ಅಪಘಾತದ ಘಟನೆ ಸೆರೆಯಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​​ ಆಗಿರುವ ವಿಡಿಯೊದಲ್ಲಿ ಯುವತಿ ಸ್ಪೋರ್ಟ್ ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಕಾಣಬಹುದು. ಆದರೆ ಇದ್ದಕ್ಕಿದ್ದಂತೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಅತೀ ವೇಗದಲ್ಲಿದ್ದ ಬೈಕ್​​​ ಆಕೆ ಬಿದ್ದ ಜಾಗದಿಂದ ಸಾಕಷ್ಟು ದೂರಕ್ಕೆ ಹೋಗಿ ಡಿವೈಡರ್​​ ಡಿಕ್ಕಿ ಹೊಡೆದು ನಿಂತಿದೆ. ಯುವತಿ ಹೆಲ್ಮೆಟ್​​ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

@FAFO_TV ಎಂಬ ಟ್ವಟಿರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು,ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ. ಅಗಸ್ಟ್​​​ 07ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 23.3 ಮಿಲಿಯನ್​​ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮತ್ತಷ್ಟು ಓದಿ: Watch Video: ಇದು ಎಂಜಲು ಉಗುಳಿ ಮಸಾಜ್ ಮಾಡುವ ಸಲೂನ್, ವಿಡಿಯೋ ವೈರಲ್