Viral Video: ಫ್ಯಾಮಿಲಿ ಜತೆ ಹೋಟೆಲ್​​​ಗೆ ಬಂದ ವ್ಯಕ್ತಿಗೆ ಹೃದಯಾಘಾತ, ತುತ್ತು ಅನ್ನ ತಿನ್ನುವ ಮೊದಲೇ ಬಲಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುವ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಿವೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು,   ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೇಲ್ಗೆ ಬಂದು, ಖುಷಿ ಖುಷಿಯಲ್ಲಿ ಮಾತನಾಡುತ್ತ ಇನ್ನೇನು ತುತ್ತು ಅನ್ನವನ್ನು ಬಾಯಲ್ಲಿ ಇಡಬೇಕು ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಪ್ರಾಣವನ್ನೇ ಬಿಟ್ಟಿದ್ದಾರೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ಫ್ಯಾಮಿಲಿ ಜತೆ ಹೋಟೆಲ್​​​ಗೆ ಬಂದ ವ್ಯಕ್ತಿಗೆ ಹೃದಯಾಘಾತ, ತುತ್ತು ಅನ್ನ ತಿನ್ನುವ ಮೊದಲೇ ಬಲಿ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 15, 2024 | 3:45 PM

ಹುಟ್ಟು ಸಾವು ಪ್ರಕೃತಿಯ ನಿಯಮ. ಮನುಷ್ಯ ಯಾವಾಗ ಹುಟ್ಟಬಹುದು ಎಂಬುದನ್ನು ಹೇಳಬಹುದು, ಆದರೆ ಮನುಷ್ಯ ಯಾವಾಗ ಸಾಯುತ್ತಾನೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹೌದು ಈ ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಸಾವು ಯಾವಾಗ ಬೇಕಾದರೂ ನಮ್ಮನ್ನು ಕರೆಯಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ತೀರಾ ಹೆಚ್ಚಿದ್ದು, ಮಕ್ಕಳು, ಯುವಕರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನವದರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೇಲ್ಗೆ ಬಂದು, ಖುಷಿ ಖುಷಿಯಲ್ಲಿ ಮಾತನಾಡುತ್ತ ಇನ್ನೇನು ತುತ್ತು ಅನ್ನವನ್ನು ಬಾಯಲ್ಲಿ ಇಡಬೇಕು ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಪ್ರಾಣವನ್ನೇ ಬಿಟ್ಟಿದ್ದಾರೆ. ಈ ಆಘಾತಕಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಕಳೆದ ವರ್ಷ ಡಿಸೆಂಬರ್ನಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗುತ್ತಿದೆ. ರೆಸ್ಟೋರೆಂಟ್ ಒಂದಕ್ಕೆ ಕುಟುಂಬ ಸಮೇತ ಊಟಕ್ಕೆ ಬಂದಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಈ ದೃಶ್ಯ ಅಲ್ಲಿದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಿಯಾ ಸಿಂಗ್ (@priyarajputlive) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕುಟುಂಬ ಸಮೇತ ರೆಸ್ಟೋರೆಂಟ್ಗೆ ಬಂದಂತಹ ವ್ಯಕ್ತಿಯೊಬ್ಬರು ಅವರೆಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಮಾತನಾಡುತ್ತಿರುವಾಗ ಅವರು ಆರ್ಡರ್ ಮಾಡಿದಂತಹ ಫುಡ್ ಬರುತ್ತದೆ. ಇನ್ನೇನೂ ತುತ್ತು ಅನ್ನವನ್ನು ಬಾಯಲ್ಲಿಡಬೇಕು ಅನ್ನುವಷ್ಟರಲ್ಲಿ ಆ ಮಧ್ಯವಯಸ್ಸಿನ ವ್ಯಕ್ತಿ ಹೃದಯಾಘಾತಕ್ಕೆ ತುತ್ತಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ಯುವಕನಿಗೆ ವಿಷಕಾರಿ ಹಾವು ಕಡಿತ; ಕೋಪದಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಕಿದ ಭೂಪ

ಜೂನ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 89 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಆಘಾತಕಾರಿ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ