Viral Video: ಸಿಂಹದೊಂದಿಗೆ ದಡೂತಿ ದೇಹದ ಯುವಕನ ಹಗ್ಗಜಗ್ಗಾಟ, ಆಟದಲ್ಲಿ ಗೆದ್ದವರ್‍ಯಾರು?
ಸಿಂಹ ದೂರದಲ್ಲಿ ನಿಂತು ಗರ್ಜಿಸಿದರೇನೇ ಸಾಕು ನಮ್ಮ ಜೀವ ಹೋದಂತೆ ಭಾಸವಾಗುತ್ತದೆ. ಇನ್ನೂ ಈ ಕಾಡಿನ ರಾಜನ ಶಕ್ತಿ ಎಂತಹದ್ದು ಎಂದು ಎಲ್ಲರಿಗೂ ಗೊತ್ತು. ಇದೀಗ ಸಿಂಹವು ಎಷ್ಟು ಬಲಿಷ್ಠ ಪ್ರಾಣಿ ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಮನುಷ್ಯ ಮತ್ತು ಸಿಂಹದ ನಡುವಿನ ಹಗ್ಗಜಗ್ಗಾಟ ಪಂದ್ಯಾಟವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಸಿಂಹ ಇಡೀ ಕಾಡಿಗೆ ರಾಜ. ಕಾಡಿನ ನಡುವೆ ಸಿಂಹವು ರಾಜನಂತೆ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬರುವ ನೋಟವೇ ನೋಡಲು ಸುಂದರ. ಇಂತಹ ಸಾಕಷ್ಟು ದೃಶ್ಯಗಳನ್ನು ನೀವು ನೋಡಿರಬಹುದು. ಆದ್ರೆ ಯಾವತ್ತಾದ್ರೂ ನೀವು ಸಿಂಹ ಹಗ್ಗಜಗ್ಗಾಟ ಪಂದ್ಯವನ್ನು ಆಡುವಂತಹ ದೃಶ್ಯವನ್ನು ನೋಡಿದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ಒಮ್ಮೆ ನೋಡಿ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಲಿಷ್ಠ ಸಿಂಹದೊಂದಿಗೆ ದಡೂತಿ ದೇಹದ ಯುವಕನೊಬ್ಬ ಹಗ್ಗಜಗ್ಗಾಟವಾಡಿರುವ ದೃಶ್ಯವನ್ನು ಕಾಣಬಹುದು. ವೈರಲ್ ದೃಶ್ಯದಲ್ಲಿ ಸಿಂಹದ ಶಕ್ತಿ ಪ್ರದರ್ಶನವನ್ನು ಕಂಡು ನೋಡುಗರು ದಂಗಾಗಿದ್ದಾರೆ.
@AMAZINGNATURE ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯಾವುದೋ ಒಂದು ಝೂನಲ್ಲಿ ದಡೂತಿ ದೇಹದ ವ್ಯಕ್ತಿಯೊಬ್ಬ ಬಲಿಷ್ಠ ಸಿಂಹದೊಂದಿಗೆ ಹಗ್ಗಜಗ್ಗಾಟವಾಡುವ ದೃಶ್ಯವನ್ನು ಕಾಣಬಹುದು. ಸಿಂಹವಿದ್ದ ಬೃಹತ್ ಬೋನಿಗೆ ಒಂದು ಹಗ್ಗವನ್ನು ಹಾಕಿ ಇತ್ತ ಕಡೆ ಹಗ್ಗವನ್ನಿಡಿದು ದಷ್ಟಪುಷ್ಟವಾಗಿರುವ ವ್ಯಕ್ತಿಯೊಬ್ಬ ನಿಂತಿರುತ್ತಾನೆ. ಸಿಂಹ ಹಗ್ಗದ ಬಳಿ ಬಂದು ಅದನ್ನು ಬಾಯಲ್ಲಿ ಕಚ್ಚಿ ಹಿಡಿಯುತ್ತದೆ. ಆ ತಕ್ಷಣ ಅತ್ತ ಕಡೆಯಿಂದ ಆ ಯುವಕ ಹಗ್ಗವನ್ನು ಎಳೆಯಲು ಆರಂಭಿಸುತ್ತಾನೆ. ನಾನೇನು ಕಮ್ಮಿಯಿಲ್ಲ ಎಂದು ಸಿಂಹವೂ ಹಗ್ಗವನ್ನು ಗಡ್ಡಿಯಾಗಿ ಹಿಡಿದೆಳೆಯುತ್ತದೆ. ಮೊದಲನೇ ಬಾರಿಗೆ ಸೋತರೂ, ಎರಡನೇ ಬಾರಿಗೇ ಸಿಂಹ ತನ್ನ ಸೋಲನ್ನು ಒಪ್ಪಿಕೊಳ್ಳದೆ ಹಗ್ಗವನ್ನು ಗಟ್ಟಿಯಾಗಿ ಬಾಯಲ್ಲಿ ಕಚ್ಚಿ ಹಿಡಿದು ನಿಲ್ಲುತ್ತದೆ. ಕೊನೆಯಲ್ಲಿ ಯುವಕನೇ ಸಿಂಹದ ಶಕ್ತಿಗೆ ಶರಣಾಗುತ್ತಾನೆ.
ಇದನ್ನೂ ಓದಿ: ಏಕಾಏಕಿ ಗ್ಲಾಸ್ ಹೊಡೆದು ಬಸ್ಸಿನೊಳಗೆ ನುಗ್ಗಿದ ಜಿಂಕೆ, ಇಲ್ಲಿದೆ ಅತ್ಯಂತ ಭಯಾನಕ ವಿಡಿಯೋ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Tiger tug-o-war! Zoo gives visitors the chance to test their strength pic.twitter.com/chSmqaTE8f
— Nature is Amazing ☘️ (@AMAZlNGNATURE) June 13, 2024
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಲಿಷ್ಠ ಸಿಂಹದ ಅಪಾರ ಶಕ್ತಿಯನ್ನು ಕಂಡು ನೋಡುಗರು ಬೆರಗಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: