AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಹಾಯ್​​ ಫ್ರೆಂಡ್ಸ್ ಮೆಲೋಡಿ ಟೀಮ್’​​​, ಮೋದಿ ಜತೆಗೆ ಖುಷಿ ಖುಷಿಯಾಗಿ ವಿಡಿಯೋ ಮಾಡಿದ ಇಟಲಿ ಪ್ರಧಾನಿ ಮೆಲೋನಿ

ಕಳೆದ ವರ್ಷ ಯುಎಇಯಲ್ಲಿ ಶೃಂಗಸಭೆ ವೇಳೆ ಮೋದಿ ಜೊತೆಗೆ ಮೆಲೋನಿ ಸೆಲ್ಫಿ ತೆಗೆದುಕೊಂಡಿದ್ದರು. ಇದಲ್ಲದೇ ಈ ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, #melodi ಎಂಬ ಹ್ಯಾಷ್‌ಟ್ಯಾಗ್ ಬಳಸಿಕೊಂಡಿದ್ದರು. ಈ 'ಮೆಲೋಡಿ' ಇಂಟರ್ನೆಟ್‌ನಲ್ಲಿ ಸಖತ್​​​ ಟ್ರೆಂಡ್ ಆಗಿತ್ತು. ಇದೀಗ ಮತ್ತೆ ಇಂದು (ಜೂನ್​​ 15) ಪ್ರಧಾನಿ ಮೆಲೋನಿ ಮೋದಿ ಜೊತೆಗಿನ ಹೊಸ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾರೆ.

Viral Video: 'ಹಾಯ್​​ ಫ್ರೆಂಡ್ಸ್ ಮೆಲೋಡಿ ಟೀಮ್'​​​, ಮೋದಿ ಜತೆಗೆ ಖುಷಿ ಖುಷಿಯಾಗಿ ವಿಡಿಯೋ ಮಾಡಿದ ಇಟಲಿ ಪ್ರಧಾನಿ ಮೆಲೋನಿ
Hello from Melodi team
Follow us
ಅಕ್ಷತಾ ವರ್ಕಾಡಿ
|

Updated on: Jun 15, 2024 | 1:15 PM

ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪ್ರಧಾನಿ ಮೋದಿಯವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಲ್ಲದೇ ವಿಡಿಯೋವೊಂದನ್ನು ಮಾಡಿದ್ದು, ಸ್ವತಃ ಇಟಲಿ ಪ್ರಧಾನಿ ಮೆಲೋನಿ ತಮ್ಮ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. “ಹಾಯ್ ಫ್ರಮ್​​​ ದಿ​​ ಮೆಲೋಡಿ ಟೀಮ್​​​” ಎಂದು ಮೋದಿ ಜತೆಗೆ ಖುಷಿ ಖುಷಿಯಾಗಿ ಮೆಲೋನಿ ವಿಡಿಯೋ ಮಾಡಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ಶೃಂಗಸಭೆ ವೇಳೆ ಮೋದಿ ಜೊತೆಗೆ ಮೆಲೋನಿ ಸೆಲ್ಫಿ ತೆಗೆದುಕೊಂಡಿದ್ದರು. ಇದಲ್ಲದೇ ಈ ಫೋಟೋವನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, #melodi ಎಂಬ ಹ್ಯಾಷ್‌ಟ್ಯಾಗ್ ಬಳಸಿಕೊಂಡಿದ್ದರು. ಈ ‘ಮೆಲೋಡಿ’ ಇಂಟರ್ನೆಟ್‌ನಲ್ಲಿ ಸಖತ್​​​ ಟ್ರೆಂಡ್ ಆಗಿತ್ತು. ಇದಲ್ಲದೇ ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ ಹಾಗೂ ಮೆಲೋನಿ ಅವರ ಸ್ನೇಹ ಸಾಕಷ್ಟು ಗಮನ ಸೆಳೆದಿತ್ತು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಶ್ವ ನಾಯಕರ ನಡುವೆ ಮಿಂಚಿದ ಪ್ರಧಾನಿ ಮೋದಿ

ಇದೀಗ ಮತ್ತೆ ಇಂದು (ಜೂನ್​​ 15) ಪ್ರಧಾನಿ ಮೆಲೋನಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಹಾಯ್​​ ಫ್ರೆಂಡ್ಸ್ ಮೆಲೋಡಿ ಟೀಮ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೋದಿ ಹಾಗೂ ಮೆಲೋನಿ ಅವರ ಸ್ನೇಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: