Watch Video: ಇದು ಎಂಜಲು ಉಗುಳಿ ಮಸಾಜ್ ಮಾಡುವ ಸಲೂನ್, ವಿಡಿಯೋ ವೈರಲ್
Viral Video: ಸಲೂನ್ನಲ್ಲಿ ಕ್ಷೌರಿಕನೊಬ್ಬ ತನ್ನ ಗ್ರಾಹಕನ ಬಳ್ಳಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಎಂಜಲು ಉಗುಳು ಮುಖಕ್ಕೆ ಮಸಾಜ್ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡಿದೆ.
ಕ್ಷೌರಿಕನೊಬ್ಬ ತನ್ನ ಎಂಜಲು ಉಗುಳಿ ವ್ಯಕ್ತಿಗೆ ಮಸಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಆಘಾತ ತಂದಿದೆ. ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಘಟನೆ ನಡೆದಿದೆ. ಸಲೂನ್ನಲ್ಲಿ ಕೆಲಸ ಮಾಡುವ ಕ್ಷೌರಿಕನೊಬ್ಬ ಗ್ರಾಹಕರೊಬ್ಬರಿಗೆ ಎಂಜಲಿನ ಮೂಲಕ ಮಸಾಜ್ ಮಾಡುತ್ತಿರುವ ವಿಡಿಯೋವನ್ನು ಅಲ್ಲಿರುವವರು ಚಿತ್ರಿಸಿದ್ದಾರೆ ಎನ್ನಲಾಗುತ್ತಿದೆ.
ಈ ವಿಡಿಯೋ ಸುಮಾರು 15ದಿನಗಳ ಹಳೆಯದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿ ಸಲೂನ್ ಬಾಗಿಲು ಹಾಕಿ ತಲೆಮರೆಸಿಕೊಂಡಿದ್ದಾನೆ. ಕನ್ನೌಜ್ ಪೊಲೀಸರ ಪ್ರಕಾರ, ಈ ವೀಡಿಯೊ ನಗರದ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬ್ರಮೌ ಬಳಿ ಇರುವ ಸಲೂನ್ ಇದಾಗಿದೆ.
ಈ ವಿಡಿಯೋವನ್ನು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸ್ವತಃ ತಾನೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋಕ್ಕೆ ಈ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಈ ಘಟನೆಯನ್ನು ಸ್ಪಿಟ್ ಜಿಹಾದ್ ಎಂದು ಟ್ಯಾಗ್ ಮಾಡಿದ್ದಾರೆ. ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮತ್ತಷ್ಟು ಓದಿ: Viral Video: ಛೀ ಎಂಥಾ ಹೇಯ ಕೃತ್ಯವಿದು, ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಕ್ಷೌರಿಕ
ಈ ಘಟನೆಯ ಕುರಿತು ಎಸ್ಪಿ ಕನೌಜ್ ಅವರು ಪ್ರಕರಣದ ತನಿಖೆಯನ್ನು ತರಬೇತಿ ಸಿಒ ಕಪೂರ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಲಕ್ನೋದಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು, ಝೈದ್ ಎಂಬಾತ ಗ್ರಾಹಕರಿಗೆ ಎಂಜಲು ಉಗುಳಿ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿತ್ತು, ಬಳಿಕ ಅವರನ್ನು ಬಂಧಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Wed, 7 August 24