Viral Video: ಛೀ ಎಂಥಾ ಹೇಯ ಕೃತ್ಯವಿದು, ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಕ್ಷೌರಿಕ

ಈ ಹಿಂದೆ ಎಂಜಲು ಉಗಿದು ಹಣ್ಣು ಮಾರುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದೀಗ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಅದೇ ರೀತಿಯ ಆಘಾತಕಾರಿ ಘಟನೆಯೊಂದು ನಡೆದಿದ್ದು,  ಇಲ್ಲಿನ ಕ್ಷೌರದಂಗಡಿಯ ಕ್ಷೌರಿಕನೊಬ್ಬ ಗ್ರಾಹಕನಿಗೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ್ದಾನೆ. ಈತನ ಈ ಹೇಯ  ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ  ಪೊಲೀಸರು ಆತನನ್ನು ಬಂಧಿಸಿದ್ದಾನೆ. 

Viral Video: ಛೀ ಎಂಥಾ ಹೇಯ ಕೃತ್ಯವಿದು, ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ  ಕ್ಷೌರಿಕ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 15, 2024 | 3:21 PM

ಈಗೀಗ ಮಹಿಳೆಯರಂತೆ ಪುರುಷರೂ ಕೂಡಾ ತಮ್ಮ ಸೌಂದರ್ಯ,  ತ್ವಚೆ ಮತ್ತು ಕೂದಲ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಸೆಲೂನ್‌ಗೆ ಹೋದಾಗ  ಕೇವಲ ಹೇರ್‌ ಕಟ್‌ ಮಾಡಿಸಿಕೊಂಡು ಬರುವ  ಕಾಲವೊಂದದಿತ್ತು. ಆದರೆ ಈಗ ಕಾಲ ಬದಲಾಗಿದೆ. ಪುರುಷರು ಕೂಡಾ ಹೇರ್‌ ಕಟ್‌ ಜೊತೆಗೆ  ಫೇಶಿಯಲ್‌, ಫೇಸ್‌ ಮಸಾಜ್‌ ಮಾಡಿಸಿಕೊಳ್ಳುತ್ತಿರುತ್ತಾರೆ.  ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತನ್ನ ಸೌಂದರ್ಯವನ್ನು ಹೆಚ್ಚಿಸಲು ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಂಡಿದ್ದಾನೆ. ಆದರೆ ಅಲ್ಲಿನ ಕ್ಷೌರಿಕ ಎಂಜಲು ಉಗಿದು ಫೇಸ್ ಮಸಾಜ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಕುರಿತ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ನಡೆದಿದ್ದು, ಇಲ್ಲಿನ ಸೆಲೂನ್ ಒಂದರ ಕ್ಷೌರಿಕ ಅಮ್ಜದ್ ಎಂಜಲು ಉಗುಳಿ ತನ್ನ ಗ್ರಾಹಕರಿಗೆ ಫೇಸ್ ಮಸಾಜ್ ಮಾಡಿದ್ದಾನೆ. ಈತನ ಕೃತ್ಯದ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಎಫ್.ಐ.ಆರ್ ದಾಖಲಿಸಿ ಪೊಲೀಸರು ಅಮ್ಜದ್ನನ್ನು ಬಂಧಿಸಿದ್ದಾರೆ. ಈತನ ಈ ಕೃತ್ಯದಿಂದ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದು, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವೈರಲ್​​ ವಿಡಿಯೋ:

@TruestoryUP ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಎಂಜಲು ಮಿಕ್ಸ್ ಮಾಡಿ ಫೇಸ್ ಮಸಾಜ್ ಮಾಡಿದ ಕ್ಷೌರಿಕ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಫ್.ಐ.ಆರ್ ದಾಖಲಿಸಿ ಆರೋಪಿ ಅಮ್ಜದ್ನನ್ನು ಬಂಧಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಸಿಂಹದೊಂದಿಗೆ ದಡೂತಿ ದೇಹದ ಯುವಕನ ಹಗ್ಗಜಗ್ಗಾಟ, ಆಟದಲ್ಲಿ ಗೆದ್ದವರ್‍ಯಾರು? 

ವೈರಲ್ ವಿಡಿಯೋದಲ್ಲಿ ಅಮ್ಜದ್ ತನ್ನ ಗ್ರಾಹಕರೊಬ್ಬರಿಗೆ ಫೇಸ್ ಮಸಾಜ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಮಸಾಜ್ ಮಾಡುತ್ತಾ ಕೈ ಮೇಲೆ ಎಂಜಲು ಉಗಿದು ಅದನ್ನು ಮಿಕ್ಸ್ ಮಾಡಿ ಗ್ರಾಹಕನಿಗೆ ಫೇಸ್ ಮಸಾಜ್  ಮಾಡಿದ್ದಾನೆ.

ಜೂನ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 16 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈತನ ಹೇಯ ಕೃತ್ಯದ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:11 pm, Sat, 15 June 24